ಅಭಿವೃದ್ಧಿ ಯಾರು ಬೇಕಾದ್ರು ಮಾಡ್ತಾರೆ, ಹಿಂದೂ ಸಮಾಜ ಉಳಿಸೋದ್ಯಾರು- ಸರ್ಕಾರಕ್ಕೆ ಬಜರಂಗದಳ ಪ್ರಶ್ನೆ
- ಒಂದಾಗದಿದ್ದರೆ ಹಿಂದೂಗಳಿಗೆ ಉಳಿಗಾಲವಿಲ್ಲವೆಂದು ಎಚ್ಚರಿಕೆ

ಚಿಕ್ಕಮಗಳೂರು: ಮಂಗಳೂರಿನ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆಗೆ ಮಲೆನಾಡಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಒಂದೆಡೆ ಸರ್ಕಾರದ ಬೇಜಾವಾಬ್ದಾರಿ ವಿರುದ್ಧ ಯುವಮೋರ್ಚಾ ಕಾರ್ಯಕರ್ತರು ರಾಜೀನಾಮೆ ನೀಡುತ್ತಿದ್ದರೆ, ಮತ್ತೊಂದೆಡೆ ಪಟ್ಟಣಗಳನ್ನ ಬಂದ್ ಮಾಡುತ್ತಾ ಸೂಕ್ತ ನ್ಯಾಯಕ್ಕೆ ಆಗ್ರಹಿಸಿದ್ದಾರೆ.
ನಿನ್ನೆಯಷ್ಟೇ ಕೊಪ್ಪ ಪಟ್ಟಣವನ್ನ ಬಂದ್ ಮಾಡಿದ್ದ ಹಿಂದೂ ಸಂಘಟನೆ ಕಾರ್ಯಕರ್ತರು, ಇಂದು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣವನ್ನ ಬಂದ್ ಮಾಡಿ ಸರ್ಕಾರದ ವಿರುದ್ಧ ಆಸಮಾಧಾನ ಹೊರಹಾಕಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಸಂಜೆವರೆಗೂ ಬಾಳೆಹೊನ್ನೂರು ಪಟ್ಟಣ ಸಂಪೂರ್ಣ ಸ್ಥಬ್ಧವಾಗಿತ್ತು. ಅಗತ್ಯ ವಸ್ತುಗಳನ್ನ ಹೊರತುಪಡಿಸಿ ಅಂಗಡಿ-ಮುಂಗಟ್ಟುಗಳ ಬಾಗಿಲು ಬಂದ್‌ಮಾಡಿ ವರ್ತಕರು ಕೂಡ ಬಂದ್‌ಗೆ ಬೆಂಬಲ ಸೂಚಿಸಿದ್ದರು. ಇದನ್ನೂ ಓದಿ: ನಟಿ ಅರ್ಪಿತಾ ಮುಖರ್ಜಿ ಮನೆ ಮೇಲೆ ಇಡಿ ದಾಳಿ: ‘ಸೆಕ್ಸ್ ಆಟಿಕೆ’ ಕಂಡು ಅಧಿಕಾರಿಗಳು ಗಾಬರಿ
ಖಾಸಗಿ ಬಸ್ ಹಾಗೂ ಆಟೋಗಳೂ ರಸ್ತೆಗಿಳಿದಿರಲಿಲ್ಲ. ಬಾಳೆಹೊನ್ನೂರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಜೆಸಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಪ್ರವೀಣ್ ಹತ್ಯೆಗೈದ ಆರೋಪಿಗಳನ್ನ ಕೂಡಲೇ ಬಂಧಿಸುವಂತೆ ಆಗ್ರಹಿಸಿದರು. ಇದನ್ನೂ ಓದಿ: ಅಕ್ರಮ ಬಾರ್ ಆರೋಪ- ಸ್ಮೃತಿ ಪುತ್ರಿ ವಿರುದ್ಧದ ಟ್ವೀಟ್‌ಗಳನ್ನು 24 ಗಂಟೆಯೊಳಗೆ ಅಳಿಸಲು ನ್ಯಾಯಾಲಯ ಆದೇಶ
ಪ್ರತಿಭಟನೆ ವೇಳೆ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಬಜರಂಗದಳ ಸಂಚಾಲಕ ಶಶಾಂಕ್ ಹೇರೂರು, ಹಿಂದೂಗಳು ಒಗ್ಗೂಡದಿದ್ದರೆ ಮುಂದಿನ ದಿನಗಳಲ್ಲಿ ಉಳಿಗಾಲವಿಲ್ಲ. ಬಿಜೆಪಿ ಆಡಳಿತದಲ್ಲೇ ಪಕ್ಷದ ಕಾರ್ಯಕರ್ತರಿಗೆ ಈ ಗತಿ ಬಂದಿದೆ. ಜಿಹಾದಿಗಳ ಮನಸ್ಥಿತಿಯಿಂದ ಹಿಂದೂಗಳ ಸರಣಿ ಹತ್ಯೆಯಾಗುತ್ತಿದೆ. ಅಭಿವೃದ್ಧಿಯನ್ನು ಯಾರು ಬೇಕಾದರೂ ಮಾಡುತ್ತಾರೆ. ಆದರೆ ಹಿಂದೂಗಳನ್ನ ರಕ್ಷಣೆ ಮಾಡೋರು ಯಾರು ಎಂದು ಪ್ರಶ್ನಿಸಿದ್ದಾರೆ.