Connect with us

Cinema

ಸಿಂಹದ ಮರಿ ಜೊತೆಗಿನ ಫೋಟೋ ಬಗ್ಗೆ ಟ್ರೋಲ್ ಮಾಡಿದವ್ರಿಗೆ ಸಖತ್ ಉತ್ತರ ಕೊಟ್ರು ಪ್ರೀತಿ ಜಿಂಟಾ

Published

on

Share this

ನವದೆಹಲಿ: ಸಿಂಹದ ಮರಿ ಜೊತೆಗಿನ ಫೋಟೋ ಹಾಕಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ಜಿಂಟಾ ಟ್ರೋಲ್‍ಗೊಳಗಾಗಿದ್ದಾರೆ. ಹಾಗೇ ಟ್ರೋಲ್ ಮಾಡಿದವರಿಗೆ ಸಖತ್ ಉತ್ತರವನ್ನೂ ಕೊಟ್ಟಿದ್ದಾರೆ.

ಇತ್ತೀಚೆಗೆ ಪ್ರೀತಿ ಜಿಂಟಾ ದಕ್ಷಿಣ ಆಫ್ರಿಕಾದಲ್ಲಿ ಸಿಂಹದ ಮರಿ ಜೊತೆಗೆ ತೆಗೆಸಿಕೊಂಡ ಫೋಟೋವನ್ನ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ರು. “ದಕ್ಷಿಣ ಆಫ್ರಿಕಾದಲ್ಲಿ ಹೊಸ ಗೆಳೆಯರು. ಇದಕ್ಕಿಂತ ಅದ್ಭುತವಾದುದು ಮತ್ತೊಂದಿಲ್ಲ” ಅಂತ ಪೋಸ್ಟ್ ಮಾಡಿದ್ದರು. ಇದಕ್ಕೆ ಕೆಲವರು ಚೆನ್ನಾಗಿದೆ ಅಂತ ಕಮೆಂಟ್ ಮಾಡಿದ್ದರೆ ಇನ್ನೂ ಕೆಲವರು ಟ್ರೋಲ್ ಮಾಡಿದ್ದಾರೆ. ಒಬ್ಬ ಬಳಕೆದಾರ, ಸಾಮಾನ್ಯವಾಗಿ ಪ್ರಾಣಿಗಳಿಗೆ ಡ್ರಗ್ಸ್ ನೀಡಲಾಗಿರುತ್ತದೆ. ನಿಮಗೆ ಇದು ಸುಂದರವಾದ ಅನುಭವವಿರಬಹುದು. ಆದ್ರೆ ಆ ಪ್ರಾಣಿಗಲ್ಲ ಅಂತ ಕಮೆಂಟ್ ಮಾಡಿದ್ದರು.

ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ ಪ್ರೀತಿ, ಈ ಸಿಂಹದ ಮರಿಗೆ ಯಾವುದೇ ಡ್ರಗ್ ನೀಡಿಲ್ಲ. ಬಿಸಿಲಿನಿಂದ ಸ್ವಲ್ಪ ನಿದ್ದೆ ಮೂಡ್‍ನಲ್ಲಿದೆ ಅಷ್ಟೇ. ಜೀವನದಲ್ಲಿ ಎಲ್ಲವೂ ಪಿತೂರಿ ಅಥವಾ ಕೆಟ್ಟದ್ದಲ್ಲ. ಏನೋ ತೀರ್ಮಾನಕ್ಕೆ ಜಿಗಿಯೋ ಮುನ್ನ ಕೆಲವೊಂದು ಸಂಗತಿಗಳನ್ನ ಪ್ರಶಂಸಿಸೋದನ್ನ ಕಲಿಯಬೇಕು ಅಂತ ಕಮೆಂಟ್ ಮಾಡಿದ್ದಾರೆ.

ಪ್ರೀತಿ ಹೇಳಿಕೆಗೆ ಕೆಲವು ಅಭಿಮಾನಿಗಳು ಧನಿಗೂಡಿಸಿದ್ದು, ಈ ಮರಿಗಳನ್ನ ಯಾವಾಗಲು ನರ್ಸರಿಗಳಲ್ಲಿ ಜನರೊಂದಿಗೆ ಇರಿಸಿರುತ್ತಾರೆ. ಹೀಗಾಗಿ ಅವುಗಳಿಗೆ ಜನರೊಂದಿಗೆ ಇರುವುದು ಅಭ್ಯಾಸವಾಗಿರುತ್ತದೆ. ಅವು ದೊಡ್ಡವಾದ ನಂತರ ಕಾಡಿಗೆ ಬಿಡುತ್ತಾರೆ ಅಂತ ಕಮೆಂಟ್ ಮಾಡಿದ್ದಾರೆ.

https://www.instagram.com/p/BZK-wivgSKm/

ಇತ್ತೀಚೆಗೆ ಶಿಲ್ಪಾ ಶೆಟ್ಟಿ ಕೂಡ ದುಬೈನ ಲಕ್ಷಾಧಿಪತಿಯೊಬ್ಬರ ಖಾಸಗಿ ಝೂನಲ್ಲಿ ತೆಗೆಸಿಕೊಂಡ ಫೋಟೋಗಾಗಿ ಟ್ರೊಲ್‍ಗೊಳಗಾಗಿದ್ರು. ನಂತರ ಶಿಲ್ಪಾ ಶೆಟ್ಟಿ ಆ ಪೋಸ್ಟ್ ಡಿಲೀಟ್ ಮಾಡಿದ್ದರು.

Click to comment

Leave a Reply

Your email address will not be published. Required fields are marked *

Advertisement