ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ವಾರಣಾಸಿ ಕ್ಷೇತ್ರದಿಂದ (Varanasi Lok Sabha Constituency) ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ. ಆದರೆ ಈ ಬಾರಿ ಗೆಲುವಿನ ಅಂತರ ಭಾರೀ ಕಡಿಮೆಯಾಗಿದೆ.
ಮೋದಿ ಅವರು 1,52,513 ಮತಗಳ ಅಂತರದಿಂದ ಕಾಂಗ್ರೆಸ್ ಅಜಯ್ ರೈ ಅವರನ್ನು ಸೋಲಿಸಿದ್ದಾರೆ. ಮೋದಿ ಅವರು 6,12,970 ಮತಗಳನ್ನು ಪಡೆದರೆ ಅಜಯ್ ರೈ ಅವರು 4,60,457 ಮತಗಳನ್ನು ಪಡೆದರು.
Advertisement
2014 ರಂದು ಮೊದಲ ಬಾರಿಗೆ ವಾರಣಾಸಿಯಿಂದ (Ajay Rai) ಸ್ಪರ್ಧೆ ಮಾಡಿದಾಗ ಮೋದಿ 5,81,022 ಮತಗಳನ್ನು ಪಡೆದು 3,71,784 ಮತಗಳ ಅಂತರದಿಂದ ಜಯಗಳಿಸಿದ್ದರು.
Advertisement
Advertisement
2019 ರಲ್ಲಿ ಎರಡನೇ ಬಾರಿ ಮೋದಿ ಸ್ಪರ್ಧಿಸಿ 6,74,664 ಮತಗಳನ್ನು ಪಡೆದು 4,79,505 ಮತಗಳ ಅಂತರದಿಂದ ವಿಜಯಿ ಆಗಿದ್ದರು. ಇದನ್ನೂ ಓದಿ: ಡಿಕೆ ಬ್ರದರ್ಸ್‌ಗೆ ಠಕ್ಕರ್; ಜನರ ಹೃದಯ ಗೆದ್ದ ಡಾಕ್ಟರ್ – ಮಂಜುನಾಥ್‌ಗೆ ಯಾವ ಕ್ಷೇತ್ರದಲ್ಲಿ ಎಷ್ಟು ವೋಟ್?
Advertisement
ವಿಜಯಗಳಿಸಿದ ಬೆನ್ನಲ್ಲೇ ಮೋದಿ ಸಾಮಾಜಿಕ ಜಾಲತಾಣದಲ್ಲಿ, ದೇಶದ ಜನತೆ ಸತತ ಮೂರನೇ ಬಾರಿಗೆ ಎನ್‌ಡಿಎ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಇದೊಂದು ಅಭೂತಪೂರ್ವ ಕ್ಷಣ. ಈ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ನಾನು ತಲೆಬಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.
People have placed their faith in NDA, for a third consecutive time! This is a historical feat in India’s history.
I bow to the Janata Janardan for this affection and assure them that we will continue the good work done in the last decade to keep fulfilling the aspirations of…
— Narendra Modi (@narendramodi) June 4, 2024
ನಾವು ಹೊಸ ಶಕ್ತಿ, ಹೊಸ ಉತ್ಸಾಹ ಮತ್ತು ಅವರ ಆಕಾಂಕ್ಷೆಗಳನ್ನು ಪೂರೈಸಲು ಹೊಸ ಸಂಕಲ್ಪಗಳೊಂದಿಗೆ ಮುನ್ನಡೆಯುತ್ತೇವೆ ಎಂದು ನಾನು ದೇಶವಾಸಿಗಳಿಗೆ ಭರವಸೆ ನೀಡುತ್ತೇನೆ.. ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಎಲ್ಲಾ ಕಾರ್ಯಕರ್ತರನ್ನು ನಾನು ಅಭಿನಂದಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.