ವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 6 ವರ್ಷದ ಬಳಿಕ ಚೀನಾಗೆ (China) ಭೇಟಿ ನೀಡಲಿದ್ದಾರೆ.
ಈ ತಿಂಗಳು ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಗಾಗಿ ಮೋದಿ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ. 2020 ರಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಗಲ್ವಾನ್ ಘರ್ಷಣೆಯ ನಂತ ಮೊದಲ ಚೀನಾ ಪ್ರವಾಸ ಇದಾಗಿದೆ. ಇದನ್ನೂ ಓದಿ: ಭಾರತ ಕೊಟ್ಟ ತಿರುಗೇಟಿಗೆ ಸರಿಯಾಗಿ ಉತ್ತರ ನೀಡದೇ ನುಣುಚಿದ ಟ್ರಂಪ್
ಆಗಸ್ಟ್ 30, ಸೆಪ್ಟೆಂಬರ್ 1 ರಂದು ಶಾಂಘೈ ಸಹಕಾರ ಸಂಸ್ಥೆಯ ಸಭೆ ಆಯೋಜನೆಗೊಂಡಿದೆ. ಈ ಭೇಟಿಯ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ.
ಪ್ರಧಾನಿ ಮೋದಿ ಎರಡು ದಿನಗಳ ಭೇಟಿಗಾಗಿ ಚೀನಾಕ್ಕೆ ತೆರಳುವ ಮೊದಲು ಆಗಸ್ಟ್ 30 ರಂದು ಜಪಾನ್‌ಗೆ ಭೇಟಿ ನೀಡಲಿದ್ದಾರೆ.