ಕುಡ್ಲದ ಚೆಲುವೆ ಪೂಜಾ ಹೆಗ್ಡೆ (Pooja Hegde) ಸದ್ಯ ಬಾಲಿವುಡ್ (Bollywood) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮುಂಬೈನಲ್ಲಿ ನಟಿ ಲಕ್ಷುರಿ ಮನೆಯೊಂದನ್ನು ಖರೀದಿಸಿದ್ದಾರೆ. ಐಷಾರಾಮಿ ಮನೆ ಖರೀದಿ ಮಾಡಿರುವ ನಟಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಮುಂಬೈನ ಬಾಂದ್ರಾದಲ್ಲಿ 45 ಕೋಟಿ ರೂ. ಮೌಲ್ಯದ ಮನೆ ಖರೀದಿ ಮಾಡಿದ್ದಾರೆ. ಮನೆಯ ವಿಸ್ತೀರ್ಣ 4000 ಚದರ ಅಡಿ ಎಂದು ಹೇಳಲಾಗ್ತಿದೆ. ಬಾಲಿವುಡ್ ಸ್ಟಾರ್ ನಟಿ- ನಟಿಯರು ವಾಸಿಸುವ ಏರಿಯಾದಲ್ಲಿಯೇ ಮನೆ ಖರೀದಿ ಮಾಡಿದ್ದಾರೆ.
ಟಾಲಿವುಡ್‌ನಲ್ಲಿ ರಶ್ಮಿಕಾ, ಶ್ರೀಲೀಲಾ ಹವಾ ಜಾಸ್ತಿ ಆದ್ಮೇಲೆ ಬಾಲಿವುಡ್‌ನತ್ತ ನಟಿ ಮುಖ ಮಾಡಿದ್ದರು. ಹಿಂದಿ ಸಿನಿಮಾಗಳಲ್ಲಿ ಅವಕಾಶಗಳು ಅರಸಿ ಬರುತ್ತಿದ್ದಂತೆ ಈಗ ತೆಲುಗಿನಲ್ಲಿಯೂ ನಟಿಗೆ ಕರೆ ಬರುತ್ತಿದೆ. ಇದನ್ನೂ ಓದಿ:ಸೌಂದರ್ಯ ಜಗದೀಶ್ ಆತ್ಮಹತ್ಯೆ- ಗೆಳೆಯ ಶ್ರೇಯಸ್ ಹೇಳಿದ್ದೇನು?
ಶಾಹಿದ್ ಕಪೂರ್ (Shahid Kapoor) ಜೊತೆ ಹೊಸ ಸಿನಿಮಾ, ಸುನೀಲ್ ಶೆಟ್ಟಿ ಪುತ್ರನಿಗೆ ನಾಯಕಿಯಾಗಿ ಹೊಸ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ನಾಗಚೈತನ್ಯ ಮುಂಬರುವ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ನಾನಿ ಜೊತೆ ನಟಿಸುವ ಅವಕಾಶ ಕೂಡ ಸಿಕ್ಕಿದೆ.