ತಮ್ಮ ನೆಚ್ಚಿನ ನಟನ ಹೆಸರಿನಲ್ಲಿ ಅಭಿಮಾನಿಗಳು ನಾನಾ ರೀತಿಯ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಡಾ.ವಿಷ್ಣು ವರ್ಧನ್ ಅವರ ಹೆಸರಿನಲ್ಲಿ ಈಗಾಗಲೇ ಸಾಕಷ್ಟು ಜನಪರ ಕೆಲಸಗಳು ಆಗಿವೆ. ಅವುಗಳ ಜತೆ ಡಾ.ವಿಷ್ಣು ಹೆಸರಿನಲ್ಲೇ ಕೆಲ ಉತ್ಪನ್ನಗಳು ಕೂಡ ಮಾರುಕಟ್ಟೆಗೆ ಬಂದಿವೆ. ಇದನ್ನೂ ಓದಿ : ಹಿಂದಿ ರಾಷ್ಟ್ರ ಭಾಷೆ : ನಾನು ಕನ್ನಡ ಪಂಡಿತನೂ, ಹಿಂದಿ ಪಂಡಿತನೂ ಹೌದು -ಯೋಗರಾಜ್ ಭಟ್
Advertisement
ಮಂಗಳೂರಿನ ಅಭಿಮಾನಿಯೊಬ್ಬರು ಮಿಡಿ ಉಪ್ಪಿನಕಾಯಿಯನ್ನು ಮಾರುತ್ತಿದ್ದರು. ಅವರು ವಿಷ್ಣುವರ್ಧನ್ ಅವರು ಮಹಾನ್ ಅಭಿಮಾನಿ. ಯಜಮಾನ ಸಿನಿಮಾ ನೋಡಿದ ನಂತರ ತಮ್ಮ ಮಿಡಿ ಉಪ್ಪಿನಕಾಯಿಗೆ ‘ಯಜಮಾನ ಮಿಡಿ ಉಪ್ಪಿನಕಾಯಿ’ ಎಂದು ಹೆಸರಿಟ್ಟರು. ಈಗ ಅದು ಅದೇ ಹೆಸರಿನಲ್ಲೇ ಫೇಮಸ್ ಆಗಿದೆ. ಇದನ್ನೂ ಓದಿ : ಪುನೀತ್‌ಗೆ ಅವಮಾನ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ
Advertisement
Advertisement
ಈಗ ಮತ್ತೊಬ್ಬ ದೊಡ್ಡ ಅಭಿಮಾನಿ ಡಾ.ವಿಷ್ಣುವರ್ಧನ್ ಅವರ ಹೆಸರಿನಲ್ಲೇ ಅವರ ಕೋಟಿಗೊಬ್ಬ ಸಿನಿಮಾವನ್ನು ಸ್ಫೂರ್ತಿಯಾಗಿ ತಗೆದುಕೊಂಡು ಮೆಡಿಕಲ್ ಶಾಪ್ ತೆರೆದಿದ್ದಾರೆ. ಈ ವಿಷಯವನ್ನು ಡಾ. ವಿಷ್ಣು ಸೇನಾ ಸಮಿತಿಯ ಅಧಿಕೃತ ವೆಬ್ ಸೈಟ್ ನಲ್ಲಿ ಹಂಚಿಕೊಂಡಿದ್ದು, ಈ ಮೆಡಿಕಲ್ ಶಾಪ್ ಅನ್ನು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಉದ್ಘಾಟಿಸಿದ್ದಾರೆ. ‘ಯಜಮಾನ್ರ ಮೇಲಿನ ಅಗಾಧ ಅಭಿಮಾನದ ಕಾರಣಕ್ಕಾಗಿ ಕೋಟಿಗೊಬ್ಬ ಹೆಸರಿಟ್ಟು, ಮೆಡಿಕಲ್ ಶಾಪ್ ಒಳಗೂ ವಿಷ್ಣು ಅವರ ದೊಡ್ಡ ಫೋಟೋ ಇಟ್ಟಿದ್ದಾರೆ. ಹೀಗೆ ಇಟ್ಟು ಪೂಜಿಸುತ್ತಾ ಇರುವುದು ಡಾ.ವಿಷ್ಣು ಅವರ ಅಪ್ಪಟ ಅಭಿಮಾನಿ ಹಾಸನದ ವಿಜಯ್ ಬಿಳಿಮಗ್ಗ’ ಎಂದು ಬರೆದುಕೊಂಡಿದ್ದಾರೆ ವೀರಕಪುತ್ರ ಶ್ರೀನಿವಾಸ್. ಇದನ್ನೂ ಓದಿ : ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್
Advertisement
ಇದರ ಹೊರತಾಗಿಯೂ ವಿಷ್ಣು ಅವರ ಹೆಸರಿನಲ್ಲಿ ಐಎಎಸ್ ಉಚಿತ ಕೋಚಿಂಗ್ ನೀಡಲಾಗುತ್ತಿದೆ. ಕನ್ನಡ ಶಾಲೆಗಳನ್ನು ದತ್ತು ಪಡೆಯಲಾಗಿದೆ. ಸಾವಿರಾರು ಗಿಡಗಳನ್ನು ನಡೆಲಾಗಿದೆ. ರಕ್ತದಾನ ಶಿಬಿರ, ಅನ್ನದಾನ ಶಿಬಿರದಂತೆ ಕಾರ್ಯಗಳನ್ನು ಅಭಿಮಾನಿಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.