ಚೆನ್ನೈ: ನೀರು ಮಿಶ್ರಿತ ಪೆಟ್ರೋಲ್ ನೀಡಿದ್ದಕ್ಕೆ ಪೆಟ್ರೋಲ್ ಬಂಕ್ ವಿರುದ್ಧ ತಮಿಳುನಾಡಿನಲ್ಲಿ (Tamil Nadu) ಕೇಸ್ ದಾಖಲಾಗಿದೆ.
ಕೊಯಮತ್ತೂರಿನ (Coimbatore) ಅವರಂಪಾಲಯಂ (Avarampalayam) ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಿದ್ದಪುದೂರು ನಿವಾಸಿ ಪಾಂಡಿಯನ್ ಅವರಿಗೆ ಸೇರಿರುವ ಕಾರನ್ನು ಟ್ಯಾಕ್ಸಿಯಾಗಿ ಬಳಸಲಾಗುತ್ತಿತ್ತು ಮತ್ತು ಈ ಕಾರನ್ನು ರಮೇಶ್ ಚಾಲನೆ ಮಾಡುತ್ತಿದ್ದರು. ಇದನ್ನೂ ಓದಿ: ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಡೇಟಿಂಗ್ ಮಾಡಿ – ಪ್ರಮೋದ್ ಮುತಾಲಿಕ್
Advertisement
Advertisement
ನವೆಂಬರ್ 15ರ ಮಂಗಳವಾರ ಬೆಳಗ್ಗೆ ಅವರಂಪಳಯಂ ಪ್ರದೇಶದ ಪೆಟ್ರೋಲ್ ಬಂಕ್‍ನಲ್ಲಿ ರಮೇಶ್ 4,119 ರೂ. ನೀಡಿ ಕಾರಿಗೆ 39.90 ಲೀಟರ್ ಪೆಟ್ರೋಲ್ ಹಾಕಿಸಿದ್ದರು. ಹೀಗಿದ್ದರೂ ಕಾರು ಮಧ್ಯದಾರಿಯಲ್ಲಿಯೇ ನಿಂತುಹೋಗಿತ್ತು. ನಂತರ ಮೆಕ್ಯಾನಿಕ್ ಬಂದು ವಾಹನವನ್ನು ಪರಿಶೀಲಿಸಿದಾಗ ಪೆಟ್ರೋಲ್ ಟ್ಯಾಂಕ್ ಒಳಗೆ ನೀರು ತುಂಬಿಕೊಂಡಿತ್ತು. ಕೂಡಲೇ ರಮೇಶ್ ಪೆಟ್ರೋಲ್ ಬಂಕ್‍ಗೆ ಹಿಂದಿರುಗಿ ಪೆಟ್ರೋಲ್ ಬದಲು ನೀರು ಇದೆ ಎಂದು ತಿಳಿಸಿದ್ದಾರೆ. ಆದರೆ, ಆಡಳಿತ ಮಂಡಳಿ ಅವರಿಗೆ ಸೂಕ್ತ ಉತ್ತರ ನೀಡಲು ವಿಫಲವಾಗಿದೆ.
Advertisement
ಈ ಹಿನ್ನೆಲೆ ರಮೇಶ್ ಕತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೆಟ್ರೋಲ್ ಬಂಕ್ ಮ್ಯಾನೇಜರ್ ನಂದಗೋಪಾಲ್ ಘಟನೆಯ ಬಗ್ಗೆ ಇಂಡಿಯನ್ ಆಯಿಲ್ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಇಂಜಿನಿಯರ್‌ಗಳು ಬಂದು ಹಾನಿಗೊಳಗಾದ ಪೆಟ್ರೋಲ್ ಪಂಪ್ ಪರಿಶೀಲಿಸಲಿದ್ದಾರೆ ಎಂದು ನಂದಗೋಪಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಪಾಲಿಗೆ ಸತ್ತು ಹೋಗಿವೆ – ರೈತರ ಆಕ್ರೋಶ
Advertisement
ಇದೇ ವೇಳೆ ರಮೇಶ್ ತನ್ನ ಟ್ಯಾಂಕ್‍ನಲ್ಲಿ ತುಂಬಿದ್ದ ಪೆಟ್ರೋಲ್ ಅನ್ನು ಬಾಟಲಿಗೆ ಸಂಗ್ರಹಿಸಿ ತಾನು ಮೋಸ ಹೋಗಿರುವುದನ್ನು ತೋರಿಸಿದ್ದಾನೆ. ಈ ವಿಚಾರ ಜಿಲ್ಲೆಯಲ್ಲಿ ಭಾರೀ ಸುದ್ದಿಯಾಗಿತ್ತು. ಇದೀಗ ಪೆಟ್ರೋಲ್ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿದ್ದು, ಕಾರಿನ ದುರಸ್ತಿಗೆ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಪೆಟ್ರೋಲ್ ಬಂಕ್‍ನವರು ಭರವಸೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.