ಮುಂಬೈ: ನಟಿ ಪೂಜಾ ಹೆಗ್ಡೆ ಮುಂಬೈನಲ್ಲಿ ಕಟ್ಟಿದ ತಮ್ಮ ಕನಸಿನ ಮನೆಗೆ ಒಂದು ವರ್ಷವಾಗಿರುವ ಸಂಭ್ರಮದಲ್ಲಿದ್ದಾರೆ. ಈ ಸಂತೋಷವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳಲು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಒಂದನ್ನ ಶೇರ್ ಮಾಡಿದ್ದಾರೆ.
ಮನೆ ಕಟ್ಟುವ ನನ್ನ ಕನಸು ನನಸಾಗಿದೆ. ನಿಮ್ಮ ಆತ್ಮಸಾಕ್ಷಿ ಮತ್ತು ಕಠಿಣ ಪರಿಶ್ರಮವನ್ನು ನಂಬಿರಿ. ಈ ಜಗತ್ತು ನಿಮ್ಮನ್ನು ಪ್ರೀತಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಕೈಯಲ್ಲಿ ತೆಂಗಿನಕಾಯಿ ಹಿಡಿದು ಪೂಜೆಗೆ ಕುಳಿತಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೂಜಾ ಅವರ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ಶುಭಕೋರಿದ್ದಾರೆ. ಇದನ್ನೂ ಓದಿ: ಪೂಜಾ ಹೆಗ್ಡೆ ಹಾಟ್ ಫೋಟೋ ವೈರಲ್
View this post on Instagram
ಕಳೆದ ಕೆಲವು ದಿನದಗಳ ಹಿಂದೆ ಪೂಜಾ ಮಾಲ್ಡೀವ್ಸ್ಗೆ ಭೇಟಿ ನೀಡಿ ಸಖತ್ ಎಂಜಾಯ್ ಮಾಡಿ ಮನೆಗೆ ವಾಪಸಾಗಿ ಒಂದು ವಾರ ನಂತರ ಮಾಲ್ಡೀವ್ಸ್ ಡೈರಿಯ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದರು. ಪೂಜಾ ಅವರ ಫೋಟೋ ಪಡ್ಡೆ ಹುಡುಗರ ನಿದ್ದೆ ಗೆಡಿಸುವಂತೆ ಸಖತ್ ಹಾಟ್ ಆಗಿದ್ದವು.
View this post on Instagram
ಸಾಲು ಸಾಲು ಸಿನಿಮಾಗಳ ಯಶಸ್ಸಿನಲ್ಲಿ ನಟಿ ಪೂಜಾ ಹೆಗ್ಡೆ ಇದ್ದಾರೆ. ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ ಎಂದರೆ ಆ ಸಿನಿಮಾ ಹಿಟ್ ಎನ್ನುವಮಟ್ಟಿಗೆ ಹೆಸರು ಮಾಡಿ ಮುನ್ನುಗ್ಗುತ್ತಿದ್ದಾರೆ. ಹೆಸರು ಮಾಡುವ ಜೊತೆಗೆ ಹಣ ಕೂಡ ಚೆನ್ನಾಗಿ ಗಳಿಸುತ್ತಿದ್ದಾರೆ. ಮುಂಬೈನಲ್ಲಿ ಮನೆ ಕಟ್ಟಿರುವ ಪೂಜಾ ಅವರು ತಮ್ಮ ಕನಸಿನ ಮನೆಗೆ ಒಂದು ವರ್ಷದ ಸಂಭ್ರಮದಲ್ಲಿದ್ದಾರೆ .
ಒಕಾ ಲೈಲಾ ಕೋಸಂ ಚಿತ್ರದ ಮೂಲಕ ಟಾಲಿವುಡ್ಗೆ ಪರಿಚಯವಾದ ಪೂಜಾ ಹೆಗ್ಡೆ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜನವರಿ 14 ರಂದು ರಾಧೆ ಶ್ಯಾಮ್ ಸಿನಿಮಾ 5 ಭಾಷೆಯಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮೂಂದೂಡಲ್ಪಟ್ಟಿದೆ. ಆಚಾರ್ಯ, ಬೀಸ್ಟ್, ಸರ್ಕಸ್ ಸಿನಿಮಾಗಳಲ್ಲಿ ಪೂಜಾ ಹೆಗ್ಡೆ ನಟಿಸಿದ್ದಾರೆ. ರಿಲೀಸ್ಗೆ ಈ ಎಲ್ಲಾ ಸಿನಿಮಾಗಳು ತಯಾರಾಗಿವೆ. ಇದನ್ನೂ ಓದಿ: ಮುದ್ದು ಮಗಳಿಗೆ ಕನ್ನಡ ಕಲಿಸುತ್ತಿದ್ದಾರೆ ರಾಕಿಂಗ್ ಸ್ಟಾರ್