Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಐಟಿ ರೇಡ್ ಹಿಂದಿನ ನಿಜವಾದ ಕಾರಣ ಬಿಚ್ಚಿಟ್ಟ ವಿತರಕ ಪ್ರಶಾಂತ್ ಸಂಬರ್ಗಿ

Public TV
Last updated: January 4, 2019 6:32 pm
Public TV
Share
3 Min Read
prashanth sambargi
SHARE

– ವಿಲನ್, ನಟಸಾರ್ವಭೌಮ, ಕೆಜಿಎಫ್ ಚಿತ್ರಗಳಿಗೂ ಐಟಿ ದಾಳಿಗೂ ಸಂಬಂಧವಿಲ್ಲ
– ಓರ್ವ ವಿತರಕನಿಂದಾಗಿ ಐಟಿ ದಾಳಿ ನಡೆದಿದೆ
– ಹಳೆಯ ಸಿನಿಮಾದ ಅವ್ಯವಹಾರವೇ ದಾಳಿಗೆ ಮೂಲ ಕಾರಣ

ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟ, ನಿರ್ಮಾಪಕರ ಮನೆ ಮೇಲೆ ನಡೆದಿರುವ ಬಗ್ಗೆ ದಾಳಿಗೆ ಚಿತ್ರರಂಗದ ವಿತರಕರೊಬ್ಬರು ತಮ್ಮ ಸ್ವಾರ್ಥ ಸಾಧನೆಗಾಗಿ ಮಾಡಿದ ಕೆಲಸವೇ ಕಾರಣ ಎಂದು ವಿತರಕ ಪ್ರಶಾಂತ್ ಸಂಬರ್ಗಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ದಕ್ಷಿಣ ಭಾರತದ ಸಿನಿಮಾ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ಕನ್ನಡ ಚಿತ್ರರಂಗದಿಂದ ಕಡಿಮೆ ಜಿಎಸ್‍ಟಿ ಬರುತ್ತಿದ್ದು, ಇದೇ ಐಟಿ ದಾಳಿಗೆ ಮೂಲ ಕಾರಣವಾಗಿದೆ. ಅಲ್ಲದೇ ಮನರಂಜನಾ ತೆರಿಗೆಯಲ್ಲಿ ಉಂಟಾಗಿರುವ ಆದಾಯದ ಲೋಪವೂ ಕಾರಣ ಎಂದು ತಿಳಿಸಿದ್ದಾರೆ.

vlcsnap 2018 10 22 11h57m44s66 e1540189794547

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇತರೇ ರಾಜ್ಯದ ಸಿನಿಮಾಗಳನ್ನು ವಿತರಕರು ಯಾವುದೇ ಒಪ್ಪಂದ ದಾಖಲೆ ಇಲ್ಲದೇ ಬಿಡುಗಡೆ ಮಾಡುತ್ತಾರೆ. ಆದರೆ ಇದಕ್ಕೆ ದಾಖಲೆ ಇಲ್ಲದ ಕಾರಣ ಹಣ ನೇರವಾಗಿ ವಿತರಕರ ಹಾಗೂ ನಿರ್ಮಾಪಕರ ಕೈ ಸೇರುತ್ತದೆ. ಒಬ್ಬ ಕನ್ನಡ ವಿತರಕ ಮಾಡಿದ ದೊಡ್ಡ ತಪ್ಪು ದಾಳಿಗೆ ಕಾರಣವಾಗಿದ್ದು, ಈ ಜಾಲ ಎಲ್ಲಿಯವರೆಗೆ ಹಬ್ಬಿದೆ ಎನ್ನುವ ಮೂಲ ಹುಡುಕಲು ಐಟಿ ದಾಳಿ ನಡೆದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೇರವಾಗಿ ಚಿತ್ರ ವಿತರಣೆ ಮಾಡುವುದರಿಂದ ಚಿತ್ರಮಂದಿರದ ಪ್ರದರ್ಶಕರು ಯಾವುದೇ ದಾಖಲೆ ಇಲ್ಲದೆ ಸಿನಿಮಾ ಪ್ರದರ್ಶನ ಮಾಡುತ್ತಾರೆ. ಇದರಿಂದ ಸರ್ಕಾರಕ್ಕೆ ಸೇರಬೇಕಾದ ಹಣ ಜನರಿಂದ ಬಂದರೂ ಅದು ಸರ್ಕಾರಕ್ಕೆ ತಲುಪುವುದಿಲ್ಲ. ಆ ಒಬ್ಬ ವಿತರಕ ಈಗ ಸಿನಿಮಾ ಮಾಡಲು ಹೋಗಿ ಹಣದ ರೂಪದಲ್ಲಿ ವ್ಯವಹಾರ ಮಾಡಿದ್ದು, ಇದು ಕೂಡ ದಾಳಿಗೆ ಕಾರಣ. ಏಕೆಂದರೆ ಸಂಭಾವನೆ ಪಡೆಯುವ ನಟರು ಚೆಕ್ ಮೂಲವೇ ಹಣ ಪಡೆಯಬೇಕು. ಆಗ ಅದು ತೆರಿಗೆ ವ್ಯಾಪ್ತಿಗೆ ಬರುತ್ತದೆ. ಆದರೆ ಕೆಲ ನಟರು ಕಾಣಿಕೆ, ವಿಲ್ಲಾ, ಆಸ್ತಿ ಪಡೆದಿದ್ದಾರೆ. ಆದರೆ ಇದು ತಪ್ಪಲ್ಲ, ನಟರು ತಾವು ಪಡೆದ ಕಾಣಿಕೆಯನ್ನು ಘೋಷಣೆ ಮಾಡಿದರೆ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸಿದ ಸ್ಟಾರ್ ನಟರು

it

ಚಿತ್ರರಂಗದ ಮೇಲೆ ಐಟಿ ದಾಳಿ ನಡೆಯಲು ವಿತರಕ ಮಾಡಿದ ಒಂದು ದೊಡ್ಡ ತಪ್ಪೇ ಕಾರಣ, ನಟರು ಕೂಡ ನೇರ ಹಣದ ಮೂಲಕ ಸಂಭಾವನೆ ಪಡೆಯುತ್ತಿದ್ದು ಅದು ಕೂಡ ತಪ್ಪು. ಈ ಕುರಿತು ವಿವರವಾಗಿ ನಾನು ಫೇಸ್‍ಬುಕ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಒಬ್ಬ ವಿತರಕ ಮಾಡಿದ ತಪ್ಪು ಇಂದು ಉಂಟಾಗಿರುವ ಐಟಿ ರೇಡ್‍ಗೆ ಕಾರಣ. ಏಕೆಂದರೆ ವಿತರಕ ಹಾಗೂ ನಿರ್ಮಾಪಕರ ನಡುವೆ ಉಂಟಾಗಿರುವ ಹಣದ ವ್ಯತ್ಯಾಸದಿಂದಾಗಿ ಈ ದಾಳಿ ನಡೆದಿದೆ ಎಂದು ಸಂಬರ್ಗಿ ವಿವರಿಸಿದ್ದಾರೆ. ಇದನ್ನೂ ಓದಿ: ಆ ಒಂದು ಡೈರಿಯಿಂದ ಸ್ಟಾರ್ ನಟರ ಮನೆ ಮೇಲೆ ದಾಳಿ!

ಕಳೆದ 2016 ಡಿಸೆಂಬರ್ 30 ರಂದು ಬಿಡುಗಡೆ ಆಗಿರುವ ಸಿನಿಮಾ ಒಟ್ಟು 35 ಕೋಟಿ ರೂ. ಆದಾಯ ಪಡೆದಿರುತ್ತದೆ. ಆದರೆ ಆ ವಿತರಕ ಕೇವಲ 19 ಕೋಟಿ ರೂ.ಗಳನ್ನು ನಿರ್ಮಾಪಕರಿಗೆ ನೀಡುತ್ತಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ದೂರು ದಾಖಲಾಗಿ ಪ್ರಕರಣದ ವಿಚಾರಣೆ ಜಿಎಸ್‍ಟಿ ಅಧಿಕಾರಿಗಳವರೆಗೂ ತಲುಪುತ್ತದೆ. ಸದ್ಯ ಈ ಕಿಡಿ ಇಂದು ಕನ್ನಡ ಚಿತ್ರರಂಗವನ್ನು ಆವರಿಸಿದೆ. ಈ ಪ್ರಕರಣದಿಂದಲೇ ನಿರ್ಮಾಪಕರು, ನಟರು ಹಾಗೂ ಚಿತ್ರರಂಗದ ಮೇಲೆ ಕೆಟ್ಟ ಹೆಸರು ಬರಲು ಕಾರಣ ಎಂದರು.

it questions

ಅಧಿಕಾರಿಗಳು ಇದನ್ನೇ ಎಳೆ ಎಳೆಯಾಗಿ ತನಿಖೆ ನಡೆಸಿ ಇಲ್ಲಿಗೆ ಬಂದಿದ್ದಾರೆ. ಇಂದಿನ ಕೆಜಿಎಫ್, ನಟಸಾರ್ವಭೌಮ ಹಾಗೂ ವಿಲನ್ ಚಿತ್ರಗಳಿಗೆ ದಾಳಿಗೂ ಸಂಬಂಧವಿಲ್ಲ. ಏಕೆಂದರೆ ಈ ಚಿತ್ರಗಳಿಗೆ ಇನ್ನು ಜಿಎಸ್‍ಟಿ ಕಟ್ಟಲು ಸಾಕಷ್ಟು ಅವಕಾಶ ಇದೆ. ಆದ್ದರಿಂದ ಇದು ಹಳೆಯ ಸಿನಿಮಾ ಒಂದರ ಅವ್ಯವಹಾರವೇ ಕಾರಣ. ಆತ ಇತರ ವಿತರಕರಿಗೂ ಮಾಹಿತಿ ನೀಡಿ ಈ ರೀತಿ ತೆರಿಗೆ ವಂಚನೆ ಮಾಡುವ ಮಾಹಿತಿ ನೀಡಿದ್ದು, ಅದೇ ದೊಡ್ಡ ಮಟ್ಟದಲ್ಲಿ ನಡೆದಿದೆ. ಆದರೆ ಇಂದಿನ ಐಟಿ ರೇಡ್ ಈ ಮೂಲಕ ಕನ್ನಡ ಸಿನಿಮಾದ ಕೊಳಕನ್ನು ಸ್ವಚ್ಛ ಮಾಡಿ, ಪಾರದರ್ಶಕತೆಯನ್ನು ತರುತ್ತದೆ. ಆದ್ದರಿಂದ ಕನ್ನಡ ಸಿನಿಮಾ ಅಭಿಮಾನಿಗಳು ಐಟಿ ರೈಡನ್ನು ಸ್ವೀಕಾರ ಮಾಡಬೇಕು ಎಂದು ಸಂಬರ್ಗಿ ಅವರು ಮನವಿ ಮಾಡಿದ್ದಾರೆ. ಅಲ್ಲದೇ 2 ದಿನಗಳಲ್ಲಿ ಎಲ್ಲಾ ಮಾಹಿತಿ ಹೊರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಲ್ವರು ಸ್ಟಾರ್‌ಗಳ ಮೇಲಿನ ಐಟಿ ದಾಳಿಗೆ ಜಿಎಸ್‍ಟಿ ಕಾರಣ?

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:cinemaDistributor Prashant SabaragikannadaPublic TVsandalwoodಕನ್ನಡಪಬ್ಲಿಕ್ ಟಿವಿವಿತರಕ ಪ್ರಶಾಂತ್ ಸಂಬರ್ಗಿಸಿನಿಮಾಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Kantara Chapter 1 First look of Kanakavati Rukmini Vasanth unveiled on Varamahalakshmi
ಕಾಂತಾರ ಚಾಪ್ಟರ್ 1| ಕನಕವತಿಯ ಮೊದಲ ನೋಟ ವರಮಹಾಲಕ್ಷ್ಮಿಯಂದು ಅನಾವರಣ
Cinema Latest Top Stories
Rajath Kishan
ಕೊಲೆ ಬೆದರಿಕೆ ಸಂದೇಶ – ಡಿಜಿಐಜಿಪಿಗೆ ರಜತ್ ದೂರು
Bengaluru City Cinema Latest Top Stories
love u muddu
ಮಹಾರಾಷ್ಟ್ರದಲ್ಲಿ ನಡೆದ ಕಥೆಗೆ ಸಿದ್ದು ನಾಯಕ
Cinema Latest Sandalwood Top Stories
Thalapathy Vijay Jana Nayagan
ಮಲೇಷಿಯಾದಲ್ಲಿ ರಿಲೀಸ್ ಆಗಲಿದೆ ‘ಜನನಾಯಗನ್’ ಆಡಿಯೋ
Cinema Latest Top Stories
madenuru manu actor
ಮಡೆನೂರು ಮನು ಜೊತೆ ಕಾಂಪ್ರಮೈಸ್ – ಕೇಸ್ ಹಿಂಪಡೆದ ಸಂತ್ರಸ್ತೆ
Cinema Latest Main Post

You Might Also Like

Huma Qureshi Brother
Crime

ಪಾರ್ಕಿಂಗ್ ವಿಚಾರಕ್ಕೆ ಗಲಾಟೆ; ಬಾಲಿವುಡ್ ನಟಿ ಹುಮಾ ಖುರೇಷಿ ಸೋದರ ಸಂಬಂಧಿಯ ಹತ್ಯೆ

Public TV
By Public TV
5 minutes ago
Bihar sita mandir
Latest

ಬಿಹಾರ ಚುನಾವಣೆ ಹೊತ್ತಲ್ಲೇ ಸೀತಾ ಮಂದಿರಕ್ಕೆ ಪ್ಲ್ಯಾನ್‌ – 882 ಕೋಟಿಯ ದೇಗುಲಕ್ಕಿಂದು ಅಮಿತ್ ಶಾ ಶಂಕುಸ್ಥಾಪನೆ

Public TV
By Public TV
13 minutes ago
Soladevanahalli Murder
Bengaluru City

ಆನ್‌ಲೈನ್ ಗೇಮ್ ಆಡಲು ಹಣಕ್ಕಾಗಿ ಟಾರ್ಚರ್; ಸ್ವಂತ ಅಳಿಯನನ್ನೇ ಕೊಂದ ಮಾವ

Public TV
By Public TV
16 minutes ago
Dharmasthala Mass Burial Case 6 locals likely to come forward on behalf of the witness
Dakshina Kannada

ನನಗೆ ಗನ್‌ಮ್ಯಾನ್‌ ಭದ್ರತೆ ನೀಡಿ: ಎಸ್‌ಐಟಿ ಮುಂದೆ ದೂರುದಾರನಿಂದ ಬೇಡಿಕೆ

Public TV
By Public TV
18 minutes ago
indian student
Crime

ಕೆನಡಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಗುಂಡೇಟಿಗೆ ಬಲಿ – ವ್ಯಕ್ತಿ ಬಂಧನ

Public TV
By Public TV
20 minutes ago
H D Kumaraswamy
Bengaluru City

ಪ್ರಜಾಪ್ರಭುತ್ವಕ್ಕೆ ವಿಷವಿಕ್ಕುವ ಘೋರ ಷಡ್ಯಂತ್ರ‍ – ರಾಹುಲ್ ವಿರುದ್ಧ ಹೆಚ್‌ಡಿಕೆ ಕಿಡಿ

Public TV
By Public TV
52 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?