ಬೆಂಗಳೂರು: ಸ್ಯಾಂಡಲ್ವುಡ್ ನಟಿ ಶೃತಿ ಹರಿಹರನ್ ಅವರಿಗೆ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ 2018ರಲ್ಲಿ ನಟಿ ಶೃತಿಹರಿಹರನ್ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶೃತಿ ಹರಿಹರನ್ ದೂರಿನ್ವಯ ಅರ್ಜುನ್ ಸರ್ಜಾ ವಿರುದ್ಧ 354, 354ಚಿ ಮತ್ತು 506 ಐಪಿಸಿ ಅಡಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.
ಮೂರು ವರ್ಷಗಳ ಬಳಿ ಇದೀಗ ಮತ್ತೆ ಮೀಟೂ ಪ್ರಕರಣ ಕುರಿತಂತೆ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ಶೃತಿ ಹರಿಹರನ್ಗೆ ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಇದನ್ನೂ ಓದಿ: ಅಸಹ್ಯವಾಗಿ ನೋಡಿ ಹಿಂಭಾಗದಿಂದ ಅಪ್ಪಿಕೊಂಡ್ರು- ಶೃತಿ ದೂರಿನಲ್ಲಿ ಬೆಚ್ಚಿ ಬೀಳೋ ಆರೋಪ
ನವೆಂಬರ್ 2015ರಲ್ಲಿ ಹೆಬ್ಬಾಳ ಹಾಗೂ ದೇವನಹಳ್ಳಿಯಲ್ಲಿ ವಿಸ್ಮಯ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಶೃತಿ ಹರಿಹರನ್ ಆರೋಪಿಸಿದ್ದರು. ಈ ಘಟನೆ ನಡೆದ ಎರಡು ವರ್ಷಗಳ ನಂತರ ಶೃತಿ ಹರಿಹರನ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಒಮಿಕ್ರಾನ್ ಆತಂಕ – ಸೋಂಕಿತ ರಾಷ್ಟ್ರಗಳಿಂದ ಬರೋರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ