ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಮೇ 30 ರಂದು ಉತ್ತರ ಪ್ರದೇಶದ ಕಾನ್ಪುರಕ್ಕೆ ಭೇಟಿ ನೀಡಲಿದ್ದು, ಪಹಲ್ಗಾಮ್‌ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಶುಭಂ ದ್ವಿವೇದಿ (Shubham Dwivedi) ಕುಟುಂಬಸ್ಥರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಪಹಲ್ಗಾಮ್ ಬಳಿಯ ಬೈಸರನ್ ಹುಲ್ಲುಗಾವಲಿನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಗೆ ಮೊದಲು ಬಲಿಯಾದವರು ಕಾನ್ಪುರದ 31 ವಯಸ್ಸಿನ ಉದ್ಯಮಿ ಶುಂಭ ದ್ವಿವೇದಿ. ದಾಳಿಯಲ್ಲಿ ಇವರ ಜೊತೆಗೆ ಒಬ್ಬ ನೇಪಾಳಿ ಪ್ರಜೆ ಸೇರಿ ಒಟ್ಟು 26 ಮಂದಿ ಪ್ರಾಣ ಕಳೆದುಕೊಂಡರು. ಇದನ್ನೂ ಓದಿ: ಸಹ ಸೈನಿಕನನ್ನು ರಕ್ಷಿಸಲು ಹೊಳೆಗೆ ಹಾರಿದ 23ರ ಯೋಧ ಪ್ರವಾಹಕ್ಕೆ ಸಿಲುಕಿ ದುರಂತ ಸಾವು
ಪಹಲ್ಗಾಮ್ ದಾಳಿಯ ಘಟನೆ ನಡೆದು ಒಂದು ತಿಂಗಳ ನಂತರ, ಇದು ಪ್ರಧಾನ ಮಂತ್ರಿಯವರ ಮೊದಲ ಭೇಟಿಯಾಗಲಿದೆ. ಫೆಬ್ರವರಿ 12 ರಂದು ವಿವಾಹವಾಗಿದ್ದ ಶುಭಂ, ತನ್ನ ಪತ್ನಿ ಮತ್ತು ಅತ್ತಿಗೆಯೊಂದಿಗೆ ಪಹಲ್ಗಾಮ್‌ಗೆ ಭೇಟಿ ನೀಡಿದ್ದರು. ಉಗ್ರರು ತಲೆಗೆ ಗುಂಡು ಹಾರಿಸಿದ್ದರಿಂದ ಸ್ಥಳದಲ್ಲೇ ಶುಭಂ ಉಸಿರುಚೆಲ್ಲಿದ್ದರು.
ಭಯೋತ್ಪಾದಕ ದಾಳಿ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆಹಾರ ಮಳಿಗೆ ಮಾಲೀಕರು ಮತ್ತು ಪೋನಿವಾಲ್ಲಾಗಳು ಮುಂತಾದ ಸ್ಥಳೀಯ ಸೇವಾ ಪೂರೈಕೆದಾರರು ಸೇರಿದಂತೆ 100 ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಿದೆ. ಅನಂತನಾಗ್‌ನ ಆದಿಲ್ ಹುಸೇನ್ ಥೋಕರ್ ಮತ್ತು ಇಬ್ಬರು ಪಾಕಿಸ್ತಾನಿ ಪ್ರಜೆಗಳಾದ ಅಲಿ ಭಾಯ್ (ತಲ್ಹಾ ಭಾಯ್) ಮತ್ತು ಹಾಶಿಮ್ ಮೂಸಾ (ಸುಲೇಮಾನ್) ರೇಖಾಚಿತ್ರಗಳನ್ನು ಬಿಡುಗಡೆ ಮಾಡಲಾಗಿದ್ದು, ಉಗ್ರರ ಪತ್ತೆಗೆ ಬಲೆಬೀಸಿದೆ. ಇದನ್ನೂ ಓದಿ: ‘ಸಿಂಧೂರ’ ಆಯ್ತು, ಈಗ ಭಗವದ್ಗೀತೆ ಶ್ಲೋಕ- ಭಾರತೀಯ ಸಂಸ್ಕೃತಿ ಪ್ರದರ್ಶಿಸಿದ ಐಶ್ವರ್ಯಾ ರೈ!