ಕಲಬುರಗಿ: ಒಂದೇ ಮಳೆಗೆ ಗೊಬ್ಬರು ಹಳ್ಳ (Gobbaru Halla) ತುಂಬಿ ಹರಿದಿದ್ದು, ಹಳ್ಳದಲ್ಲಿ ಸಿಲುಕಿಕೊಂಡಿದ್ದವರನ್ನು ಜೆಸಿಬಿ ಮೂಲಕ ರಕ್ಷಿಸಲಾಗಿದೆ.
ಕಲಬುರಗಿ (Kalaburagi) ಜಿಲ್ಲೆ ಅಫಜಲಪುರ ತಾಲೂಕಿನ ನಿಲೂರು ಬಳಿ ಘಟನೆ ನಡೆದಿದೆ. ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದರಿಂದ ಹಳ್ಳ ದಾಟದೇ ಕಂಗಾಲಾಗಿದ್ದ ಸ್ಥಳೀಯರನ್ನು ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಉ.ಕನ್ನಡದ ಕರಾವಳಿಯಲ್ಲಿ ಮಳೆ ಅಬ್ಬರ – ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಗೆ ನುಗ್ಗಿದ ನೀರು
ಜಮೀನಿಗೆ ಹೋಗಿ ವಾಪಸ್ ಬರುವಾಗ ಗೊಬ್ಬರ ಹಳ್ಳ ಬೋರ್ಗರೆದಿತ್ತು. ಈ ವೇಳೆ ಸ್ಥಳೀಯರು ಜೆಸಿಬಿ ಮೂಲಕ ಜನರನ್ನು ದಡ ಸೇರಿಸಿದ್ದಾರೆ.
ನಿನ್ನೆ ಸಂಜೆ ಅಫಜಲಪುರ ತಾಲೂಕಿನ ಭಾರಿ ಮಳೆಯಾಗಿತ್ತು. ಗ್ರಾಮೀಣ ಭಾಗದಲ್ಲಿ ಸುರಿದ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿದಿದ್ದವು. ಇದನ್ನೂ ಓದಿ: 150 ಅಡಿ ಆಳದ ಬಾವಿಗೆ ಉರುಳಿದ ಟ್ಯಾಂಕರ್ – ಚಾಲಕ ಸ್ಥಳದಲ್ಲೇ ದಾರುಣ ಸಾವು
