– ಗ್ಯಾರಂಟಿ ಯೋಜನೆಗಳಿಗಾಗಿ 60 ಸಾವಿರ ಕೋಟಿ ಹಣ ಹೊಂದಿಸಬೇಕು
ಬಳ್ಳಾರಿ: ಗ್ಯಾರಂಟಿ ಯೋಜನೆಗಳಿಗಾಗಿ (Guarantee Scheme) 60 ಸಾವಿರ ಕೋಟಿ ಹಣ ಹೊಂದಿಸಬೇಕು. ರಾಜ್ಯದ ಅಭಿವೃದ್ಧಿಗಾಗಿ ಪೆಟ್ರೋಲ್-ಡೀಸೆಲ್ ದರ ಏರಿಕೆ (Fuel Price Hike) ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
Advertisement
ಬಳ್ಳಾರಿಯ (Ballari) ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಈ ಕುರಿತು ಮಾತನಾಡಿದ ಅವರು, ಕೇಂದ್ರದವರು ತೈಲ ದರ ಹೆಚ್ಚಿಸಿ ನೂರರ ಗಡಿ ದಾಟಿಸಿದರು. ಆಗ ಮಾಧ್ಯಮದವರು ಸೇರಿ ಯಾರೊಬ್ಬರೂ ಒಂದೇ ಒಂದು ಪ್ರಶ್ನೆ ಮಾಡಲಿಲ್ಲ. ರಾಜ್ಯ ಸರ್ಕಾರ ಹೆಚ್ಚಳ ಮಾಡಿದ್ದಕ್ಕೆ ಎಲ್ಲರೂ ಪ್ರಶ್ನೆ ಮಾಡುತ್ತಿದ್ದೀರಿ. ರಾಜ್ಯದ ಅಭಿವೃದ್ಧಿಗಾಗಿ ಬೆಲೆ ಏರಿಕೆ ಮಾಡಲಾಗಿದೆ. ವಿರೋಧ ಪಕ್ಷ ಬೆಲೆ ಏರಿಕೆ ಬಗ್ಗೆ ಏನಾದರೂ ಹೇಳಲಿ. ಕೇಂದ್ರ ಸರ್ಕಾರ ಮಾಡಿದ ಬೆಲೆ ಏರಿಕೆ ಬಗ್ಗೆ ಏನೂ ಮಾತಾಡಲ್ಲ. ನರೇಂದ್ರ ಮೋದಿ ಬಂದಾಗ ಪೆಟ್ರೋಲ್ ಬೆಲೆ ಎಷ್ಟಿತ್ತು? ಅಂದು ಕೇಂದ್ರ ಸರ್ಕಾರವೇ ಬೆಲೆ ಏರಿಕೆ ಮಾಡಿದೆ. ಮನಮೋಹನ ಸಿಂಗ್ ಅವಧಿ ತಲಾ ಬ್ಯಾರಲ್ ಕಚ್ಚಾ ತೈಲಕ್ಕೆ 113 ಡಾಲರ್ ಇತ್ತು. ಬಿಜೆಪಿ ಅವಧಿಯಲ್ಲಿ 59 ಡಾಲರ್ ಆಯ್ತು, ಯಾರೂ ಪ್ರಶ್ನೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಬಿಳಿ ಬಣ್ಣದ ಟೀ ಶರ್ಟ್ ಧರಿಸೋ ಹಿಂದಿನ ಸೀಕ್ರೆಟ್ ರಿವೀಲ್
Advertisement
Advertisement
ಇನ್ನೂ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗೆ ಪ್ರತಿ ವರ್ಷ 60 ಸಾವಿರ ಕೋಟಿ ಕೊಡಬೇಕು. ಗ್ಯಾರಂಟಿಗಳನ್ನು ರದ್ದು ಮಾಡಲಿ ಅಂತಾ ಬಿಜೆಪಿ ಹೇಳಲಿ. ಬಿಜೆಪಿಯವರು ಆರೋಪ ಮಾಡಿದರೆ ವಸ್ತು ಸ್ಥಿತಿ ಮೇಲೆ ಮಾಡಬೇಕು. ಬೆಲೆ ಏರಿಕೆ ಬಗ್ಗೆ ಕೇಂದ್ರ ಸರ್ಕಾರವನ್ನ ಮಾಧ್ಯಮದವರು ಪ್ರಶ್ನೆ ಮಾಡಿಲ್ಲ. ನರೇಂದ್ರ ಮೋದಿ ಬಂದಾಗ ಲೀಟರ್ ಪೆಟ್ರೋಲ್ 72 ರೂ. ಇತ್ತು. ಈಗ 102 ರೂ. ಆಗಿದೆ. ಕಚ್ಚಾ ತೈಲ ಬೆಲೆ ಕಡಿಮೆ ಆಗಿದೆ. ಇನ್ನೊಂದೆಡೆ ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ. ನರೇಂದ್ರ ಮೋದಿ ಅವಧಿಯಲ್ಲಿ ಏನಾಯ್ತು? ಬೆಲೆ ಏರಿಕೆ ಆಗಿದೆ. ನಾವು 3 ರೂ. ಅಭಿವೃದ್ಧಿಗಾಗಿ ಏರಿಕೆ ಮಾಡಿದ್ದೇವೆ. ಪಕ್ಕದ ರಾಜ್ಯಕ್ಕಿಂತಲೂ ರಾಜ್ಯದಲ್ಲಿ ತೈಲ ಬೆಲೆ ಕಡಿಮೆ ಇದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ರಾಹುಲ್ ವಿರುದ್ಧ ವಿಡಿಯೋ – ಯೂಟ್ಯೂಬರ್ ಬಂಧನಕ್ಕೆ ನೋಯ್ಡಾಗೆ ತೆರಳಿ ಬರಿಗೈಯಲ್ಲಿ ಕರ್ನಾಟಕ ಪೊಲೀಸರು ವಾಪಸ್