ಪ್ರಭಾಸ್ (Prabhas) ಹೈದ್ರಾಬಾದ್‌ನಿಂದ ಹಾರಿ ಕರ್ನಾಟಕದ ಚಿಕ್ಕ ಗ್ರಾಮಕ್ಕೆ ಬಂದಿದ್ದಾರೆ. ಉಡುಪಿಯ ಕುಂದಾಪುರ ತಾಲೂಕಿನ ಪುಟ್ಟ ಗ್ರಾಮ ಬಸ್ರೂರಿನಲ್ಲಿ ಬೀಡು ಬಿಟ್ಟಿದ್ದಾರೆ. ವಾಟ್ ಈಸ್ ದಿಸ್? ಪ್ಯಾನ್ ಇಂಡಿಯಾ ಸ್ಟಾರ್ ಏಕಾಏಕಿ ಬಸ್ರೂರು ಸ್ಟುಡಿಯೋಕ್ಕೆ ಬಂದಿದ್ದೇಕೆ? ಅದು ಹೇಗೆ ಪ್ರಶಾಂತ್ ನೀಲ್ (Prashanth Neel) ಇದಕ್ಕೆ ಒಪ್ಪಿಸಿದರು? ಇಲ್ಲಿದೆ ಮಾಹಿತಿ.
Advertisement
ಪ್ರಶಾಂತ್ ನೀಲ್ ಬಸ್ರೂರಿನಲ್ಲಿ ಕೆಲವು ದಿನಗಳಿಂದ ಟೆಂಟ್ ಹಾಕಿದ್ದಾರೆ. ಕಾರಣ ಎಲ್ಲರಿಗೂ ಗೊತ್ತಿದೆ. ಸಲಾರ್ (Saalar) ಇನ್ನೇನು ಬಿಡುಗಡೆಯಾಗುವ ತಯಾರಿಯಲ್ಲಿದೆ. ಅದಕ್ಕೂ ಮುಂಚೆ ಎಲ್ಲ ಕೆಲಸ ಮುಗಿಸಬೇಕಲ್ಲವೆ? ಹೀಗಾಗಿಯೇ ಸಂಗೀತ ನಿರ್ದೇಶಕ ರವಿ ಬಸ್ರೂರ್ ಒಡೆತನದ ಸ್ಟುಡಿಯೋದಲ್ಲಿ ಅಂತಿಮ ಕೆಲಸ ನಡೆದಿವೆ. ಪಟ್ಟಣದ ಸಹವಾಸವೇ ಬೇಡ ಎಂದು ರವಿ ತಮ್ಮ ಹುಟ್ಟೂರು ಬಸ್ರೂರಿನಲ್ಲಿ ಸ್ಟುಡಿಯೋ ಸ್ಥಾಪಿಸಿದ್ದಾರೆ. ರೀ- ರೆಕಾರ್ಡಿಂಗ್, ಡಬ್ಬಿಂಗ್ ಕಾರ್ಯ ನಡೆಯುತ್ತಿವೆ. ಅಲ್ಲೇ ಬಂದು ಪ್ರಭಾಸ್ ಡಬ್ಬಿಂಗ್ ಮಾಡುತ್ತಿದ್ದಾರೆ.
Advertisement
Advertisement
ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆದಮೇಲೆ ಇದೇ ಮೊದಲ ಬಾರಿಗೆ ಹಳ್ಳಿಯೊಂದರಲ್ಲಿ ಕುಳಿತು ಡಬ್ಬಿಂಗ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಪ್ರಶಾಂತ್ ನೀಲ್. ಬಸ್ರೂರು ಸ್ಟುಡಿಯೋದಲ್ಲೇ ಅವರು ಅಂತಿಮ ಹಂತದ ಕೆಲಸಕ್ಕೆ ಟಚ್ ಕೊಡುತ್ತಿದ್ದಾರೆ. ಜೊತೆಗೆ ಪ್ರಭಾಸ್‌ರನ್ನು ಇಲ್ಲಿಗೇ ಕರೆಸಿದ್ದಾರೆ. ಕಾರಣವೇನು ? ವಿಷಯ ಇದೆ. ಹೈದ್ರಾಬಾದ್ ಸೇರಿದಂತೆ ಯಾವುದೇ ಸಿಟಿಯಲ್ಲಿ ಡಬ್ಬಿಂಗ್ ಮಾಡಿದರೆ, ಅದರ ವಿಶುವಲ್ಸ್ ಅಥವಾ ವಿಡಿಯೋ ಲೀಕ್ ಆಗುವ ಸಾಧ್ಯತೆ ಇರುತ್ತದೆ. ಅದಾಗಬಾರದೆಂದೇ ಈ ನಿರ್ಧಾರ ನೀಲ್ ಕೈಗೊಂಡಿದ್ದಾರೆ. ಇದನ್ನೂ ಓದಿ:ವರಮಹಾಲಕ್ಷ್ಮಿ ಹಬ್ಬದಂದು ವೈಷ್ಣವಿ ಗೌಡ ಫ್ಯಾನ್ಸ್‌ಗೆ ಸಿಹಿಸುದ್ದಿ
Advertisement
ಒಬ್ಬ ಪ್ಯಾನ್ ಇಂಡಿಯಾ ಸ್ಟಾರ್‌ಗೆ ಬಸ್ರೂರಿನಲ್ಲಿ ಡಬ್ಬಿಂಗ್ ಮಾಡಿಸುವುದು ಎಷ್ಟು ದೊಡ್ಡ ವಿಷಯವೋ. ಅದೇ ರೀತಿ ಪ್ರಭಾಸ್ ಕೂಡ ಈ ಮನವಿ ಒಪ್ಪಿರುವುದು ಕೂಡ. ಎಲ್ಲರೂ ಸೇರಿ ಒಂದೊಳ್ಳೆ ಪ್ರೊಜೆಕ್ಟ್ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಹೊಂಬಾಳೆ ಸಂಸ್ಥೆ ಈಗಾಗಲೇ ಸೆಪ್ಟೆಂಬರ್ 28ಕ್ಕೆ ಬಿಡುಗಡೆ ದಿನ ಘೋಷಿಸಿದೆ. ಇನ್ನೇನು ಕೆಲವು ದಿನಗಳಲ್ಲಿ ಟ್ರೈಲರ್ ಹೊರಬೀಳಲಿದೆ. ಅಲ್ಲಿಂದ ಹಬ್ಬ ಆರಂಭವಾಗಲಿದೆ. ಕನ್ನಡದ ಬಾವುಟ ಇನ್ನೊಮ್ಮೆ ವಿಶ್ವದ ತುಂಬಾ ಮೆರವಣಿಗೆ ಹೊರಡಲಿದೆ.