ಬೆಂಗಳೂರು: ಮಹಾರಾಷ್ಟ್ರದಲ್ಲಿ ಎಂಎನ್‍ಎಸ್ ಮಹಾರತಿ ಹೆಸರಿನಲ್ಲಿ ಆಜಾನ್ ದಂಗಲ್ ತೀವ್ರಗೊಳಿಸಿದ ಬೆನ್ನಲ್ಲೇ ರಾಜ್ಯದ ಹಿಂದೂ ಪರ ಸಂಘಟನೆಗಳು ಸಹ ಎದ್ದುಕುಳಿತಿವೆ.
ಮೇ 3ರೊಳಗೆ ಮಸೀದಿಗಳ ಮೇಲಿನ ಧ್ವನಿವರ್ಧಕ ತೆರವು ಮಾಡದೇ ಇದ್ದಲ್ಲಿ ಅಕ್ಷಯ ತೃತೀಯ ದಿನವೇ ಮಹಾರಾಷ್ಟ್ರದ ಮಾದರಿಯಲ್ಲೇ ರಾಜ್ಯದ ಎಲ್ಲಾ ದೇಗುಲದಲ್ಲಿಯೂ ಮಹಾ ಆರತಿಯ ಧ್ವನಿವರ್ಧಕ ಹಾಕ್ತೀವಿ ಎಂದು ಸರ್ಕಾರಕ್ಕೆ ವಾರ್ನಿಂಗ್ ಕೊಟ್ಟಿವೆ. ಮಸೀದಿಗಳ ಮೇಲಿನ ಧ್ವನಿವರ್ಧಕವನ್ನು ತೆಗೆಯಲು ಸರ್ಕಾರ ಮುಂದಾಗದಿದ್ದರೆ, ಮೇ 9ರಿಂದ ದೇವರ ಭಜನೆ, ಹನುಮಾನ್ ಚಾಲೀಸ್ ಅನ್ನು ದಿನದ ಐದು ಹೊತ್ತು ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿವೆ.
Advertisement
Advertisement
ಇಷ್ಟು ದಿನದಿಂದ ಸರ್ಕಾರ ಏನ್ ಮಾಡ್ತಿದೆ. ಯಾರಿಗೆ ಹೆದರುತ್ತಿದೆ ಎಂದು ಶ್ರೀರಾಮಸೇನೆ ಗರಂ ಆಗಿದೆ. ಆದರೆ ಇದಕ್ಕೆ ಜಾಮೀಯಾ ಮಸೀದಿ ಮೌಲ್ವಿ ಮಕ್ಸೂದ್ ಇಮ್ರಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾವು ರೂಲ್ಸ್ ಫಾಲೋ ಮಾಡ್ತಿದ್ದೇವೆ. ಆದರೆ ತಪ್ಪು ಮಾಡದೇ ಇದ್ರೂ ಶಿಕ್ಷೆ ಕೊಡಿ ಅನ್ನೋ ತರಾ ಹಿಂದೂ ಸಂಘಟನೆಗಳು ಮಾತಾಡಿದ್ರೇ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಏ.21ರಂದು ಕರ್ನಾಟಕಕ್ಕೆ ಕೇಜ್ರಿವಾಲ್ ಭೇಟಿ
Advertisement
Advertisement
ಹಿಂದೂ ಸಂಘಟನೆಗಳ ಗಡುವಿನ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಸೌಂಡ್ ಕಡಿಮೆ ಮಾಡಲು ಮಸೀದಿ, ಚರ್ಚ್, ದೇವಸ್ಥಾನಗಳಿಗೆ ನೋಟಿಸ್ ಕೊಟ್ಟಿದ್ದೇವೆ ಅಂತೇಳಿ ಸುಮ್ಮನಾಗಿದ್ದಾರೆ. ಅತ್ತ ಮೈಕ್ ವಿವಾದ ಮೋದಿ ಅಂಗಳ ತಲುಪಿದೆ. ಧ್ವನಿವರ್ಧಕಗಳ ಬಳಕೆ ಬಗ್ಗೆ ರಾಷ್ಟ್ರೀಯ ನೀತಿಯನ್ನು ರೂಪಿಸಿ, ಮೊದಲು ಅದನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಜಾರಿ ಮಾಡಿ ಎಂದು ಶಿವಸೇನೆಯ ಸಂಜಯ್ ರೌತ್ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.