ಲಕ್ನೋ: ಪೂರ್ವಾನುಮತಿ ಇಲ್ಲದೆ ಮನೆಯೊಂದರಲ್ಲಿ ಸಾಮೂಹಿಕವಾಗಿ ನಮಾಜ್ ಮಾಡಿದ್ದ ಹಿನ್ನೆಲೆಯಲ್ಲಿ 26 ಮುಸ್ಲಿಮರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಮೊರಾದಾಬಾದ್ ಜಿಲ್ಲೆಯ ಗ್ರಾಮವೊಂದರಲ್ಲಿ ಮಸೀದಿ ಇರಲಿಲ್ಲ. ಹೀಗಾಗಿ ಕೆಲವು ನಿವಾಸಿಗಳು ಸಭೆ ಹಿನ್ನೆಲೆಯಲ್ಲಿ ಒಂದೇ ಮನೆಯೊಳಗೆ ಸೇರಿದ್ದಾರೆ. ಈ ಸಂದರ್ಭದಲ್ಲಿ ನಮಾಜ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement
I’m sure if one of the neighbours had a hawan with 26 friends & relatives that would be perfectly acceptable. It’s not the “mass gathering” that is the problem, it’s the offering of namaz. https://t.co/DUrI1EqVlI
— Omar Abdullah (@OmarAbdullah) August 29, 2022
ಘಟನೆಗೆ ಸಂಬಂಧಿಸಿ ಸ್ಥಳೀಯ ನಿವಾಸಿ ಚಂದ್ರಪಾಲ್ ಸಿಂಗ್ ದೂರು ನೀಡಿದ್ದಾರೆ. ಈ ದೂರಿನಲ್ಲಿ ಸಭೆಯಲ್ಲಿ ನಮಾಜ್ ಓದುವ ಮೂಲಕ ಜನರ ಜನರ ಮಧ್ಯೆಯೇ ದ್ವೇಷವನ್ನು ಹರಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 16 ಜನರನ್ನು ಪ್ರಸ್ತಾಪಿಸಿದ್ದು, ಇನ್ನುಳಿದ 10 ಜನರು ಅಪರಿಚಿತರಾಗಿದ್ದಾರೆ. ಆದರೆ ಅವರೆಲ್ಲರೂ ಎಲ್ಲರೂ ಸ್ಥಳೀಯರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಒರಟು ಮನುಷ್ಯ ಅಂದುಕೊಂಡಿದ್ದೆ – ಆಜಾದ್
Advertisement
Advertisement
ಘಟನೆಗೆ ಸಂಬಂಧಿಸಿ ಮನೆಯ ಕಾಂಪೌಂಡ್‍ನಲ್ಲಿ ಅನೇಕ ಜನರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಭೆಯಲ್ಲಿ ಭಾಗವಹಿಸಿದ್ದವರ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರದ ರಸ್ತೆ ಅಗೆದು ಸಂಚಾರ ಬಂದ್ ಮಾಡಿಸಿದ ಬಿಜೆಪಿ ಮುಖಂಡ