ನವದೆಹಲಿ: ಪೈಪ್‍ಲೈನ್ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಯೂನಿಟ್‍ಗೆ 2.63 ರೂ. ರಷ್ಟು ಹೆಚ್ಚಿಸಲಾಗಿದೆ.
ರಾಷ್ಟ್ರ ರಾಜಧಾನಿ ಮತ್ತು ಅಕ್ಕಪಕ್ಕದ ನಗರಗಳಲ್ಲಿನ ಮನೆಗಳಿಗೆ ಅಡುಗೆ ಅನಿಲವನ್ನು ಪೈಪ್ ಮೂಲಕ ಬಿಡಲಾಗುತ್ತೆ. ಈ ಹಿನ್ನೆಲೆ ಪೈಪ್‍ಲೈನ್ ಅಡುಗೆ ಅನಿಲಗಳ ಬೆಲೆಯನ್ನು ಆಗಾಗ ಹೆಚ್ಚಿಸಲಾಗುವುದು. ಜುಲೈ 26 ರಂದು ಪೈಪ್‍ಲೈನ್ ಅಡುಗೆ ಅನಿಲ ಪರಿಷ್ಕರಿಸಿ ಪ್ರತಿ ಸ್ಟಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ 2.1 ರೂ. ಹೆಚ್ಚಿಸಲಾಗಿತ್ತು. ಆದರೆ ಬೆಲೆ ಹೆಚ್ಚಿಸಿ 2 ವಾರವೂ ಇನ್ನೂ ಕಳೆದಿಲ್ಲ. ಈಗಾಗಲೇ ಮತ್ತೆ 2.63 ರೂ. ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಡಿಸೆಂಬರ್ ಒಳಗಾಗಿ ಮಹದಾಯಿ ಯೋಜನೆಗೆ ಚಾಲನೆ ಸಿಗಲಿದೆ: ಕಾರಜೋಳ
ಈ ಕುರಿತು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್(IGL) ಟ್ವೀಟ್ ಮಾಡಿದ್ದು, ಈ ಹಿಂದೆ ಪೈಪ್‍ಲೈನ್ ಅಡುಗೆ ಅನಿಲ ರೂ. 47.96 ರಷ್ಟಿತ್ತು. ಆದರೆ ದೆಹಲಿಯಲ್ಲಿ ಪೈಪ್ ಮೂಲಕ ಅಡುಗೆ ಅನಿಲದ ಬೆಲೆ ಈಗ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ ರೂ 50.59 ಆಗಲಿದೆ. ಈ ಹೆಚ್ಚಳವು ‘ಇನ್‍ಪುಟ್ ಗ್ಯಾಸ್ ವೆಚ್ಚದಲ್ಲಿನ ಹೆಚ್ಚಳವನ್ನು ಭಾಗಶಃ ಸರಿದೂಗಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
In order to partially offset the increase in input gas cost, the price of domestic PNG in Delhi is being revised to Rs.50.59/- per SCM, w.e.f, 5th August 2022.
— Indraprastha Gas Ltd (@IGLSocial) August 4, 2022
ದೆಹಲಿಗೆ ಹೊಂದಿಕೊಂಡಿರುವ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‍ನಲ್ಲಿ ಪಿಎನ್‍ಜಿಗೆ ಪ್ರತಿ ಎಸ್‍ಸಿಎಂಗೆ 50.46 ರೂ. ವೆಚ್ಚವಾಗಲಿದೆ. ಆದರೆ ಗುರುಗ್ರಾಮದಲ್ಲಿ ಪ್ರತಿ ಎಸ್‍ಸಿಎಂಗೆ 48.79 ರೂ. ಹರಿಯಾಣದ ಕರ್ನಾಲ್ ಮತ್ತು ರೇವಾರಿಯಲ್ಲಿ ಪ್ರತಿ ಎಸ್‍ಸಿಎಂಗೆ 49.40 ರೂ ಮತ್ತು ಮುಜಫರ್‍ನಗರ, ಮೀರತ್ ಮತ್ತು ಶಾಮ್ಲಿಯಲ್ಲಿ ಪಿಎನ್‍ಜಿ ಪ್ರತಿ ಎಸ್‍ಸಿಎಂಗೆ 53.97 ರೂ. ಉತ್ತರ ಪ್ರದೇಶದ ಕಾನ್ಪುರ ಮತ್ತು ಫತೇಪುರ್‌ನಲ್ಲಿ ಗ್ಯಾಸ್‍ಗೆ 53.10 ರೂ. ಹೆಚ್ಚಿಸಲಾಗಿದೆ. ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ದರಗಳು ಭಿನ್ನವಾಗಿರುತ್ತವೆ. ಇದನ್ನೂ ಓದಿ: ಉಪರಾಷ್ಟ್ರಪತಿ ಚುನಾವಣೆ – ಮಾರ್ಗರೇಟ್ ಆಳ್ವಾಗೆ TRS ಬೆಂಬಲ
ಈ ಹಿಂದೆ ಆಗಸ್ಟ್ 3 ರಂದು ಮುಂಬೈನಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್(ಪಿಎನ್‍ಜಿ) ಬೆಲೆಯನ್ನು ಪ್ರತಿ ಯೂನಿಟ್‍ಗೆ 4 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ನಗರದ ಅನಿಲ ಕಂಪನಿಗಳಿಗೆ ಪೂರೈಕೆಯಾಗುವ ನೈಸರ್ಗಿಕ ಅನಿಲದ ಬೆಲೆಯಲ್ಲಿ ಶೇ.18ರಷ್ಟು ಏರಿಕೆ ಮಾಡುವುದಾಗಿ ಉಂIಐ ಪ್ರಕಟಿಸಿದೆ. ಈ ಘೋಷಣೆಯೊಂದಿಗೆ, ದೇಶದ ಇತರ ನಗರಗಳಲ್ಲಿ ಸಿಎನ್‍ಜಿ ಮತ್ತು ಪಿಎನ್‍ಜಿ ಬೆಲೆಗಳು ಹೆಚ್ಚಾಗಲು ಪ್ರಾರಂಭಿಸಿವೆ.