ವಾಷಿಂಗ್ಟನ್: ವಿಮಾನವೊಂದು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅದರ ಬಾಗಿಲು ಆಕಾಶದಲ್ಲಿ ತೆರೆದುಕೊಂಡ ಘಟನೆ ಪೋರ್ಟ್‌ಲ್ಯಾಂಡ್‌ನಲ್ಲಿ (Portland) ನಡೆದಿದೆ.
ಅಲಾಸ್ಕಾ ಏರ್‌ಲೈನ್ಸ್‌ನ (Alaska Airlines) ಬೋಯಿಂಗ್ 737-9 ಮ್ಯಾಕ್ಸ್ ವಿಮಾನ ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲಿ ಅದರ ಒಂದು ಬಾಗಿಲು ತೆರೆದುಕೊಂಡಿದೆ. ಕೂಡಲೇ ವಿಮಾನವನ್ನು ಪೋರ್ಟ್‌ಲ್ಯಾಂಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ (Emergency Landing) ಮಾಡಲಾಗಿದೆ. ವಿಮಾನವು ಒರೆಗಾನ್‍ನ ಪೋರ್ಟ್‌ಲ್ಯಾಂಡ್‌ನಿಂದ ಕ್ಯಾಲಿಫೋರ್ನಿಯಾದ (California) ಒಂಟಾರಿಯೊಗೆ ತೆರಳುತ್ತಿತ್ತು. ಈ ವೇಳೆ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ಇಸ್ರೋದಿಂದ ದಿಟ್ಟ ಹೆಜ್ಜೆ – ಇಂದು ನಿಗದಿತ ಕಕ್ಷೆಗೆ ಸೇರಲಿದೆ ಆದಿತ್ಯ ಎಲ್1
Advertisement
Advertisement
ವಿಮಾನದಲ್ಲಿ 171 ಪ್ರಯಾಣಿಕರು ಮತ್ತು 6 ಸಿಬ್ಬಂದಿಗಳಿದ್ದರು. ಅವರರೆಲ್ಲ ಸುರಕ್ಷಿವಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಪ್ರಯಾಣಿಕರು ತೆಗೆದ ವೀಡಿಯೋಗಳಲ್ಲಿ ಮಧ್ಯ-ಕ್ಯಾಬಿನ್‍ನ ನಿರ್ಗಮನ ಬಾಗಿಲು ವಿಮಾನದಿಂದ ಸಂಪೂರ್ಣವಾಗಿ ಬೇರ್ಪಟ್ಟಿರುವುದು ಕಾಣಿಸುತ್ತದೆ. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್ ಶಾಕ್