ಬೆಂಗಳೂರು: ವಿದೇಶಗಳಲ್ಲಿ ಕೊರೊನಾ ಹೊಸ ರೂಪಾಂತರ ತಳಿ ಓಮಿಕ್ರಾನ್ ತನ್ನ ಆರ್ಭಟ ಶುರು ಮಾಡಿದೆ. ಈ ನಡುವೆ ರಾಜ್ಯದಲ್ಲಿ 3ನೇ ಅಲೆ ಭೀತಿಯಿಂದಾಗಿ ಜನ ವ್ಯಾಕ್ಸಿನ್ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
Advertisement
ದೇಶದಲ್ಲಿ ಕೊರೊನಾ ಎರಡನೇ ಅಲೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಮೂರನೇ ಅಲೆ ಇಲ್ಲ ಅಂದುಕೊಂಡಿದ್ದ ಜನತೆಗೆ ಇದೀಗ ಕೊರೊನಾ ಹೊಸ ರೂಪಾಂತರ ತಳಿ ಓಮಿಕ್ರಾನ್ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ, ನೃತ್ಯ ನಿರ್ದೇಶಕ ಶಿವಶಂಕರ್ ಕೊರೊನಾದಿಂದ ಸಾವು
Advertisement
Advertisement
ಈಗಾಗಲೇ ಒಮಿಕ್ರಾನ್ ರೂಪಾಂತರಿ ವೈರಸ್ ನಿಧಾನವಾಗಿ ಅನೇಕ ದೇಶಗಳಲ್ಲಿ ಕಾಣಿಸಿಕೊಂಡು ತನ್ನ ಅಬ್ಬರವನ್ನ ಶುರು ಮಾಡಿಕೊಳ್ಳುತ್ತಿದೆ. ದಕ್ಷಿಣ ಆಪ್ರಿಕಾ, ಲಂಡನ್, ಹಾಂಕಾಂಗ್, ಕೆನಡಾ ಸೇರಿದಂತೆ ಹಲವೆಡೆ ರೂಪಾಂತರಿ ವೈರಸ್ ರೂಪ ತಾಳಿ ಅನೇಕ ಸಾವು ನೋವುಗಳನ್ನು ಉಂಟುಮಾಡುತ್ತಿದೆ.
Advertisement
ಈಗ ಭಾರತವೂ ಹೈ ಅಲರ್ಟ್ ಆಗಿದ್ದು ನಮ್ಮ ದೇಶಕ್ಕೆ ಈ ರೂಪಾಂತರಿ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಮೂರನೇ ಅಲೆ ಶುರುವಾಗಿರುವ ಸಾಧ್ಯತೆ ಹೆಚ್ಚಾಗಿದ್ದು, ಕೊರೊನಾ ತಡೆಯಲು ಇರುವ ಮಾರ್ಗದಲ್ಲಿ ವ್ಯಾಕ್ಸಿನ್ ಕೂಡ ಬಹಳ ಪ್ರಮುಖವಾದ ಅಸ್ತ್ರ. ಇಷ್ಟು ದಿನ ಖಾಲಿ, ಖಾಲಿಯಾಗಿದ್ದ ವ್ಯಾಕ್ಸಿನ್ ಸೆಂಟರ್‌ಗಳು ಈಗ ಹೌಸ್ ಪುಲ್ ಆಗಿದ್ದು, ಜನ ಮೂರನೇ ಅಲೆಯ ಭೀತಿಯಿಂದ ವ್ಯಾಕ್ಸಿನ್ ಪಡೆಯಲು ಕ್ಯೂ ನಿಂತು ಕಾಯುತ್ತಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ತಡೆಗೆ ರಾಜ್ಯದಲ್ಲಿ ಕಟ್ಟೆಚ್ಚರ – ಇಂದು ಸುಧಾಕರ್ ನೇತೃತ್ವದಲ್ಲಿ ಸಭೆ
ಚಾಮರಾಜಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಷ್ಟು ದಿನ 50 ರಿಂದ 60 ಜನ ಬಂದು ವ್ಯಾಕ್ಸಿನ್ ಪಡೆಯುತ್ತಿದ್ದರು. ಒಮಿಕ್ರಾನ್ ಆತಂಕ ಶುರುವಾಗಿರುವ ಕಾರಣ ಇಂದು ವ್ಯಾಕ್ಸಿನ್ ಡ್ರೈವ್ ಶುರುವಾಗಿ ಕೇವಲ 2 ಗಂಟೆಯೊಳಗೆ 120ಕ್ಕೂ ಹೆಚ್ಚು ಜನ ವ್ಯಾಕ್ಸಿನ್ ಪಡೆದಿದ್ದಾರೆ. ಇನ್ನೂ ನೂರಾರು ಜನ ವ್ಯಾಕ್ಸಿನ್ ಪಡೆಯಲು ಕ್ಯೂ ನಿಂತು ಕಾಯುತ್ತಿದ್ದಾರೆ.