ಇನ್ನು ಸಮಸ್ಯೆ ಬಗೆ ಹರಿಯುತ್ತಿಲ್ಲ. ಸದ್ಯಕ್ಕೆ ಇದೇ ಜಾಗತಿಕ ವಿಷಯ. ವಿಷಯ ಗೊತ್ತಿದೆ. ‘ಸಲಾರ್’ (Salaar) ಯಾವಾಗ ರಿಲೀಸ್ ಆಗಲಿದೆ? ಈಗಾಗಲೇ ಒಮ್ಮೆ ಬಿಡುಗಡೆ ಮುಂದಕ್ಕೆ ಹೋಗಿದೆ. ಇನ್ಯಾವ ದಿನದಂದು ಪ್ರಭಾಸ್ ಫ್ಯಾನ್ಸ್ ಹಬ್ಬ ಮಾಡಲು ಸಜ್ಜಾಗುತ್ತಿದ್ದಾರೆ? ಹೊಂಬಾಳೆ ಸಂಸ್ಥೆ (Hombale Films) ಹೇಳಿದ್ದೇನು ? ಈ ವರ್ಷವಾ ಅಥವಾ ಮುಂದಿನ ವರ್ಷಕ್ಕಾ ಬಿಡುಗಡೆ? ಇಲ್ಲಿದೆ ಮಾಹಿತಿ.
ಒಂದೇ ಒಂದು ಡೇಟ್ ಮುಂದೆ ಹೋಗಿದ್ದೇ ಹೋಗಿದ್ದು, ಅಲ್ಲಿಂದ ಇಲ್ಲಿವರೆಗೆ ಸಲಾರ್ ನಿತ್ಯ ಪಟಾಕಿ ಹಚ್ಚುತ್ತಿದೆ. ಸೆಪ್ಟೆಂಬರ್ 28ಕ್ಕೆ ಬರಲ್ಲ ಎಂದು ಗೊತ್ತಾದ ಕ್ಷಣದಿಂದ ಇದರ ಚರ್ಚೆ ಆಕಾಶಕ್ಕೇರಿತು. ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿ ಇದೆ. ಹೀಗಾಗಿ ತಡವಾಗಿ ಬಂದರೂ ಮಜಬೂತಾಗಿ ಹಾಜರಿ ಹಾಕುತ್ತೇವೆ ಎಂದಿತು ಹೊಂಬಾಳೆ. ಆದರೆ ಹೊಸ ಬಿಡುಗಡೆ ದಿನ ಮಾತ್ರ ಘೋಷಣೆ ಮಾಡಲಿಲ್ಲ. ಭಕ್ತಗಣ ಲೆಕ್ಕಾಚಾರ ಹಾಕುವುದನ್ನು ನಿಲ್ಲಿಸುತ್ತಿಲ್ಲ. ಬೆಳ್ಳಿತೆರೆ ಮೇಲೆ ಸಲಾರ್ ದಿಬ್ಬಣ ಹೊರಡುವವರೆಗೂ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಜೊತೆ ಸಂಪರ್ಕದಲ್ಲಿದ್ದೇನೆ, ಆಕೆಯ ಸಕ್ಸಸ್ ಬಗ್ಗೆ ಖುಷಿಯಿದೆ- ರಕ್ಷಿತ್ ಶೆಟ್ಟಿ
ಅಕ್ಟೋಬರ್ ಕೊನೇ ವಾರದಲ್ಲಿ ಪ್ರಭಾಸ್ ಹುಟ್ಟುಹಬ್ಬ. ಅದರ ಆಚೀಚೆ ಸಲಾರ್ ಬರಬಹುದು ಎನ್ನುವ ಗುಣಾಕಾರ ಹಾಕಲಾಯಿತು. ಇನ್ನು ಕೆಲವರು ಡಿಸೆಂಬರ್ ಕೊನೆಗೆ ಬರುತ್ತದೆ ಎಂದರು. ಆದರೆ ಈಗಾಗಲೇ ಈ ವರ್ಷದ ಕೊನೆಯಲ್ಲಿ ಅಖಾಡ ಫುಲ್ ಬಿಜಿಯೋ ಬಿಜಿ. ಹಾಗಿದ್ದರೆ ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ ಕಿಚ್ಚು ಹಚ್ಚಬಹುದಾ? ಇಲ್ಲ ಸಂಕ್ರಾಂತಿಯಂದು ತೆಲುಗು-ತಮಿಳಿನ ದೊಡ್ಡ ಸ್ಟಾರ್ ಸಿನಿಮಾ ಎಂಟ್ರಿ ಕೊಡಲಿವೆ. ಕ್ಲ್ಯಾಶ್ ಆಗೋದು ಪಕ್ಕಾ. ಮತ್ಯಾವಾಗ ದೀಪ ಹಚ್ಚಬಹುದು? ಉತ್ತರ ಸಿಗಲಿಲ್ಲ.
ಈಗ ಬಂದಿರುವ ಮಾಹಿತಿ ಪ್ರಕಾರ, ಜನವರಿ 26 ರಿಪಬ್ಲಿಕ್ ಡೇ ಆ ದಿನವೇ ಮೆರವಣಿಗೆ ಹೊರಡುವ ಸಾಧ್ಯತೆ ಇದೆ. ಅದು ತಪ್ಪಿದರೆ ಮಾರ್ಚ್ ತಿಂಗಳಲ್ಲಿ ಧಮಾಕಾ ಏಳಲಿದೆ. ಯಾವುದೂ ನಿಕ್ಕಿಯಾಗಿಲ್ಲ. ಎಲ್ಲವೂ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತಾಗಿದೆ. ಒಟ್ಟಿನಲ್ಲಿ ಪ್ರಭಾಸ್ (Prabhas) ಫ್ಯಾನ್ಸ್ ಮಾತ್ರ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ. ಪ್ರಶಾಂತ್ ನೀಲ್ (Prashanth Neel) ಭಕ್ತರೂ ಒಂಟಿಗಾಲಲ್ಲಿ ತಪಸ್ಸು ಮಾಡುತ್ತಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]