‘ಪುಷ್ಪ’ ಸಿನಿಮಾದ ‘ಹೂ ಅಂತೀಯಾ ಮಾವ..’ ಸಾಂಗ್ ಮೂಲಕ ಸಮಂತಾ ಅವರ ನೃತ್ಯ ಫುಲ್ ಪಾಪ್ಯುಲರ್ ಆಗಿತ್ತು. ಈ ಸಾಂಗ್ ಕೋರಿಯೋಗ್ರಫಿ ಮಾಡಿದ್ದ ಗಣೇಶ್ ಆಚಾರ್ಯ ಅವರಿಗೆ ಸಂಕಟ ಎದುರಾಗಿದೆ. ಮುಂಬೈ ಪೊಲೀಸರು ಗಣೇಶ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಚಾರ್ಜ್ ಶೀಟ್ ಕೊಟ್ಟಿದ್ದಾರೆ.
ಮುಂಬೈನ ಓಶಿವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಗಣೇಶ್ ವಿರುದ್ಧ ದೂರು ದಾಖಲಿಸಿತ್ತು. ಮುಂಬೈನ ಉಪನಗರದಲ್ಲಿರುವ ಮ್ಯಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಈ ವಾರ ಗಣೇಶ್ ಅವರಿಗೆ ಚಾರ್ಜ್ ಶೀಟ್ ಕೊಟ್ಟಿದ್ದಾರೆ. ಈ ಹಿನ್ನೆಲೆ ಗಣೇಶ್ ಮತ್ತು ಅವರ ಸಹಾಯಕರ ವಿರುದ್ಧ ಸೆಕ್ಷನ್ 354 ಎ, 354 ಸಿ, 354 ಡಿ, 504, 509, 506, 323 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಮಾಧ್ಯಮಗಳು ಗಣೇಶ್ ಅವರನ್ನು ಪ್ರಶ್ನಿಸಿದ್ದು ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಮ್ಯಾರೇಜ್ ಫಿಕ್ಸ್, ಹುಡುಗ ಸಸ್ಪೆನ್ಸ್
ಈ ಕುರಿತು ಗಣೇಶ್ ಆಚಾರ್ಯ ಪರ ವಕೀಲ ರವಿ ಸೂರ್ಯವಂಶಿ ಪ್ರತಿಕ್ರಿಯೆ ನೀಡಿದ್ದು, ನನ್ನ ಬಳಿ ಚಾರ್ಜ್ ಶೀಟ್ ಇಲ್ಲ. ಆದ್ದರಿಂದ ನಾನು ಏನನ್ನೂ ಹೇಳಲಾರೆ. ಆದರೆ ಈ ಎಲ್ಲ ಸೆಕ್ಷನ್‍ಗಳು ಜಾಮೀನು ನೀಡಬಹುದಾಗಿದೆ ಎಂದು ಹೇಳಿದ್ದಾರೆ.
ಏನಿದು ಘಟನೆ?
ನೃತ್ಯಗಾರ್ತಿಯೊಬ್ಬರು 2020ರಲ್ಲಿ ಗಣೇಶ್ ಅವರ ವಿರುದ್ಧ ಲೈಂಗಿಕ ಕಿರುಕುಳದ ದೂರನ್ನು ನೀಡಿದ್ದರು. ನೃತ್ಯಗಾರ್ತಿಯೂ ದೂರಿನಲ್ಲಿ, ಗಣೇಶ್ ಅವರು ಅಶ್ಲೀಲ ಕಾಮೆಂಟ್, ವೀಡಿಯೋ ತೋರಿಸಿ ನನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಚಿತ್ರರಂಗದಲ್ಲಿ ಯಶಸ್ವಿಯಾಗಬೇಕಾದರೆ ದೈಹಿಕವಾಗಿ ಸಂಬಂಧ ಹೊಂದಬೇಕು ಎಂದು ನನಗೆ ಗಣೇಶ್ ಅವರು ಹಿಂಸೆ ಕೊಡುತ್ತಿದ್ದಾರೆ. ಇದಕ್ಕೆ ನಾನು ನಿರಾಕರಿಸಿದ್ದಕ್ಕೆ ಅವರ ಸಹಾಯಕರು ನನ್ನನ್ನು ಥಳಿಸಿ, ಮಾನಹಾನಿ ಮಾಡಿದರು. ಈ ವೇಳೆ ನಾನು ಅವರ ವಿರುದ್ಧ ನಾನ್ ಕಾಗ್ನಿ ಸಬಲ್ ಪ್ರಕರಣ ದಾಖಲಿಸಿಕೊಂಡಿದೆ. ನಂತರ ಲಾಯರ್ ಬಳಿ ಹೋದೆ ಎಂದು ವಿವರಿಸಿದರು. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ
ಟಾಲಿವುಡ್‍ನಲ್ಲಿ ಫೇಮಸ್ ಆಗಿರುವ ಗಣೇಶ್ ಅವರು ಸೂಪರ್ ಹಿಟ್ ಬಾಲಿವುಡ್ ಸಾಂಗ್‍ಗಳಿಗೆ ಕೋರಿಯೋಗ್ರಫಿ ಮಾಡಿದ್ದಾರೆ. ಅಲ್ಲದೇ ಸುದೀಪ್ ನಟನೆಯ ‘ಪೈಲ್ವಾನ್’ ಸಿನಿಮಾಗೂ ಸಹ ಡ್ಯಾನ್ಸ್ ಕೋರಿಯೋಗ್ರಫಿ ಮಾಡಿದ್ದು, ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದರು.