– ಹಸು ಹೋದ್ರೆ ನಮ್ಮ ಮೇಲೆ ಕೇಸ್ ಹಾಕ್ತಾರೆ, ಶೂಟಿಂಗ್‌ಗೆ ಅನುಮತಿ ನೀಡಿದ್ದು ಹೇಗೆ?
– 9 ವರ್ಷದ ಹಿಂದೆ ಖಾಸಗಿ ವಾಹನ ಪ್ರವೇಶಕ್ಕೆ ನಿರ್ಬಂಧ
ಚಾಮರಾಜನಗರ: ಇಲ್ಲಿನ ಬಂಡೀಪುರ ಅಭಯಾರಣ್ಯದ (Bandipur Sanctuary) ಹಿಮವದ್ ಗೋಪಾಲಸ್ವಾಮಿ ಬೆಟ್ಟ (Himavad Gopalaswamy Betta) ಪರಿಸರ ಸೂಕ್ಷ್ಮ ವಲಯದಲ್ಲಿ ಮಲಯಾಳಂ ಸಿನಿಮಾ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವ ಮೂಲಕ ರೈತರ ಹಾಗೂ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಬಂಡೀಪುರವು ರಾಜ್ಯದ ಪ್ರಸಿದ್ಧ ಹುಲಿ ಸಂರಕ್ಷಿತ ಅರಣ್ಯವಾಗಿದೆ. ಪರಿಸರ ಸೂಕ್ಷ್ಮ ವಲಯದಲ್ಲಿ ಸಿನಿಮಾ ಶೂಟಿಂಗ್‌ಗೆ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಅನುಮತಿ ನೀಡಿದ್ದು ಮಲಯಾಳಂ ಸಿನಿಮಾದ ಚಿತ್ರೀಕರಣ ನಡೆದಿದೆ. ಇದೀಗ ಪರಿಸರ ಸೂಕ್ಷ್ಮ ವಲಯದಲ್ಲಿ ಹೇಗೆ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದಾರೆ? ರಾಜ್ಯ ಸರ್ಕಾರ, ಬಂಡೀಪುರವನ್ನು ಕೇರಳ ಸರ್ಕಾರಕ್ಕೆ ಒತ್ತೆ ಇಡ್ತಿದ್ಯಾ ಎಂದು ಪ್ರಶ್ನಿಸುವ ಮೂಲಕ ಸ್ಥಳೀಯರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ಇದನ್ನೂ ಓದಿ: Exclusive | ಕ್ಯಾಬಿನೆಟ್ ಕ್ಲೈಮ್ಯಾಕ್ಸ್, ಜಾತಿ ಗಣತಿ ಮಂಡನೆಗೆ ಪ್ಲ್ಯಾನ್ – ಮಾಸ್ಟರ್‌ಸ್ಟ್ರೋಕ್ ಕೊಡ್ತಾರಾ ಸಿಎಂ?
ಇಡೀ ದೇಶದಲ್ಲಿ ಪ್ರಸಿದ್ಧಿ ಪಡೆದಿರುವ ಹಲಿ ಸಂರಕ್ಷಿತ ಅರಣ್ಯಗಳಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಕೂಡ ಒಂದು. ಈಗ ಕರ್ನಾಟಕ ಸರ್ಕಾರ ಹಾಗೂ ಪಿಸಿಸಿಎಫ್ ಕೇರಳದ ಮಲಯಾಳಂ ಸಿನಿಮಾ ಚಿತ್ರೀಕರಣಕ್ಕೆ ಬಂಡೀಪುರದ ಪರಿಸರ ಸೂಕ್ಷ್ಮ ವಲಯದಲ್ಲಿ ಬರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಅವಕಾಶ ನೀಡುವ ಮೂಲಕ ಹುಬ್ಬೇರುವಂತೆ ಮಾಡಿದೆ. ಇದನ್ನೂ ಓದಿ: ಡೀಸೆಲ್ ಬೆಲೆ ಏರಿಕೆ – ಖಾಸಗಿ ಬಸ್ ಪ್ರಯಾಣ ದರ ದುಬಾರಿ!
ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಬರುವ ಹಿನ್ನಲೆ ಕಾಡು ಪ್ರಾಣಿಗಳಿಗೆ ತೊಂದರೆಯಾಗುವ ನಿಟ್ಟಿನಲ್ಲಿ 2016ರಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಯಾವುದೇ ಶೂಟಿಂಗ್‌ಗಳು ಸಹ ಬೆಟ್ಟದಲ್ಲಿ ನಡೆದಿಲ್ಲ. ಆದರೆ ಇದೀಗ ಶೂಟಿಂಗ್‌ಗೆ ಅವಕಾಶ ಕೊಟ್ಟಿರುವುದು ಏಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಒಂದು ದಿನದ ಮಟ್ಟಿಗೆ ಸರ್ಕಾರ ಮಲಯಾಳಂ ಸಿನಿಮಾ ಶೂಟಿಂಗ್‌ಗೆ ಅವಕಾಶ ಕೊಟ್ಟಿತ್ತು. ಸ್ಥಳೀಯ ಕಾಂಗ್ರೆಸ್ ಶಾಸಕ ಗಣೇಶ್ ಪ್ರಸಾದ್ ಕೂಡ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾಗಿದ್ದಾರೆ. ಸರ್ಕಾರ, ಸಚಿವರಿಗೆ ಪರಿಸರ ಸೂಕ್ಷ್ಮ ವಲಯದ ಅರಿವಿಲ್ಲದಿದ್ದರೂ ಪರವಾಗಿಲ್ಲ, ಸ್ಥಳೀಯ ಶಾಸಕರಿಗಿಲ್ವಾ ಎನ್ನುವ ಪ್ರಶ್ನೆ ಮಾಡುತ್ತಾರೆ. ಅರಣ್ಯದಲ್ಲಿ ನಮ್ಮ ಹಸು ಮೇಯಲು ಹೋದರೆ ಅವಕಾಶ ಕೊಡುವುದಿಲ್ಲ. ನಮ್ಮ ಮೇಲೆ ಕೇಸ್ ಹಾಕಿದ ನಿದರ್ಶನ ಕೂಡ ಇದೆ. ಹೀಗಿರುವಾಗ ಶೂಟಿಂಗ್‌ಗೆ ಸರ್ಕಾರ ಪರ್ಮಿಷನ್ ಕೊಟ್ಟು ಅದರಿಂದ ಬಂಡೀಪುರದ ಆದಾಯ ಹೆಚ್ಚಿಸುವ ಅಗತ್ಯವಿಲ್ಲ ಸ್ಥಳೀಯರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಭಾರತದ ಉದ್ಯಮಿಗೆ ಅಮೆರಿಕದಲ್ಲಿ ಕಹಿ ಅನುಭವ – ಏರ್‌ಪೋರ್ಟ್‌ನಲ್ಲಿ 8 ಗಂಟೆ ಕೂರಿಸಿದ ಆರೋಪ
ಈ ಬಗ್ಗೆ ಆರಣ್ಯ ಇಲಾಖೆ ಡಿಸಿಎಫ್ ಪ್ರಭಾಕರನ್ ಮಾತ್ರ ರಾಜ್ಯ ಸರ್ಕಾರದಿಂದಲೇ ಮಲಯಾಳಂ ಸಿನಿಮಾ ಚಿತ್ರಿಕರಣಕ್ಕೆ ಅನುಮತಿ ನೀಡಲಾಗಿದೆ. ಅನುಮತಿಯ ಅದೇಶ ಪ್ರತಿ ನಮಗೂ ಬಂದಿದೆ. ಅಗ್ರಿಮೆಂಟ್ ಮಾಡ್ಕೊಂಡಿದ್ದೇವೆಂದು ಪಬ್ಲಿಕ್ ಟಿವಿಗೆ ಡಿಸಿಎಫ್ ಪ್ರಭಾಕರ್ ದೂರವಾಣಿಯಲ್ಲಿ ಮೂಲಕ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್ ಅನ್ನು 104% ಹೆಚ್ಚಿಸಿದ ಅಮೆರಿಕ
ಈಗಾಗ್ಲೇ ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವು ಬೇಡ ಎಂಬ ಕಾವು ಹೊತ್ತಿದೆ. ಈ ಸಮಯದಲ್ಲಿ ಮಲಯಾಳಂ ಸಿನಿಮಾಗೆ ಸರ್ಕಾರ ಅವಕಾಶ ಕಲ್ಪಿಸಿದ್ದು, ರೈತರು ಹಾಗೂ ಪರಿಸರವಾದಿಗಳ ಕಣ್ಣು ಕೆಂಪಾಗಿಸಿದೆ.