– ನೋಟ್‌ಬುಕ್‌ನಲ್ಲಿ 40 ಫೋನ್ ನಂಬರ್‌ಗಳು ಪತ್ತೆ
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಬಳಿ ಪತ್ತೆಯಾದ ಮೊಬೈಲ್‌ನಲ್ಲಿ ಹಲವು ಅಂಶಗಳು ಪತ್ತೆಯಾಗಿವೆ.
ಪತ್ತೆಯಾದ ಮೊಬೈಲ್‌ನಲ್ಲಿ ತಂದೆ ರೇವಣ್ಣ ನಂಬರ್‌ನ್ನು ಶಿವ ಹಾಗೂ ತಾಯಿ ಭವಾನಿ ರೇವಣ್ಣ ಅವರ ಹೆಸರನ್ನು ಪಾರ್ವತಿ ಎಂದು ಸೇವ್ ಮಾಡಿರುವುದು ಕಂಡುಬಂದಿದೆ. ಅಲ್ಲದೇ ನೋಟ್‌ಬುಕ್‌ನಲ್ಲಿ 40 ಮೊಬೈಲ್ ನಂಬರ್‌ಗಳು ಹಾಗೂ ಹಲವು ಅಪ್ತರು, ಅಪರಿಚಿತರ ಪೋನ್ ನಂಬರ್‌ಗಳು ಕೂಡ ಬರೆದಿರುವುದು ಪತ್ತೆಯಾಗಿವೆ. ಇದನ್ನೂ ಓದಿ: ಪಕ್ಕಾ ಪ್ಲ್ಯಾನ್ ಮಾಡಿ ಆಪರೇಷನ್ – ಪ್ರಜ್ವಲ್ ರೇವಣ್ಣ ಸಿಸಿಬಿ ಬಲೆಗೆ ಬಿದ್ದಿದ್ದು ಹೇಗೆ?
ಸಿಸಿಬಿ ದಾಳಿ ವೇಳೆ ಹಾಸಿಗೆ ಕೆಳಗೆ ಮೊಬೈಲ್ ಫೋನ್ ಪತ್ತೆಯಾದಾಗ ಪ್ರಜ್ವಲ್ ಮೊದಲಿಗೆ ತಮ್ಮದೇ ಮೊಬೈಲ್ ಎಂದು ಹೇಳಿಕೊಂಡಿದ್ದರು. ಬಳಿಕ ಪಾಸ್‌ವರ್ಡ್ ಓಪನ್ ಮಾಡುವಂತೆ ಸೂಚಿಸಿದಾಗ ಮೊಬೈಲ್ ನಂದಲ್ಲ. ಆಗಾಗ ಮನೆಯವರ ಬಳಿ ಮಾತಾಡಲು ಪೋನ್ ಬಳಕೆ ಮಾಡುತ್ತಿದ್ದೆ ಎಂದಿದ್ದರು.
ಈವರೆಗೂ ಮೊಬೈಲ್ ತಂದು ಕೊಟ್ಟಿದ್ದು ಯಾರು ಅನ್ನೋದನ್ನು ಪ್ರಜ್ವಲ್ ರೇವಣ್ಣ ಬಾಯ್ಬಿಟ್ಟಿಲ್ಲ. ಸದ್ಯ ಮೊಬೈಲ್, ಪೆನ್‌ಡ್ರೈವ್ ಅನ್ನು ಪೊಲೀಸರು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ.
ಅಲೋಕ್ ಕುಮಾರ್ ಬಿಸಿ
ಜೈಲಿನೊಳಗೆ ನಿಷೇಧಿತ ವಸ್ತುಗಳು ಸರಬರಾಜಾಗಲು ಸಹಕರಿಸಿದ ಜೈಲಿನ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಡಿಜಿಪಿ ಅಲೋಕ್ ಕುಮಾರ್ ಮುಂದಾಗಿದ್ದಾರೆ. ಜೈಲು ಸಿಬ್ಬಂದಿಗೆ ನೋಟಿಸ್ ಜಾರಿಯಾಗುವ ಸಾಧ್ಯತೆಯಿದ್ದು, ಪ್ರಜ್ವಲ್ ರೇವಣ್ಣ ಅವರಿಗೆ ಜೈಲಿನಲ್ಲಿ ನೀಡಲಾಗುತ್ತಿದ್ದ ವಿಶೇಷ ಸೌಲಭ್ಯಗಳ ಕುರಿತು ತನಿಖೆ ತೀವ್ರಗೊಂಡಿದೆ. ಇದನ್ನೂ ಓದಿ: ವಿಐಪಿ ಸೆಲ್‌ನಿಂದ ಪ್ರಜ್ವಲ್ ಎತ್ತಂಗಡಿ; ಜೈಲಲ್ಲಿ ಸಿಕ್ಕ ಮೊಬೈಲ್‌ನಲ್ಲೂ ಅಶ್ಲೀಲ ವಿಡಿಯೋಗಳು ಪತ್ತೆ

