ಆಪರೇಷನ್ ಸಿಂಧೂರ | ಜೂ.9ರಂದು ಸರ್ವಪಕ್ಷಗಳ ನಿಯೋಗ ಭೇಟಿಯಾಗಲಿದ್ದಾರೆ ಪ್ರಧಾನಿ ಮೋದಿ

Public TV
2 Min Read
PM Modi 1

– ವಿದೇಶಿ ಭೇಟಿ ಬಗ್ಗೆ ಸಮಗ್ರ ಮಾಹಿತಿ ಪಡೆಯಲಿರುವ ಪ್ರಧಾನಿ

ನವದೆಹಲಿ: ಪಹಲ್ಗಾಮ್‌ ಭಯೋತ್ಪಾದಕ ದಾಳಿ ಮತ್ತು ಆಪರೇಷನ್‌ ಸಿಂಧೂರ (Operation Sindoor) ಬಳಿಕ ಪಾಕಿಸ್ತಾನದ ಮುಖವಾಡವನ್ನ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಬಯಲು ಮಾಡಲು ಹೊರಟಿರುವ ಭಾರತದ ಸರ್ವಪಕ್ಷಗಳ ನಿಯೋಗದ ಸದಸ್ಯರನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶೀಘ್ರದಲ್ಲೇ ಭೇಟಿ ಮಾಡಲಿದ್ದಾರೆ.

ಜೂನ್‌ 9 ಅಥವಾ 10ರಂದು ಮೋದಿ ನೇತೃತ್ವದಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಸರ್ವಪಕ್ಷಗಳ ನಿಯೋಗಗಳು ತಮ್ಮ ವಿದೇಶಿ ಭೇಟಿಗಳ ಬಗ್ಗೆ ಸಮಗ್ರ ಮಾಹಿತಿಯನ್ನ ಪ್ರಧಾನಿಗಳಿಗೆ ವಿವರಿಸಲಿದ್ದಾರೆ. ಇದನ್ನೂ ಓದಿ: ʻಆಪರೇಷನ್‌ ಸಿಂಧೂರʼ ವೇಳೆ ಭಾರತ ಧ್ವಂಸಗೊಳಿಸಿದ್ದ ಮುರಿಡ್ಕೆ ಮಸೀದಿಯಲ್ಲಿ ಮತ್ತೆ ತಲೆಎತ್ತಿದ ಲಷ್ಕರ್‌ ಗುಂಪು; ವಿಡಿಯೋ ವೈರಲ್‌

ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟಕ್ಕೆ ಜಾಗತಿಕ ಬೆಂಬಲ ಪಡೆಯುವ ತನ್ನ ಉಪಕ್ರಮದ ಭಾಗವಾಗಿ, ಬಿಜೆಪಿ ನೇತೃತ್ವದ ಸರ್ಕಾರವು 33 ರಾಜಧಾನಿಗಳಿಗೆ ಭೇಟಿ ನೀಡಲು 7 ಸರ್ವಪಕ್ಷಗಳ ನಿಯೋಗವನ್ನು ರಚಿಸಿತ್ತು. ಆಡಳಿತ ಪಕ್ಷವಾದ NDA (NDA)ಯ 31 ರಾಜಕೀಯ ನಾಯಕರು, ಇತರ ರಾಜಕೀಯ ಪಕ್ಷಗಳ 20 ಪ್ರತಿನಿಧಿಗಳನ್ನು ಒಳಗೊಂಡ 7 ನಿಯೋಗಗಳಲ್ಲಿ ಒಟ್ಟು 59 ಸದಸ್ಯರು ಇದ್ದರು. ಇದನ್ನೂ ಓದಿ: ಪಂಜಾಬ್ ಪೊಲೀಸರ ಭರ್ಜರಿ ಕಾರ್ಯಾಚರಣೆ – 113 ಡ್ರಗ್ ಪೆಡ್ಲರ್‌ಗಳು ಅರೆಸ್ಟ್

ಸರ್ವಪಕ್ಷಗಳ ನಿಯೋಗದ ರುವಾರಿಗಳು
* ಶಶಿ ತರೂರ್ (INC)
* ರವಿಶಂಕರ್ ಪ್ರಸಾದ್ (BJP)
* ಸಂಜಯ್ ಕುಮಾರ್ ಝಾ (JDU)
* ಬೈಜಯಂತ್ ಪಾಂಡಾ (BJP)
* ಕನಿಮೋಳಿ ಕರುಣಾನಿಧಿ (DMK)
* ಸುಪ್ರಿಯಾ ಸುಳೆ (NCP)
* ಶ್ರೀಕಾಂತ್ ಏಕನಾಥ್ ಶಿಂಧೆ (ಶಿವಸೇನೆ)

Shashi Tharoor 2

ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ನಡೆದಿದ್ದ ಹಿಂದೂಗಳ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ದಾಳಿ ಬಳಿಕ ಪಾಕ್‌ನ ಭಯೋತ್ಪಾದನೆಯ ಮುಖವಾಡವನ್ನ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕಳಚಲು ತೀರ್ಮಾನಿಸಿ ಸರ್ವಪಕ್ಷಗಳ ನಿಯೋಗವನ್ನ ರಚನೆ ಮಾಡಿತ್ತು. ವಿಶ್ವದಾದ್ಯಂತ ಅನೇಕ ದೇಶಗಳಿಗೆ ಭೇಟಿ ನೀಡಿರುವ ಈ ನಿಯೋಗಗಳು ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದು, ಭಾರತದ ಹೋರಾಟಕ್ಕೆ ಬೆಂಬಲ ದೊರೆತಿದೆ. ಇದನ್ನೂ ಓದಿ: ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳಕ್ಕೆ `ಮಹಾ’ ಸಿಎಂ ಆಕ್ಷೇಪ – ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸಲು ಕೇಂದ್ರಕ್ಕೆ ಡಿಕೆಶಿ ಮನವಿ

ಟೀಂ ಇಂಡಿಯಾಕ್ಕೆ ಜಾಗತೀಕ ಬೆಂಬಲ:
ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಕೊಂಬಿಯಾ, ಇಂಡೋನೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ಬೆಂಬಲ ಸೂಚಿಸಿವೆ. ಈ ಬಗ್ಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರತಿಜ್ಞೆ ಸ್ವೀಕರಿಸುವುದಾಗಿ ಹೇಳಿದ್ದು, ಭಾರತಕ್ಕೆ ರಾಜತಾಂತ್ರಿಕ ಯಶಸ್ಸು ಕೂಡ ಸಿಕ್ಕಂತಾಗಿದೆ.

Share This Article