LatestLeading NewsMain PostNational

ಗಿಫ್ಟ್‌ ಸಿಟಿಯಲ್ಲಿ ಭಾರತದ ಮೊದಲ ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ವಿನಿಮಯ ಕೇಂದ್ರಕ್ಕೆ ಚಾಲನೆ – ವಿಶೇಷತೆ ಏನು?

Advertisements

ಗಾಂಧಿನಗರ: ಭಾರತದ ಮೊದಲ ಅಂತರಾಷ್ಟ್ರೀಯ ಚಿನ್ನ, ಬೆಳ್ಳಿ ವಿನಿಮಯ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿದ್ದಾರೆ.

ಗುಜರಾತಿನ ಗಾಂಧಿನಗರದಲ್ಲಿರುವ GIFT -City (ಗುಜರಾತ್ ಇಂಟರ್‌ನ್ಯಾಶನಲ್ ಫೈನಾನ್ಸ್ ಟೆಕ್-ಸಿಟಿ)ಯಲ್ಲಿ ಇಂಡಿಯಾ ಇಂಟರ್‌ನ್ಯಾಷನಲ್‌ ಬುಲಿಯನ್ ಎಕ್ಸ್‌ಚೇಂಜ್‌ (ಐಐಬಿಎಕ್ಸ್) ಸೇರಿದಂತೆ ಹಲವು ಯೋಜನೆಗಳಿಗೆ ಮೋದಿ ಇಂದು ಚಾಲನೆ ನೀಡಿದರು.

ಬುಲಿಯನ್(ಗಟ್ಟಿ) ಎಂದರೇನು?
ಭೌತಿಕ ಚಿನ್ನ ಮತ್ತು ಹೆಚ್ಚಿನ ಶುದ್ಧತೆಯ ಬೆಳ್ಳಿಯನ್ನು ಬುಲಿಯನ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಬಾರ್‌ಗಳು, ಗಟ್ಟಿಗಳು ಅಥವಾ ನಾಣ್ಯಗಳ ರೂಪದಲ್ಲಿ ಇದನ್ನು ಇರಿಸಲಾಗುತ್ತದೆ. ಈ ಬುಲಿಯನ್‍ಗಳಿಗೆ ಕಾನೂನಿನ ಮಾನ್ಯತೆ ಇದ್ದು, ಸಾಮಾನ್ಯವಾಗಿ ಕೇಂದ್ರೀಯ ಬ್ಯಾಂಕುಗಳು ಅಥವಾ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆಯಾಗಿ ಬಳಸುತ್ತಾರೆ.

ಐಐಬಿಎಕ್ಸ್ ಎಂದರೇನು?
ಖರೀದಿದಾರರು ಮತ್ತು ಮಾರಾಟಗಾರರಿಗೆ ಚಿನ್ನ ಮತ್ತು ಬೆಳ್ಳಿಯ ಜೊತೆಗೆ ಸಂಬಂಧಿತ ಉತ್ಪನ್ನಗಳನ್ನು ವ್ಯಾಪಾರ ಮಾಡಲು ಐಐಬಿಎಕ್ಸ್ ಸಹಾಯ ಮಾಡುತ್ತದೆ. ಇದೀಗ ಗುಜರಾತ್‍ನ ಗಿಫ್ಟ್ ಸಿಟಿಯಲ್ಲಿ ಸ್ಥಾಪನೆಯಾಗಿರುವ ಐಐಬಿಎಕ್ಸ್ ಕೇಂದ್ರ ಭಾರತದ ಮೊದಲ ಅಂತಾರಾಷ್ಟ್ರೀಯ ಬುಲಿಯನ್ ಎಕ್ಸ್‌ಚೇಂಜ್‌ ಆಗಿದೆ. ಇದನ್ನೂ ಓದಿ: ಅಭಿವೃದ್ಧಿ ಯಾರು ಬೇಕಾದ್ರು ಮಾಡ್ತಾರೆ, ಹಿಂದೂ ಸಮಾಜ ಉಳಿಸೋದ್ಯಾರು- ಸರ್ಕಾರಕ್ಕೆ ಬಜರಂಗದಳ ಪ್ರಶ್ನೆ

ವಿನಿಮಯ ಕೇಂದ್ರ ಸ್ಥಾಪನೆಯಾಗಿರುವ ಇಂದೇ 995ರಷ್ಟು ಪರಿಶುದ್ಧತೆಯ 1 ಕೆ.ಜಿ ಚಿನ್ನ ಹಾಗೂ 999 ಪರಿಶುದ್ಧತೆಯ 100 ಗ್ರಾಂ. ಚಿನ್ನದ ವಹಿವಾಟು ನಡೆಸಲಿದೆ. ವಿನಿಮಯ ಕೇಂದ್ರ ವಹಿವಾಟು ನಡೆಸುವ ದಿನವೇ ಹಣಕಾಸು ಮೌಲ್ಯ ಇತ್ಯರ್ಥಪಡಿಸುವ(ಟಿ+0) ಸೌಲಭ್ಯವನ್ನೂ ಒದಗಿಸುವ ಸಾಧ್ಯತೆ ಇದೆ. ಇದರ ಒಪ್ಪಂದ, ವ್ಯಾಪಾರ, ಪಟ್ಟಿ ಸೇರಿದಂತೆ ಎಲ್ಲಾ ವ್ಯವಹಾರವೂ ಅಮೆರಿಕನ್ ಡಾಲರ್ ಮೂಲಕವೇ ನಡೆಯಲಿದೆ.

ಐಐಬಿಕ್ಸ್‌ನಲ್ಲಿ ನೀಡಲಾದ ಉತ್ಪನ್ನಗಳು ಮತ್ತು ತಂತ್ರಜ್ಞಾನವು ವೈವಿಧ್ಯಮಯವಾಗಿದೆ ಮತ್ತು ವಿದೇಶದಲ್ಲಿರುವ ಹಾಂಕಾಂಗ್‌, ಸಿಂಗಾಪುರ, ದುಬೈ, ಲಂಡನ್‌, ನ್ಯೂಯಾರ್ಕ್‌, ವಿನಿಮಯ ಕೇಂದ್ರಗಳಿಗಿಂತಲೂ ಹೆಚ್ಚು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿರಲಿದೆ ಎಂದು ವರದಿಯಾಗಿದೆ.

ಇಲ್ಲಿ ಮೂರು ರೀತಿಯಲ್ಲಿ ವಿನಿಮಯ ಮಾಡಬಹುದು. ಸೀಕ್ವೆಲ್ ಗ್ಲೋಬಲ್ (ಸಿದ್ಧ ಮತ್ತು ಅನುಮೋದಿತ) ಮತ್ತು ಬ್ರಿಂಕ್ಸ್ ಇಂಡಿಯಾ (ಸಿದ್ಧ ಆದರೆ ಅಂತಿಮ ಅನುಮೋದನೆ ಬಾಕಿಯಿರುವ) ಮೂರನೆಯದು ಇನ್ನೂ ನಿರ್ಮಾಣ ಹಂತದಲ್ಲಿರುವ ಬುಲಿಯನ್‌ ಖರೀದಿ ಮಾಡಬಹುದು.

ಚೀನಾ ಬಿಟ್ಟರೆ ವಿಶ್ವದಲ್ಲೇ ಅತಿ ಹೆಚ್ಚು ಚಿನ್ನವನ್ನು ಆಮದು ಮಾಡುತ್ತಿರುವ ಎರಡನೇ ದೇಶ ಭಾರತ. ಕೋವಿಡ್‌ ಬಳಿಕ ಭಾರತದಲ್ಲಿ ಚಿನ್ನದ ಆಮದು ಹೆಚ್ಚಾಗಿದೆ. ಕಳೆದ 10 ವರ್ಷಕ್ಕೆ ಹೋಲಿಸಿದರೆ 2021ರಲ್ಲಿ ಭಾರತ ಅತಿ ಹೆಚ್ಚು ಪ್ರಮಾಣದಲ್ಲಿ ಚಿನ್ನವನ್ನು ಆಮದು ಮಾಡಿದೆ ಎಂದು ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ಹೇಳಿದೆ. ಇದನ್ನೂ ಓದಿ: ಅಕ್ರಮ ಬಾರ್ ಆರೋಪ- ಸ್ಮೃತಿ ಪುತ್ರಿ ವಿರುದ್ಧದ ಟ್ವೀಟ್‌ಗಳನ್ನು 24 ಗಂಟೆಯೊಳಗೆ ಅಳಿಸಲು ನ್ಯಾಯಾಲಯ ಆದೇಶ

24 ಕ್ಯಾರೆಟ್ ಚಿನ್ನ Vs 22 ಕ್ಯಾರೆಟ್ ಚಿನ್ನ:
24 ಕ್ಯಾರೆಟ್ ಶುದ್ಧ ಚಿನ್ನವಾಗಿದ್ದು 22 ಕ್ಯಾರೆಟ್‍ಗೆ ಹೋಲಿಕೆ ಮಾಡಿದರೆ ಮೃದು ಇರುತ್ತದೆ ಮತ್ತು ತುಂಡಾಗುತ್ತದೆ. ಆದರೆ ಶುದ್ಧವಾಗಿರುವ ಕಾರಣ ಬೆಲೆ ದುಬಾರಿಯಾಗಿರುತ್ತದೆ. 22 ಕ್ಯಾರೆಟ್ ನಲ್ಲಿ 22 ಭಾಗ ಶುದ್ಧ ಚಿನ್ನವಾಗಿದ್ದರೆ 2 ರಷ್ಟು ಭಾಗ ತಾಮ್ರ ಅಥವಾ ಬೆಳ್ಳಿಯ ಮಿಶ್ರಣ ಮಾಡಲಾಗುತ್ತದೆ. ಹೀಗಾಗಿ ಈ ಚಿನ್ನ ಗಟ್ಟಿ ಇರುತ್ತದೆ 24 ಕ್ಯಾರೆಟ್‍ಗೆ ಹೋಲಿಸಿದರೆ ಬೆಲೆ ಕಡಿಮೆ ಇರುತ್ತದೆ.

Live Tv

Leave a Reply

Your email address will not be published.

Back to top button