ಹೈದರಾಬಾದ್: ಟಾಲಿವುಡ್ ನಟಿ ಕಾಜಲ್ ಅಗರ್‌ವಾಲ್ ಫಿಟ್‍ನೆಸ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಏನೇ ಮಿಸ್ ಆದರೂ ಪ್ರತಿನಿತ್ಯ ವರ್ಕೌಟ್ ಮಾಡುವುದನ್ನು ಮಾತ್ರ ತಪ್ಪಿಸುವುದಿಲ್ಲ. ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾಜಲ್ ಗರ್ಭಿಣಿಯರು ಮಾಡುವಂತಹ ವ್ಯಾಯಾಮ ಮಾಡುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಕಾಜಲ್ ಅಗರ್‌ವಾಲ್ ಅವರು ಪ್ರೆಗ್ನೆನ್ಸಿ ವೇಳೆ ಪ್ರತಿನಿತ್ಯ ವರ್ಕೌಟ್ ಮಾಡುತ್ತಿರುವ ಪುಟ್ಟ ವೀಡಿಯೋವೊಂದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ಕಾಜಲ್ ಲ್ಯಾವೆಂಡರ್-ಹ್ಯೂಡ್ ಸ್ಪೋಟ್ರ್ಸ್ ಬ್ರಾ ಧರಿಸಿ ಮತ್ತು ಲೂಸ್ ಜಾಕೆಟ್ ಧರಿಸಿ ವಿವಿಧ ರೀತಿಯಲ್ಲಿ ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಕ್ಯಾಪ್ಷನ್‍ನಲ್ಲಿ ಗರ್ಭಿಣಿಯರಿಗೆ ಏರೋಬಿಕ್ಸ್ ಮತ್ತು ವ್ಯಾಯಾಮ ಬಹಳ ಮುಖ್ಯ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಶಿವರಾತ್ರಿ ಸಡಗರಕ್ಕೆ ಸಿದ್ಧಗೊಂಡ ಸ್ಯಾಂಡಲ್ ವುಡ್
ನಾನು ಯಾವಾಗಲೂ ತುಂಬಾ ಆ್ಯಕ್ಟೀವ್ ಆಗಿರುತ್ತೇನೆ ಮತ್ತು ನನ್ನ ಇಡೀ ಜೀವನ ಕೆಲಸ ಮಾಡಿದ್ದೇನೆ. ಪ್ರೆಗ್ನೆನ್ಸಿ ವೇಳೆ ಯಾವುದೇ ಸಮಸ್ಯೆಗಳಿಲ್ಲದೆ ಇರಬೇಕೆಂದರೆ, ಎಲ್ಲಾ ಗರ್ಭಿಣಿಯರು ಆರೋಗ್ಯಕರವಾಗಿರಲು ಏರೋಬಿಕ್ ಮತ್ತು ಸ್ಟ್ರೆಂತ್ ಕಂಡೀಷನಿಂಗ್ ವ್ಯಾಯಾಮಗಳನ್ನು ಮಾಡಲು ಪ್ರೋತ್ಸಾಹಿಸಬೇಕು ಎಂದಿದ್ದಾರೆ.
View this post on Instagram
ಟ್ರೈನರ್ ನನ್ನ ಪ್ರೆಗ್ನೆನ್ಸಿ ವೇಳೆ ನನ್ನ ದೇಹ ಫಿಟ್ ಆಗಿರಲು ಸಹಾಯ ಮಾಡುತ್ತಿದ್ದಾರೆ. ಈ ವ್ಯಾಯಮಗಳು ನನಗೆ ಸ್ಟ್ರಾಂಗ್, ಲಾಂಗ್ ಮತ್ತು ತೆಳ್ಳಗಿರುವ ಫೀಲ್ ನೀಡುತ್ತಿದೆ. ಪ್ರೆಗ್ನೆನ್ಸಿ ವೇಳೆ ಏರೋಬಿಕ್ ನಮ್ಮ ದೇಹ ಫಿಟ್ ಆಗಿರಲು ಸಹಾಯವಾಗಿದೆ. ನಾವು ಕೂಡ ಫಿಟ್‍ನೆಸ್ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ
View this post on Instagram
2022ರ ಹೊಸ ವರ್ಷದಂದು, ಕಾಜಲ್ ಅಗರ್‌ವಾಲ್ ಮತ್ತು ಗೌತಮ್ ಕಿಚ್ಲು ಅಪ್ಪ-ಅಮ್ಮ ಆಗುತ್ತಿರುವ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರು. ಅಲ್ಲದೇ ಇತ್ತೀಚೆಗಷ್ಟೆ ಸೀಮಂತ ಸಮಾರಂಭದ ಫೋಟೋವನ್ನು ಕಾಜಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.