ನಾಳೆ (ಫೆ.01) ಶಿವರಾತ್ರಿ. ಹಬ್ಬ ಹರಿದಿನಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಸ್ಯಾಂಡಲ್ ವುಡ್ ಸದಾ ಸಿದ್ಧವಿರುತ್ತದೆ. ಪ್ರತಿ ಸಲದಂತೆಯೂ ಈ ಬಾರಿಯೂ ಶಿವರಾತ್ರಿಯನ್ನು ಸಡಗರದಿಂದ ಕನ್ನಡ ಚಿತ್ರರಂಗ ಬರಮಾಡಿಕೊಳ್ಳುತ್ತಿದೆ. ಒಂದು ಕಡೆ ಈ ವಾರ ಐದಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಗಿದ್ದರೆ, ನಾಳೆ ಮತ್ತಷ್ಟು ಕಾರ್ಯಕ್ರಮಗಳು ಪ್ಲ್ಯಾನ್ ಆಗಿವೆ. ಇದನ್ನೂ ಓದಿ : ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ
Advertisement
ಸಲಗ ಸಿನಿಮಾದ ನಂತರ ದುನಿಯಾ ವಿಜಯ್ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿರುವ ವಿಜಯ್, ಈ ಸಿನಿಮಾದಲ್ಲಿ ಅವರು ಯಾವೆಲ್ಲ ಪಾತ್ರ ನಿರ್ವಹಿಸಲಿದ್ದಾರೆ ಎಂದು ಈವರೆಗೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಈಗಾಗಲೇ ರಿಲೀಸ್ ಆದ ಪೋಸ್ಟರ್ ಹೇಳುವ ಪ್ರಕಾರ, ದುನಿಯಾ ವಿಜಯ್ ಅವರು ನಟನೆಯೊಂದಿಗೆ ನಿರ್ದೇಶನ ಮಾಡಲಿದ್ದಾರೆ ಎನ್ನುತ್ತದೆ. ಶಿವರಾತ್ರಿ ದಿನದಂದು ಇದೆಲ್ಲದಕ್ಕೂ ಉತ್ತರ ಸಿಗಲಿದೆ. ಹಾಗೂ ಟೈಟಲ್ ಕೂಡ ಲಾಂಚ್ ಆಗಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ : ವಿಕ್ರಾಂತ್ ರೋಣ 2 ಮುನ್ಸೂಚನೆ ಕೊಟ್ಟರಾ ಸುದೀಪ್?
Advertisement
Advertisement
ಪ್ರಜ್ವಲ್ ದೇವರಾಜ್ ಮತ್ತು ರಚಿತಾ ರಾಮ್ ಕಾಂಬಿನೇಷನ್ ನ ವೀರಂ ಸಿನಿಮಾದ ಹಾಡೊಂದು ಶಿವರಾತ್ರಿಗಾಗಿ ರಿಲೀಸ್ ಆಗುತ್ತಿದೆ. ಶಿವನ ಆರಾಧನೆಯ ಕುರಿತಾಗಿಯೇ ಈ ಹಾಡು ಮೂಡಿ ಬಂದಿದ್ದು, ಖ್ಯಾತ ಗಾಯಕಿ ಅನನ್ಯ ಭಟ್ ಈ ಗೀತೆಯನ್ನು ಹಾಡಿದ್ದಾರೆ. ಅನೂಪ್ ಸೀಳೀನ್ ಸಂಗೀತ ಸಂಯೋಜನೆಯಲ್ಲಿ ಹಾಡು ಮೂಡಿ ಬಂದಿದ್ದು, ನಾಗೇಂದ್ರ ಪ್ರಸಾದ್ ಈ ಗೀತೆಯನ್ನು ಬರೆದಿದ್ದಾರೆ. ಈ ಹಾಡು ಅಕ್ಕ ಮತ್ತು ತಂಗಿಯ ಭಾವನಾತ್ಮಕ ಸನ್ನಿವೇಶದಲ್ಲಿ ಸ್ಥಳ ಪಡೆದಿದೆ. ಇದನ್ನೂ ಓದಿ : ಏನಾಯ್ತು ಅಮಿತಾಭ್ ಬಚ್ಚನ್ ಗೆ? ಆತಂಕದಲ್ಲಿ ಅಭಿಮಾನಿಗಳು
Advertisement
ಅಲ್ಲದೇ ಶಿವರಾತ್ರಿ ಮುನ್ನ ದಿನವೇ ಸುನಿ ನಿರ್ದೇಶನದ ಹೊಸ ಸಿನಿಮಾದ ಪೋಸ್ಟರ್ ಮತ್ತು ನಾಯಕನ ಪರಿಚಯದ ಟೀಸರ್ ವೊಂದು ಬಿಡುಗಡೆ ಆಗಿದೆ. ಹೊಸ ಹುಡುಗನಿಗಾಗಿ ಸುನಿ ವಿಶೇಷ ಟೀಸರ್ ವೊಂದನ್ನು ತಯಾರಿಸಿ, ಆ ಮೂಲಕ ತಮ್ಮ ಸಿನಿಮಾದ ನಾಯಕನನ್ನು ಪರಿಚಯಿಸಿದ್ದಾರೆ. ಶಿವರಾತ್ರಿ ಒಂದು ದಿನ ಮುನ್ನವೇ ಈ ಟೀಸರ್ ಅಭಿಮಾನಿಗಳಿಗೆ ಇಷ್ಟವಾಗಿದೆ.