LatestLeading NewsMain PostNational

ಪ್ರಧಾನಿ ಮೋದಿ ಒರಟು ಮನುಷ್ಯ ಅಂದುಕೊಂಡಿದ್ದೆ – ಆಜಾದ್

ನವದೆಹಲಿ: ಕಾಂಗ್ರೆಸ್ ಮಾಜಿ ನಾಯಕ ಹಾಗೂ ಮಾಜಿ ಸಿಎಂ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಆಜಾದ್, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಜನರು ಸಾವನ್ನಪ್ಪಿದ ಬಸ್ ದುರಂತವನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಗುಲಾಂ ನಬಿ ಆಜಾದ್‌ ಕಾರ್ಯ ನೆನೆದು ಭಾವುಕರಾದ ಪ್ರಧಾನಿ ಮೋದಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಗುಜರಾತ್ ಪ್ರವಾಸಿ ಬಸ್‌ನೊಳಗೆ ಗ್ರೆನೇಡ್ ಸ್ಫೋಟಗೊಂಡಿದ್ದರಿಂದ ಸ್ಥಳದಲ್ಲೇ ನೂರಾರು ಜನ ಸಾವನ್ನಪ್ಪಿದ್ದರು. ಇದು ನಾನು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದಾಗ ಸಂಭವಿಸಿದ ಘಟನೆ. ಪ್ರಧಾನಿ ಮೋದಿ ಆಗ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು, ಅಂದು ನನಗೆ ಕರೆ ಮಾಡಿದ್ದರು, ಘಟನೆಯ ಬಗ್ಗೆ ವಿವರ ಪಡೆಯುವ ತುಡಿತ ಅವರಿಗಿತ್ತು. ನಾನು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಕಾರ್ಯದಲ್ಲಿ ನಿರತನಾಗಿದ್ದ ಕಾರಣ ಈ ಕ್ಷಣದಲ್ಲಿ ಮಾತನಾಡಲು ಸಾಧ್ಯವಿಲ್ಲವೆಂದು ತಿಳಿಸುವಂತೆ ನನ್ನ ಸಿಬ್ಬಂದಿಗೆ ಹೇಳಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

ಅಲ್ಲದೇ ಕಳೆದ ವರ್ಷ ರಾಜ್ಯ ಸಭೆಗೆ ವಿದಾಯ ಹೇಳುವ ಸಂದರ್ಭದಲ್ಲಿ ನನ್ನ ನಿಜವಾದ ಸ್ನೇಹಿತ ಗುಲಾಂ ನಬಿ ಆಜಾದ್ ಅವರಿಗೆ ಎಂದು ಭಾವನಾತ್ಮಕವಾಗಿ ವಿದಾಯ ಹೇಳೀದ್ದನ್ನೂ ಸ್ಮರಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಒಳ್ಳೆಯ ವ್ಯಕ್ತಿ ಆದರೆ ರಾಜಕೀಯಕ್ಕೆ ಯೋಗ್ಯನಲ್ಲ: ಆಜಾದ್

`ನಾನು ಪ್ರಧಾನಿ ಮೋದಿಯನ್ನು ಒರಟು ಮನುಷ್ಯ ಎಂದು ಭಾವಿಸಿದ್ದೆ, ಆದರೆ ಅವರು ಮಾನವೀಯತೆ ತೋರಿಸಿದರು’ ಎಂದು ಆಜಾದ್ ಹೇಳಿಕೊಂಡಿದ್ದಾರೆ.

Live Tv

Leave a Reply

Your email address will not be published.

Back to top button