ಲಕ್ನೋ: ಸಾಮಾನ್ಯವಾಗಿ ಪೊಲೀಸರು ಸಮವಸ್ತ್ರ ಧರಿಸಿದ ತಕ್ಷಣ ಅವರ ಮೇಲಿನ ಘನತೆ ಗೌರವ ಹೆಚ್ಚುತ್ತದೆ. ಆದರೆ ಕೆಲವೊಮ್ಮೆ ಸಮವಸ್ತ್ರ ಧರಿಸಿದ ಪೋಲೀಸರು ಇಂತಹ ಕೃತ್ಯ ಎಸಗುವುದು ಇಡೀ ಪೊಲೀಸ್ ಇಲಾಖೆಯನ್ನು ನಾಚಿಕೆಗೇಡು ಮಾಡುತ್ತದೆ. ಇದಕ್ಕೆ ಉತ್ತಮ ನಿದರ್ಶನ ಉತ್ತರಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯಲ್ಲಿ ನಡೆದ ಘಟನೆ.
आजकल यूपी के पुलिस वालों को मसाज बहुत भा रही, कोई थाने में चम्पी ले रहा तो कोई पार्लर में। खैर #PRAYAGRAJ_POLICE के इन दरोगा बाबू को चम्पी पड़ गई भारी @inextlive pic.twitter.com/aQYFAlq8Hk
— Dharmendra Singh (@Dharmendra_Lko) August 27, 2022
Advertisement
ಹೌದು. ಪ್ರಯಾಗ್‍ರಾಜ್‍ನ ಸಿವಿಲ್ ಲೈನ್ ಔಟ್‍ಪೋಸ್ಟ್ ಇನ್‍ಚಾರ್ಜ್ ರಾಕೇಶ್ ಚಂದ್ ಶರ್ಮಾ ಅವರು ಸಮವಸ್ತ್ರ ಧರಿಸಿಯೇ ಮಸಾಜ್ ಸೆಂಟರ್‍ಗೆ ತೆರಳಿ ಮಸಾಜ್ ಮಾಡಿಕೊಂಡಿದ್ದಾರೆ. ರಾಕೇಶ್ ಮಸಾಜ್ ಮಾಡಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
Advertisement
Advertisement
ಯುವತಿಯೊಬ್ಬಳು ಇನ್ಸ್ ಪೆಕ್ಟರ್ ಮುಖಕ್ಕೆ ಮಸಾಜ್ ಮಾಡುತ್ತಿದ್ದಳು. ಇದನ್ನು ಅಲ್ಲೆ ಇದ್ದವರು ತಮ್ಮ ಮೊಬೈಲ್‍ನಲ್ಲಿ ವೀಡಿಯೋ ಮಾಡಿ ಪೊಲೀಸ್ ಇಲಾಖೆಯ ಟ್ವಿಟ್ಟರ್‍ಗೆ ಕಳುಹಿಸಿದ್ದಾರೆ. ಅಲ್ಲದೆ ಇನ್ಸ್ ಪೆಕ್ಟರ್ ಅವರು ತನ್ನ ಪ್ರದೇಶದ ಸಿವಿಲ್ ಲೈನ್‍ನ ಸ್ಪಾದಲ್ಲಿ ಮಹಿಳೆಗೆ ಮಸಾಜ್ ಮಾಡುತ್ತಿದ್ದಾನೆ ಎಂದು ಬರೆದಿದ್ದಾರೆ.
Advertisement
#प्रयागराज #Prayagraj #सुभाष चौराहे #पुलिस #चौकी #इंचार्ज #दरोगा का एक वीडियो सोशल,#वर्दी में बैठे दरोगा #स्पा #मसाज #पार्लर में पहुंचकर #महिला से #फेस #मालिश करा रहे हैं
#prayagrajViolence @prayagraj_pol @Uppolice #UPNews @dgpup #UPPInNews #UPPolice #PRAYAGRAJ_POLICE pic.twitter.com/aXQVftOW4e
— Raheem Ahmad( पत्रकार (@RaheemA73078351) August 26, 2022
ವೀಡಿಯೋದಲ್ಲೇನಿದೆ..?: ರಾಕೇಶ್ ಅವರು ಸ್ಪಾ ಕೇಂದ್ರದಲ್ಲಿ ಚೇರ್ ಮೇಲೆ ಕುಳಿತುಕೊಂಡಿದ್ದಾರೆ. ಇತ್ತ ಯುವತಿ ಚೇರ್ ಹಿಂದೆ ನಿಂತು ಇನ್ಸ್‍ಪೆಕ್ಟರ್ ಮುಖಕ್ಕೆ ನಯವಾಗಿ ಮಸಾಜ್ ಮಾಡುತ್ತಿದ್ದಾರೆ. ಯುವತಿ ಮುಖ ಕ್ಷಣಾರ್ಧದಲ್ಲಿ ಕಣ್ಣಮುಂದೆ ಬರುತ್ತದೆ. ನಂತರ ಅವಳು ತನ್ನ ಮುಖವನ್ನು ತಿರುಗಿಸುತ್ತಾಳೆ. ಸದ್ಯ ಕೇವಲ 17 ಸೆಕೆಂಡ್‍ಗಳ ವೈರಲ್ ವೀಡಿಯೋ ಇನ್ಸ್ ಪೆಕ್ಟರ್ ಕಾರ್ಯವೈಖರಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
प्रयागराज सिविल लाइन थाने के दारोगा जी को फेस मसाज कराना मंहगा पड़ा। सस्पेंड हो गए हैं#Prayagraj #PRAYAGRAJ_POLICE pic.twitter.com/XbwEix4JMy
— Alok Kumar (@dmalok) August 27, 2022
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೆ ಎಚ್ಚೆತ್ತ ಅಲ್ಲಿನ ಎಸ್‍ಎಸ್‍ಪಿ ಪ್ರಯಾಗರಾಜ್ ಶೈಲೇಂದ್ರ ಕುಮಾರ್ ಪಾಂಡೆ ಅವರು ರಾಕೇಶ್ ಅವರನ್ನು ಅಮಾನತುಗೊಳಿಸಿದ್ದಾರೆ.