ಸಾಯಿ ಧರಂ ತೇಜ್ ಚಿತ್ರದಿಂದ ಪೂಜಾ ಹೆಗ್ಡೆ ಔಟ್

Public TV
1 Min Read
pooja hegde

ರಾವಳಿ ನಟಿ ಪೂಜಾ ಹೆಗ್ಡೆ (Pooja Hegde) ಅವರ ಅದೃಷ್ಟ ಕೈ ಕೊಟ್ಟಿದೆ. ಚಿತ್ರರಂಗದಲ್ಲಿ ಎಂತಹ ಪಾತ್ರ ಮಾಡಿದ್ದರೂ ಪೂಜಾಗೆ ಸಕ್ಸಸ್ ಕೈಹಿಡಿಯುತ್ತಿಲ್ಲ. ಇದರ ನಡುವೆ ಟಾಲಿವುಡ್ ನಟ ಸಾಯಿ ಧರಂ ತೇಜ್ (Sai Dharam Tej) ಸಿನಿಮಾದಿಂದ ಪೂಜಾ ಹೆಗ್ಡೆ ಔಟ್ ಆಗಿದ್ದಾರೆ. ಇದನ್ನೂ ಓದಿ:ನನ್ನ ಲೈಫ್‌ನಲ್ಲಿ ವಿಜಯ್ ಎಲ್ಲರಿಗಿಂತ ಹೆಚ್ಚಾಗಿ ಬೆಂಬಲಿಸಿದ್ದಾರೆ- ರಶ್ಮಿಕಾ

pooja hegde

ಕಡೆಯದಾಗಿ ಪೂಜಾ ಹೆಗ್ಡೆ ಅವರು ಕಳೆದ ವರ್ಷ ಸಲ್ಮಾನ್ ಖಾನ್ (Salman Khan) ಜೊತೆ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಅದಾದ ನಂತರ ಯಾವುದೇ ಸಿನಿಮಾದಲ್ಲೂ ಪೂಜಾ ನಟಿಸಿಲ್ಲ. ಮಹೇಶ್ ಬಾಬು ಸಿನಿಮಾದಿಂದ ಪೂಜಾ ಕಿರಿಕ್ ಮಾಡಿಕೊಂಡು ಹೊರಬಂದಿದ್ದರು. ಈಗ ತೆಲುಗಿನ ಸಿನಿಮಾ ಪ್ರಾಜೆಕ್ಟ್‌ನಿಂದ ಹೊರಬಂದಿದ್ದಾರೆ.

pooja hegde

ಸಾಯಿ ಧರಂ ತೇಜ್ ಚಿತ್ರದಿಂದ ಪೂಜಾ ಹೆಗ್ಡೆ ಅವರೇ ಹೊರಬಂದಿದ್ದಾರೆ. ಆದರೆ ಅವರ ಕಾರಣ ಕೇಳಿದ್ರೆ ನಿಜಕ್ಕೂ ಶಾಕ್ ಆಗುತ್ತದೆ. ಈ ಸಿನಿಮಾದಲ್ಲಿ ಪೂಜಾ ಪಾತ್ರಕ್ಕೆ ಗ್ಲ್ಯಾಮರ್ ಇಲ್ಲ ಎಂದು ಸಾಯಿ ಧರಂ ತೇಜ್ ಚಿತ್ರವನ್ನು ಕೈಬಿಟ್ಟಿದ್ದಾರೆ. ತಮ್ಮ ಅಭಿಮಾನಿಗಳು ಗ್ಲ್ಯಾಮರಸ್ ಪಾತ್ರದಲ್ಲಿ ನೋಡಲು ಇಷ್ಟಪಡುತ್ತಾರೆ. ನಾಯಕಿಯ ಪಾತ್ರವು ಡಿ- ಗ್ಲ್ಯಾಮ್‌ ಲುಕ್‌ನಲ್ಲಿ ಮೂಡಿ ಬರಲಿದೆ. ಚಿತ್ರದಲ್ಲಿ ಹೆಚ್ಚು ದೃಶ್ಯಗಳು ಬಿಳಿ ಸೀರೆ ಧರಿಸಿ ಜೈಲಿನಲ್ಲಿ ಕುಳಿತಿರುವಂತಹ ಪಾತ್ರ ಇದಾಗಿದೆ. ಹಾಗಾಗಿ ನಟಿ ಈ ಸಿನಿಮಾದಿಂದ ಹೊರಬಂದಿದ್ದಾರೆ.

ಅಂದಹಾಗೆ, ಇತ್ತೀಚೆಗೆ ಪೂಜಾ ಹೆಗ್ಡೆ ಅವರು ಮಂಗಳೂರು ಮತ್ತು ಉಡುಪಿಗೆ ಆಗಮಿಸಿದ್ದರು. ತಮ್ಮ ಸಂಬಂಧಿಕರ ಮದುವೆಯಲ್ಲಿ ನಟಿ ಮಿಂಚಿದ್ದರು. ಅದಷ್ಟೇ ಅಲ್ಲ, ಬೆಂಗಳೂರಿನ ಕಂಬಳದಲ್ಲೂ ಭಾಗಿಯಾಗಿ ಕನ್ನಡ, ತುಳು ಭಾಷೆ ಮಾತನಾಡುವ ಮೂಲಕ ಪೂಜಾ ಗಮನ ಸೆಳೆದಿದ್ದರು.

Share This Article