ಗದಗ: ಪ್ರತಾಪ್ ಸಿಂಹ (Pratap Simha) ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ. ಅವರು ಎಂಪಿ ಆಗುವುದಕ್ಕೆ ನಾಲಾಯಕ್ ಎಂದು ವಿಧಾನ ಪರಿಷತ್ (Vidhana Parishad) ಸದಸ್ಯ ಸಲೀಂ ಅಹ್ಮದ್ (Salim Ahmed) ವಾಗ್ದಾಳಿ ನಡೆಸಿದ್ದಾರೆ.
Advertisement
ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಮಾತನಾಡಿದ ಅವರು, ಬಸ್ ಶೆಲ್ಟರ್ ಮೇಲಿನ ಗುಂಬಜ್ (Gumbaz) ತೆರವು ವಿಚಾರವಾಗಿ ಕಿಡಿಕಾರಿದ್ದಾರೆ. ಇಂತಹ ಹೇಳಿಕೆಗಳ ಮೂಲಕ ಸಮಾಜಕ್ಕೆ ಏನು ಸಂದೇಶ ಕೊಡುತ್ತಿದ್ದಾರೆ? ನೀವು ಎಂಪಿ ಆಗಿ ಏನು ಅಭಿವೃದ್ಧಿ ಕಾರ್ಯ ಮಾಡಿದ್ದೀರಾ? ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. 40% ಕಮಿಷನ್ ಸರ್ಕಾರ ಅಂತ ಜಗಜ್ಜಾಹಿರವಾಗಿದೆ. ಭ್ರಷ್ಟಾಚಾರದಲ್ಲಿ ಉದಯವಾಗಿ, ಅದರಲ್ಲಿ ಮುಳುಗಿದೆ. ಅದನ್ನು ಸರಿಪಡಿಸಿಕೊಳ್ಳಲು ಹೇಳುವ ಹಾಗೂ ಆ ಬಗ್ಗೆ ಧ್ವನಿ ಎತ್ತುವ ಧೈರ್ಯ ಈ ಸಂಸದರಿಗೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಗುಂಬಜ್ ಇರುವುದನ್ನು ತೆರವು ಮಾಡುವುದಾದರೆ, ಮೈಸೂರು, ಬೆಂಗಳೂರಿನಲ್ಲಿ, ದೆಹಲಿಯಲ್ಲಿ ಗುಂಬಜ್ ರೀತಿಯಲ್ಲಿ ಸರ್ಕಾರಿ ಕಟ್ಟಡಗಳಿವೆ. ಅವುಗಳನ್ನು ಎಲ್ಲಾ ಒಡೆಯುತ್ತಿರಾ? ಆ ಧೈರ್ಯ ನಿಮಗಿದೆಯಾ? ಒಬ್ಬ ಸಂಸದನಾಗಿ ಇಂತಹ ಅವಹೇಳನಕಾರಿ ಕೆಲಸ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್ ಜೊತೆಗೆ ನೀರು ಬೆರಕೆ – ಪಂಪ್ ವಿರುದ್ಧ ವ್ಯಕ್ತಿಯಿಂದ ದೂರು
Advertisement
ವಿವೇಕ ಶಾಲೆಗಳಿಗೆ ಕೇಸರಿ ಬಣ್ಣದ ಕೆಸರೆರಚಾಟ ಕುರಿತು ಮಾತನಾಡಿದ ಅವರು, ಬಣ್ಣ ಬಿಡಿ, ಸರ್ಕಾರಿ ಶಾಲೆಗಳಲ್ಲಿ ಟೀಚರ್ ಗಳಿಲ್ಲ, ಕೊಠಡಿಗಳಿಲ್ಲ, ಸಮವಸ್ತ್ರ, ಶೂಗಳಿಲ್ಲ, ಮಕ್ಕಳಿಗೆ ಸೈಕಲ್‍ಗಳಿಲ್ಲ, ಮಧ್ಯಾಹ್ನ ಬಿಸಿಯೂಟ ಸರಿಯಾಗಿ ಸಿಗುತ್ತಿಲ್ಲ. ಅದರ ಕಡೆ ಗಮನ ಕೊಡಿ. ಇದೆಲ್ಲಾ ಬಿಟ್ಟು ಬಿಜೆಪಿ ಸರ್ಕಾರ ಬಣ್ಣದ ಹಿಂದೆ ಬಿದ್ದಿದೆ. ಎಲ್ಲವನ್ನೂ ಕೇಸರಿಕರಣ ಮಾಡುವುದಕ್ಕೆ ಹೊರಟಿದ್ದಾರೆ. ಮಕ್ಕಳಿಗೆ ಈ ರೀತಿ ಬಣ್ಣ ಬಿಂಬಿಸುವ ಬದಲು ಒಳ್ಳೆ ಶಿಕ್ಷಣ ನೀಡಿ ಎಂದು ಹರಿಹಾಯ್ದಿದ್ದಾರೆ.
ಈ ವೇಳೆ ಕಾಂಗ್ರೆಸ್ ಮುಖಂಡ ಶಿವಕುಮಾರಗೌಡ ಪಾಟೀಲ್, ಮಾಜಿ ಶಾಸಕ ಜಿ.ಎಸ್. ಪಾಟೀಲ್, ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಡೇಟಿಂಗ್ ಮಾಡಿ – ಪ್ರಮೋದ್ ಮುತಾಲಿಕ್