ಬೆಂಗಳೂರು: ನಗರದ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ (Sports Authority of India) ವಿಲಕ್ಷಣ ಘಟನೆಯೊಂದು ನಡೆದಿದೆ. ಆಟಗಾರ್ತಿಯೊಬ್ಬರು ಸ್ನಾನ ಮಾಡುವಾಗ ಇನ್ನೋರ್ವ ಆಟಗಾರ್ತಿ ವಿಡಿಯೋವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾಳೆ.
ಟೇಕ್ವಾಂಡೋ (Tekwando) ಪ್ಲೇಯರ್ ಒಬ್ಬರು ಸ್ನಾನಕ್ಕೆ ತೆರಳಿದ್ದಾಗ ಇನ್ನೋರ್ವ ವಾಲಿಬಾಲ್ (Volleyball) ಆಟಗಾರ್ತಿ ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದಾಳೆ. ಮೊಬೈಲ್ ನೋಡಿ ಗಾಬರಿಗೊಂಡ ಆಟಗಾರ್ತಿ ಪ್ರಶ್ನೆ ಮಾಡಿದ್ದಾಳೆ. ಬಳಿಕ ರೆಕಾರ್ಡ್ ಮಾಡಿದ್ದ ಮೊಬೈಲ್‍ನ್ನು ಒಡೆದು ಹಾಕಿದ್ದಾಳೆ. ಈ ಬಗ್ಗೆ ನೊಂದ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ (Jnanabharathi Police Station) ದೂರು ದಾಖಲಿಸಿದ್ದಾಳೆ. ಇದನ್ನೂ ಓದಿ: ನಾನೇ ಮೋದಿ ನಾನೇ ದೇವ್ರು, ಮೋದಿ ಪಾದಿ ಯಾವ್ದೂ ಇಲ್ಲ – ಶಿವರಾಜ್ ಪಾಟೀಲ್ ಆಡಿಯೊ ವೈರಲ್
ಮೊಬೈಲ್‍ನಲ್ಲಿ ಚಿತ್ರೀಕರಿಸಿದ ಆರೋಪಿಯ ವಿರುದ್ಧ ಸೆಕ್ಷನ್ 354, 201, 66ಸಿ ಐಟಿ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಪೊಲೀಸರು ರೆಕಾರ್ಡ್ ಮಾಡಿದ ಮೊಬೈಲ್‍ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೋದಿ ಹಟಾವೋ, ದೇಶ್ ಬಚಾವೋ ಪೋಸ್ಟರ್ ಪ್ರಕರಣ- 8 ಮಂದಿ ಆರೋಪಿಗಳ ಬಂಧನ