ಬೆಂಗಳೂರು/ಆನೇಕಲ್: ಪಿಎಫ್‍ಐ (PFI) ಕಾಂಗ್ರೆಸ್‍ನವರ (Congress) ಬ್ರದರ್ಸ್ ಇದ್ದಂತೆ, ಇದು ಕಾಂಗ್ರೆಸ್ ನವರೇ ಹೇಳಿಕೊಂಡಿರುವ ವಿಚಾರವಾಗಿದೆ. ಪಿಎಫ್‍ಐ ಬ್ಯಾನ್ ಮಾಡಿರುವುದಕ್ಕೆ ಕಾಂಗ್ರೆಸ್‍ನ ಕೆಲವರಿಗೆ ಒಂದೇ ಕಣ್ಣಿನಲ್ಲಿ ಅಳುವಂತಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿಕೆಯನ್ನು ನೀಡಿದ್ದಾರೆ.
Advertisement
ಬೊಮ್ಮನಹಳ್ಳಿಯ ಬಂಡೇಪಾಳ್ಯದಲ್ಲಿ ಶಾಸಕ ಸತೀಶ್ ರೆಡ್ಡಿ (MLA Satish Reddy) ನೇತೃತ್ವದಲ್ಲಿ ಆಯೋಜನೆ ಮಾಡಿದ್ದ ಬೃಹತ್ ಆರೋಗ್ಯ ಶಿಬಿರದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪಿಎಫ್‍ಐ ಸಂಘಟನೆ ಟೆರರಿಸ್ಟ್ ಆರ್ಗನೈಸೇಶನ್ ಅಂತ ಎಲ್ಲರಿಗೂ ಗೊತ್ತಿದೆ. ಎಂಟತ್ತು ವರ್ಷಗಳಿಂದ ಪಿಎಫ್‍ಐ ಬ್ಯಾನ್ ಮಾಡುವ ವಿಚಾರವಾಗಿ ಹಲವು ಚರ್ಚೆಗಳು ನಡೆದಿದ್ದು, ಕೇರಳ, ಗುಜರಾತ್, ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಉಚ್ಚ ನ್ಯಾಯಾಲಯವು ಕೂಡ ಕೇಂದ್ರ ಸರ್ಕಾರಕ್ಕೆ ಟಿಪ್ಪಣಿಯನ್ನು ಸಲ್ಲಿಸಿದ್ದು, ಕೇಂದ್ರ ಸರ್ಕಾರ ಅಮಿತ್ ಶಾ (Amit Shah) ನೇತೃತ್ವದಲ್ಲಿ 26 ರಾಜ್ಯಗಳಲ್ಲಿ ಪಿಎಫ್‍ಐ ಬ್ಯಾನ್ ಮಾಡಲು ಹೊರಟಿದೆ. ಪಿಎಫ್‍ಐ ಬ್ಯಾನ್ ಒಂದೆಡೆಯಾದರೆ ಕೆಲವರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಅದನ್ನು ಕಾಂಗ್ರೆಸ್‍ನವರು ಹೊರಗೆ ಹೇಳಿಕೊಳ್ಳಲಾಗದೆ. ಕಷ್ಟ ನೋವು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದೆ – ಪ್ರಹ್ಲಾದ್ ಜೋಶಿ
Advertisement
Advertisement
ಕಾಂಗ್ರೆಸ್ ನಾಯಕರೇ ಪಿಎಫ್‍ಐನವರು ನಮ್ಮ ಬ್ರದರ್ಸ್ ಇದ್ದಂತೆ ಎಂದು ಹೇಳಿದ್ದಾರೆ. ಬ್ರದರ್ಸ್‍ಗೆ ನೋವಾದಾಗ ಒಂದೇ ಕಣ್ಣಿನಲ್ಲಿ ಅಳುತ್ತಿದ್ದಾರೆ. ರಾಷ್ಟ್ರದ ಸುರಕ್ಷತೆ ಮುಖ್ಯನೋ ಅಥವಾ ವೋಟ್ ಬ್ಯಾಕಿಂಗ್ ಮುಖ್ಯನೋ ಎಂದು ಕಾಂಗ್ರೆಸ್‍ನವರು ಅರ್ಥ ಮಾಡಿಕೊಳ್ಳಬೇಕಿದೆ. ರಾಹುಲ್ ಗಾಂಧಿಯವರು (Rahul Gandhi) ಕರ್ನಾಟಕಕ್ಕೆ ಭಾರತ್ ತೋಡೋ ಯಾತ್ರೆಯ ಮೂಲಕ ಬಂದಿದ್ದಾರೆ. ಅದು ತೋಡೋ ಯಾತ್ರೆ, ಅವರು ಕರೆಯುತ್ತಿರುವುದು ಜೋಡೋ ಯಾತ್ರೆ (Bharat Jodo Yatra) ಎಂದು, ಭಾರತವನ್ನು ಜೋಡೋ ಮಾಡುವುದಕ್ಕೆ ಮುಂಚೆ ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ (D.K.Shivakumar) ಹಾಗೂ ಸಿದ್ದರಾಮಯ್ಯರನ್ನು (Siddaramaiah) ಜೋಡಣೆ ಮಾಡಲಿ ಹಾಗೂ ರಾಜಸ್ಥಾನದಲ್ಲಿ ಸಚಿನ್ ಪೈಲಟ್ (Sachin Pilot) ಮತ್ತೆ ಅಶೋಕ್ ಗೆಹ್ಲೋಟ್‍ರನ್ನು (Ashok Gehlot) ಜೋಡಣೆ ಮಾಡಲಿ, ಅದಾದ ಬಳಿಕ ಭಾರತ್ ಜೋಡೋ ಕಡೆ ಮುಂದಾಗಲಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ, ಇದು ಕಾಂಗ್ರೆಸ್‍ನ ಕೊನೆಯ ಯಾತ್ರೆ: ಆನಂದ್ ಸಿಂಗ್ ವ್ಯಂಗ್ಯ