ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಪೋಕ್ಸೊ ಕೇಸ್ (POCSO Case) ತನಿಖೆ ಎದುರಿಸಲು ಇಂದು ಸಿಐಡಿಗೆ (CID) ವಿಚಾರಣೆಗೆ ಹಾಜರಾಗಲಿದ್ದಾರೆ. ಬರೋಬ್ಬರಿ ಮೂರು ತಿಂಗಳ ಬಳಿಕ ವಿಚಾರಣೆ ಎದುರಿಸಲು ಬಿಎಸ್ ಯಡಿಯೂರಪ್ಪ ಸಿಐಡಿ ಕಚೇರಿಗೆ ತನಿಖೆಗೆ ಹಾಜರಾಗುತ್ತಿದ್ದಾರೆ.
ಮಾರ್ಚ್ 14 ರಂದು ಯಡಿಯೂರಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಪ್ರಕಣದ ಹೆಚ್ಚಿನ ತನಿಖೆಗೆ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿ ಆದೇಶ ಮಾಡಿತ್ತು. ಇದಾದ ಬಳಿಕ ಸಿಐಡಿ ಬಿಎಸ್‌ವೈ ಅವರನ್ನು ಕರೆದು ವಾಯ್ಸ್ ಸ್ಯಾಂಪಲ್ ಪಡೆದು ತನಿಖಾಧಿಕಾರಿಗಳು ಅವರನ್ನು ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಇವಿಎಂ ಅನ್‌ಲಾಕ್ ಮಾಡಲು ಮೊಬೈಲ್ ಫೋನ್‌ನಲ್ಲಿ ಯಾವುದೇ ಒಟಿಪಿ ಇಲ್ಲ – ಚುನಾವಣಾ ಆಯೋಗ ಸ್ಪಷ್ಟನೆ
Advertisement
Advertisement
ಹೆಚ್ಚಿನ ವಿಚಾರಣೆಗೆ ಬಿಎಸ್‌ವೈಗೆ ಸಿಐಡಿ ನೋಟಿಸ್ ನೀಡಿತ್ತು. ಬಿಎಸ್‌ವೈ ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೇಳಿದ್ದರಿಂದ ಸಿಐಡಿ ವಾರೆಂಟ್ ಜಾರಿ ಮಾಡಿ ಬಂಧನಕ್ಕೆ ಮುಂದಾಗಿತ್ತು. ಈ ವೇಳೆ ಕೋರ್ಟ್ ಬಂಧಿಸದಂತೆ ತಡೆ ನೀಡಿ ಇಂದು ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿದ್ದರಿಂದ ಸಿಐಡಿ ಮುಂದೆ ಬಿಎಸ್‌ವೈ ಇಂದು ತನಿಖೆಗೆ ಹಾಜರಾಗಲಿದ್ದಾರೆ. ತನಿಖಾಧಿಕಾರಿ ಪೃಥ್ವಿ ಎದರು ಬಿಎಸ್ ಯಡಿಯೂರಪ್ಪ ತನಿಖೆಗೆ ಹಾಜರಾಗಲಿದ್ದಾರೆ. ಇದನ್ನೂ ಓದಿ: ದರ್ಶನ್‌ಗೂ ಆರೋಪಿಗೂ ಸಂಬಂಧವೇ ಇಲ್ಲ – ಸ್ನೇಹಿತನ ಮಾತು ಕೇಳಿ ಶೆಡ್‌ನಲ್ಲಿ ಎಲೆಕ್ಟ್ರಿಕ್ ಶಾಕ್ ನೀಡಿ ಸಿಕ್ಕಿಬಿದ್ದ
Advertisement