ಬೆಂಗಳೂರು : ಪೊಲೀಸ್ ಆಯುಕ್ತ ಕಮಲ್ ಪಂತ್‍ಗೆ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ.
ಸೋಂಕು ದೃಢವಾದ ಹಿನ್ನೆಲೆಯಲ್ಲಿ ಅವರು ಸದ್ಯ ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಆದರೆ ಸಾವಿನ ಪ್ರಮಾಣ ಕಡಿಮೆಯಾಗುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಶೀತ, ಜ್ವರ ಜನರನ್ನು ಕಾಡುತ್ತಿದೆ.
Advertisement
Advertisement
ಸುದ್ದಿಗಾರರೊಂದಿಗೆ ಮಾತನಾಡಿ ಆರೋಗ್ಯ ಸಚಿವರಾದ ಡಾ. ಕೆ ಸುಧಾಕರ್ ಅವರು, ರಾಜ್ಯದಲ್ಲಿ ನೆಗಡಿ, ಶೀತ ಹೆಚ್ಚಳ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇದು ಸೀಸನಲ್ ಫ್ಲೋ. ಡಿಸೆಂಬರ್ ನಿಂದ ಫೆಬ್ರವರಿವರೆಗೂ ಪ್ರತಿ ವರ್ಷ ಅದು ಇರುತ್ತೆ. ಲಕ್ಷಣ ಇರೋರಿಗೆ ಆದ್ಯತೆ ಮೇಲೆ ಟೆಸ್ಟ್ ಮಾಡ್ತಿದ್ದೇವೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಾವು ಹೆಚ್ಚು ಟೆಸ್ಟ್ ಮಾಡುತ್ತಿದ್ದೇವೆ. ಬೇರೆ ರಾಜ್ಯದಲ್ಲಿ ಒಂದು ರಾಜ್ಯ ಕಡಿಮೆ 35 ಸಾವು ತೋರಿಸಿದ್ದಾರೆ. ನಮ್ಮಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಆಸ್ಪತ್ರೆಗೆ ಸೆರೋರ ಪ್ರಮಾಣವೂ ಕಡಿಮೆ ಇದೆ. ನಾವು ಮುಂಚಿತವಾಗಿ ಎಲ್ಲಾ ಕ್ರಮಗಳನ್ನ ತೆಗೆದುಕೊಳ್ತಿರೋದ್ರಿಂದ ನಮ್ಮಲ್ಲಿ ನಿಯಂತ್ರಣದಲ್ಲಿ ಇದೆ ಎಂದಿದ್ದಾರೆ. ಇದನ್ನೂ ಓದಿ: ಪಾಕ್ ಪ್ರಧಾನಿ ಅಂತರಾಷ್ಟ್ರೀಯ ಭಿಕ್ಷುಕ: ಸಿರಾಜುಲ್ ಹಕ್
Advertisement
Advertisement
ಸಿಎಂ ಸಭೆ ಕರೆದಿದ್ದಾರೆ. ಪಾಸಿಟಿವ್ ಕೇಸ್, ಆಸ್ಪತ್ರೆಗೆ ಸೇರೋರು, ಮಕ್ಕಳ ಬಗ್ಗೆ ಸಭೆ ಆಗುತ್ತೆ. ತಜ್ಞರು, ಸಚಿವರು ಸಭೆಯಲ್ಲಿ ಇರುತ್ತಾರೆ. ತಜ್ಞರ ಸಭೆ ಬಳಿಕ ನಿರ್ಧಾರ ಘೋಷಣೆ ಮಾಡ್ತೀವಿ. ವೀಕೆಂಡ್ ಕಫ್ರ್ಯೂ ಬಗ್ಗೆಯೂ ಇವತ್ತಿನ ಸಭೆಯಲ್ಲಿ ಚರ್ಚೆ ಮಾಡ್ತೀವಿ. ನಾವು ಎಲ್ಲಾ ಕ್ರಮ ತೆಗೆದುಕೊಂಡಿದ್ದೇವೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವುದು ನಮ್ಮ ಕೆಲಸ. ಹೆಚ್ಚು ಸಾವು-ನೋವು ಆಗಬಾರದು ಅನ್ನೋದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಜ್ರ ಖಚಿತ ಐಫೋನ್ ಕದ್ದು ವಾಟ್ಸಪ್ ಸ್ಟೇಟಸ್‍ನಲ್ಲಿ ಸಿಕ್ಕಿ ಬಿದ್ರು