ಹೈದರಾಬಾದ್: ದಕ್ಷಿಣ ಭಾರತದ ಟಾಪ್ ನಟಿ ಸಮಂತಾ ಅಕ್ಕಿನೇನಿ ಜೊತೆ ಏಕೆ ನಟಿಸಲ್ಲ ಪ್ರಶ್ನೆಗೆ ಬಾಹುಬಲಿ ಪ್ರಭಾಸ್ ಉತ್ತರ ನೀಡಿದ್ದಾರೆ.
ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಾಯಕ ನಟರಲ್ಲಿ ಪ್ರಭಾಸ್ ಸಹ ಒಬ್ಬರು. ಬಾಹುಬಲಿ ಸಿನಿಮಾ ಮೂಲಕ ಇಡೀ ದೇಶದಲ್ಲಿಯೇ ಅಭಿಮಾನಿ ಬಳಗವನ್ನ ಪ್ರಭಾಸ್ ಹೊಂದಿದ್ದಾರೆ. ಅದೇ ರೀತಿ ಅನುಷ್ಕಾ ಶೆಟ್ಟಿ, ನಯನಾತಾರಾ, ತಮನ್ನಾ, ಶ್ರದ್ಧಾ ಕಪೂರ್ ಟಾಪ್ ನಟಿಯರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಆದ್ರೆ ಟಾಲಿವುಡ್ ಬಹುಬೇಡಿಕೆ ನಟಿಯಾಗಿರೋ ಸಮಂತಾ ಜೊತೆ ಮಾತ್ರ ಬಾಹುಬಲಿ ಸ್ಕ್ರೀನ್ ಶೇರ್ ಮಾಡಿಲ್ಲ.
- Advertisement 2
https://www.instagram.com/p/B_fv8iVhcaV/?utm_source=ig_embed
- Advertisement 3
ಸಂದರ್ಶನವೊಂದರಲ್ಲಿ ಪ್ರಭಾಸ್ ಅವರನ್ನು ಈ ಕುರಿತು ಕೇಳಿದಾಗ, ನಮ್ಮಿಬ್ಬರ ಎತ್ತರ ಹೊಂದಾಣಿಕೆ ಆಗಲ್ಲ ಎಂದು ಹೇಳಿ ಮುಗಳ್ನಕ್ಕಿದ್ದರು. ಪ್ರಭಾಸ್ 1.83 ಮೀಟರ್ ಎತ್ತರವಿದ್ದು, ಸಮಂತಾ 1.58 ಮೀ. (6 ಅಡಿ 2.5 ಇಂಚು) ಎತ್ತರವಿದ್ದಾರೆ. ಇನ್ನು ಸಮಂತಾ 1.58 ಮೀಟರ್ (5 ಅಡಿ 5 ಇಂಚು) ಎತ್ತರವಿದ್ದಾರೆ. ಸಾಹೋ ಸಿನಿಮಾ ಸೆಟ್ಟೇರಿದಾಗ ಪ್ರಭಾಸ್ಗೆ ನಾಯಕಿಯಾಗಿ ಸಮಂತಾ ನಟಿಸ್ತಾರೆ ಎನ್ನಲಾಗುತ್ತಿತ್ತು. ಕೊನೆ ಕ್ಷಣದಲ್ಲಿ ಸಾಹೋಗೆ ಆಶಿಕಿ ಚೆಲುವೆ ಜೊತೆಯಾಗಿದ್ದರು.
- Advertisement 4
ಸಮಂತಾ ಇಂದು ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಕೇಕ್ ಫೋಟೋವನ್ನು ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಸಹ ಸೋಶಿಯಲ್ ಮೀಡಿಯಾ ತಮ್ಮ ನೆಚ್ಚಿನ ನಟಿಯ ಹುಟ್ಟುಹಬ್ಬಕ್ಕೆ ಶುಭಕೋರುತ್ತಿದ್ದಾರೆ.