BelgaumDistrictsKarnatakaLatestMain Post

ಡಿಸೆಂಬರ್ ಒಳಗಾಗಿ ಮಹದಾಯಿ ಯೋಜನೆಗೆ ಚಾಲನೆ ಸಿಗಲಿದೆ: ಕಾರಜೋಳ

Advertisements

ಬೆಳಗಾವಿ: ಡಿಸೆಂಬರ್ ಒಳಗಾಗಿ ಮಹದಾಯಿ ಯೋಜನೆಗೆ ಚಾಲನೆ ಸಿಗಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಮಹದಾಯಿ ಯೋಜನೆ ಜಾರಿಗೆ ತಯಾರಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವೇ ದಿನಗಳಲ್ಲಿ ನಮಗೆ ಕೇಂದ್ರದಿಂದ ಅನುಮತಿ ಸಿಗುವ ವಿಶ್ವಾಸವಿದೆ. ನಮ್ಮ ಅಧಿಕಾರಿಗಳು ಕೂಡ ಯೋಜನೆ ಜಾರಿಗಾಗಿ ಕಾರ್ಯಪ್ರವೃತರಾಗಿದ್ದಾರೆ. ನಮ್ಮ ಸರ್ಕಾರ ಎಲ್ಲ ನೀರಾವರಿ ಯೋಜನೆ ಜಾರಿಗೆ ಪ್ರಯತ್ನ ಮಾಡುತ್ತಿದೆ. ಮೇಕೆದಾಟು, ಭದ್ರಾ, ಕೃಷ್ಣಾದಲ್ಲಿ ನಮಗೆ ಹಂಚಿಕೆಯಾದ ನೀರು ಬಳಕೆಗೆ ಅವಕಾಶ ಕೋರಿದ್ದೇವೆ ಎಂದು ವಿವರಿಸಿದರು. ಇದನ್ನೂ ಓದಿ: ದೇವಸ್ಥಾನದ ಶೈಲಿಯಲ್ಲಿ ಮಾಡಿ ‘ತರಕಾರಿ ಸಾಂಬಾರ್’ ಮಾಡುವ ವಿಧಾನ

ಮಹದಾಯಿ ಯೋಜನೆ ಜನರಿಗಾಗಿ ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾಗಿದ್ದು, ಕಾಂಗ್ರೆಸ್ಸಿಗರ ಸಾಧನೆ ಏನೆಂಬುದನ್ನು ಹೇಳಲಿ. ಡಿಸೆಂಬರ್ ಒಳಗಾಗಿ ಮಹದಾಯಿ ಯೋಜನೆಗೆ ಚಾಲನೆ ಸಿಗಲಿದೆ. ಅಂತಾರಾಜ್ಯ, ಜಲವ್ಯಾಜ್ಯಗಳಿರುವ ಕಾರಣ ಸೂಕ್ಷ್ಮತೆ ಇರಬೇಕು ಎಂದು ಹೇಳಿದರು.

ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್‍ನಲ್ಲಿ ನಮ್ಮ ಲೀಗಲ್ ತಂಡ ಹೋರಾಟ ಮಾಡುತ್ತಿದೆ. ಮಹದಾಯಿಯ ಹೊಸ ಪ್ರಸ್ತಾವನೆಯಲ್ಲಿ ಯೋಜನಾ ವೆಚ್ಚ ಕಡಿಮೆ ಮಾಡಿದ್ದೇವೆ. ಕಾನೂನು-ತಾಂತ್ರಿಕ ಅಂಶಗಳನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಈಗಾಗಲೇ ಮಹದಾಯಿ ಸಂಬಂಧ ಕೇಂದ್ರ ಸರ್ಕಾರ ಗೆಜೆಟ್ ಹೊರಡಿಸಿದೆ ಎಂದರು. ಇದನ್ನೂ ಓದಿ: ರಾಮ ಭಕ್ತರನ್ನು ಅಪಮಾನಿಸಲೆಂದೇ ಕಾಂಗ್ರೆಸ್ ಪ್ರತಿಭಟಿಸಿದೆ – ರಾಮಮಂದಿರಕ್ಕೆ ನಂಟು ಕಲ್ಪಿಸಿದ ಅಮಿತ್ ಶಾ, ಯೋಗಿ

ಮಹದಾಯಿ ಯೋಜನೆ ಜಾರಿಗೆ ನಮಗೆ ಯಾವುದೇ ಅಡೆತಡೆಯಾಗಲ್ಲ. ಹೊಸ ಡಿಪಿಆರ್‍ನಿಂದ ಹೆಚ್ಚಿನ ಅರಣ್ಯ ಭೂಮಿ ನಾಶವಾಗಲ್ಲ. ಹೊಸದಾದ ಯೋಜನಾ ವರದಿಯಲ್ಲಿ ಟೆನಲ್ ತೆಗೆದುಹಾಕಲಾಗಿದೆ. ಪೈಪ್‍ಲೈನ್ ಮೂಲಕ ನೀರನ್ನು ತರುವ ಪ್ರಯತ್ನ ನಡೆಸಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Live Tv

Leave a Reply

Your email address will not be published.

Back to top button