ಮುಂಬೈ: ಎನ್‌ಡಿಎ (NDA) ಜೊತೆ ಕೈ ಜೋಡಿಸಿರುವ ಅಜಿತ್ ಪವಾರ್ (Ajit Pawar) ಮೈತ್ರಿ ಕೂಟದಿಂದ ಹೊರ ಹೋಗುತ್ತಾರಾ ಈ ಪ್ರಶ್ನೆ ಈಗ ಎದ್ದಿದೆ.
ಮನೆಯೊಳಗೆ ರಾಜಕೀಯ ಪ್ರವೇಶಿಸಬಾರದು. ಕುಟುಂಬದ ಮಧ್ಯೆ ಒಡಕು ಬಂದರೆ ಸಮಾಜ ಇಷ್ಟಪಡುವುದಿಲ್ಲ ಎಂದು ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ (Maharashtra) ಮುಖ್ಯಮಂತ್ರಿ ಅಜಿತ್ ಪವಾರ್ ತಮ್ಮ ತಪ್ಪನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಆಯ್ತು ಈಗ ಪಾಕ್‌ನಲ್ಲಿ ಪ್ರತಿಭಟನೆ – ಇಮ್ರಾನ್ ಬಿಡುಗಡೆಗೆ ಆಗ್ರಹಿಸಿ ಬೀದಿಗಿಳಿದ ಸಾವಿರಾರು ಬೆಂಬಲಿಗರು
ಇತ್ತೀಚೆಗೆ ಲೋಕಸಭಾ ಚುನಾವಣೆಯಲ್ಲಿ ಅಜಿತ್ ತನ್ನ ಪತ್ನಿ ಸುನೇತ್ರಾ ಪವಾರ್‌ರವರನ್ನು ಸೋದರ ಸಂಬಂಧಿ ಎನ್‌ಸಿಪಿ (ಶರದ್) ನಾಯಕಿ ಸುಪ್ರಿಯಾ ಸುಳೆ (Supriya Sule) ವಿರುದ್ಧ ಕಣಕ್ಕಿಳಿಸಿದ್ದರು. ಇದರಲ್ಲಿ ತಾವು ತಪ್ಪು ಮಾಡಿರುವುದಾಗಿ ಸಾರ್ವಜನಿಕವಾಗಿ ಒಪ್ಪಿಕೊಂಡರು.
ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಕಾರಣ ಈಗ ಆಜಿತ್ ತಮ್ಮ ತಪ್ಪನ್ನು ಒಪ್ಪಿಕೊಂಡಿರುವುದು ಎಲ್ಲರಲ್ಲೂ ಕುತೂಹಲವನ್ನು ಮೂಡಿಸಿದೆ. ಕೆಲವೇ ದಿನಗಳಲ್ಲಿ ಅವರು `ಮಹಾಯುತಿ’ ಮೈತ್ರಿ ಕೂಟದಿಂದ ಹೊರಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ಕಂಡಕ್ಟರ್‌ಗಳಿಗೆ ಫಜೀತಿ ತಂದ ಶಕ್ತಿ ಯೋಜನೆ – ಮಹಿಳಾ ಪ್ರಯಾಣಿಕರಿಂದ ಕೆಲಸ ಕಳೆದುಕೊಳ್ಳೋ ಭೀತಿ
ಶರದ್ ಪವಾರ್ (Sharad Pawar) ಅವರು ಎನ್‌ಸಿಪಿಯಿಂದ ಹೊರಬಂದು ತಮ್ಮದೇ ಪಕ್ಷವನ್ನು ಸ್ಥಾಪಿಸಿ ಬಿಜೆಪಿ-ಶಿವಸೇನೆ ಜೊತೆ ಅಜಿತ್ ಸೇರಿಕೊಂಡು ಈ ಹಿಂದೆ ಡಿಸಿಎಂ ಆಗಿದ್ದರು. ಆದರೆ ಈಗ ಶಿವಸೇನೆ ಜೊತೆ ಅಜಿತ್‌ಗೂ ಸಂಬಂಧ ಸರಿಯಿಲ್ಲ. ಹೀಗಾಗಿ ಅವರು ಮತ್ತೆ ಎನ್‌ಸಿಪಿ (ಶರದ್ ಬಣ) ಗೆ ಸೇರುವ ಸಾಧ್ಯತೆಗಳು ಇವೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ಲೋಕಸಭಾ ಚುನಾವಣೆಯಲ್ಲೂ ಅಜಿತ್ ಪವಾರ್ ಬಣದ ಅಭ್ಯರ್ಥಿಗಳು ಸೋತಿದ್ದರು. ಹೀಗಾಗಿ ಚುನಾವಣೆ ಘೋಷಣೆಯಾಗುವ ಮೊಲದು ಮೈತ್ರಿಯಿಂದ ಅಜಿತ್ ಪವಾರ್ ಹೊರ ಬರುವ ಸಾಧ್ಯತೆಯಿದೆ ಎಂಬ ಸುದ್ದಿಗಳು ಈಗ ಪ್ರಕಟವಾಗುತ್ತಿವೆ. ಇದನ್ನೂ ಓದಿ: MUDA Scam | ಹೈಕೋರ್ಟ್ ತೀರ್ಪಿನ ಬಳಿಕ ರಾಜ್ಯದಲ್ಲಿ ಅಸಲಿ ಗೇಮ್ ಶುರು?