ಮಂಡ್ಯ: ದೀಪಾವಳಿ (Deepavali) ಹಬ್ಬದ ಹಿನ್ನೆಲೆ ಸ್ಟುಡಿಯೋ (Studio) ಕ್ಲೀನ್ ಮಾಡುತ್ತಿದ್ದ ವೇಳೆ ವಿದ್ಯುತ್ ಶಾರ್ಟ್ಸರ್ಕ್ಯೂಟ್ನಿಂದ ಇಬ್ಬರು ಫೋಟೋಗ್ರಾಫರ್ಗಳು (Photographer) ಮೃತಪಟ್ಟಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಜರುಗಿದೆ.
ಬೆಸಗರಹಳ್ಳಿಯ ಲಕ್ಷ್ಮೀ ಸ್ಟುಡಿಯೋದಲ್ಲಿ ಬೆಳಗ್ಗೆ ವಿವೇಕ್ ಮತ್ತು ಮಧುಸೂದನ್ ಎಂಬ ಫೋಟೋಗ್ರಾಫರ್ ದೀಪಾವಳಿ ಹಬ್ಬದ ಹಿನ್ನೆಲೆ ಕ್ಲೀನ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸ್ಟುಡಿಯೋದಲ್ಲಿದ್ದ ವೈಯರ್ನಲ್ಲಿ ಶಾರ್ಟ್ಸರ್ಕ್ಯೂಟ್ ಆಗಿ ಇಬ್ಬರು ಫೋಟೋಗ್ರಾಫರ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪುನೀತ ಪರ್ವಕ್ಕೆ ಜಗ್ಗೇಶ್ ಗೈರು: ವಿಪರೀತ ದುಃಖವಾಯಿತು
ಇಬ್ಬರು ಫೋಟೋಗ್ರಾಫರ್ಗಳ ದುರ್ಮರಣಕ್ಕೆ ಮಂಡ್ಯ ಜಿಲ್ಲೆಯ ಫೋಟೋಗ್ರಾಫರ್ಗಳು ಸಂತಾಪ ಸೂಚಿಸಿದ್ದಾರೆ. ಇತ್ತ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಸಗರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದೆ. ಇದನ್ನೂ ಓದಿ: ಜಗಳ ಬಿಡಿಸಲು ಹೋದ ವ್ಯಕ್ತಿಯೇ ಕುಸಿದು ಬಿದ್ದು ಸಾವು