ಗೋಲ್ಡ್ ರಿಕವರಿಗೆ ಬಂದ ತಮಿಳುನಾಡು ಪೊಲೀಸರು ಚಿಕ್ಕಬಳ್ಳಾಪುರದಲ್ಲಿ ಲಾಕ್

Public TV
2 Min Read
CHIKKABALLAPUR TAMILNADU POLICE

ಚಿಕ್ಕಬಳ್ಳಾಪುರ: ಕಳ್ಳತನ ಪ್ರಕರಣದಲ್ಲಿ ಮಾರಾಟ ಮಾಡಲಾಗಿದ್ದ ಚಿನ್ನಾಭರಣಗಳ ರಿಕವರಿಗೆ ಅಂತ ಕಳ್ಳನ ಸಮೇತ ಬಂದ ತಮಿಳುನಾಡು ಮೂಲದ ಪೊಲೀಸರನ್ನು ಚಿನ್ನದಂಗಡಿ ಮಾಲೀಕರು ಕೂಡಿ ಹಾಕಿದ ಘಟನೆ ಚಿಕ್ಕಬಳ್ಳಾಪುರ (Chikkaballapur) ನಗರದಲ್ಲಿ ನಡೆದಿದೆ.

ಗೋಲ್ಡ್ ರಿಕವರಿಗೆ ಅಂತ ಬಂದ ತಮಿಳುನಾಡಿನ ಚೆನ್ನೈನ ಕೊರಟೂರು ಟಿತ್ರಿ ಪೊಲೀಸರಿಗೆ ಚಿಕ್ಕಬಳ್ಳಾಪುರ ನಗರದ ಗಂಗಮ್ಮ ಗುಡಿ ಬಜಾರ್ ರಸ್ತೆಯಲ್ಲಿ ಚಿನ್ನದಂಗಡಿ ಮಾಲೀಕರು ದಿಗ್ಭಂಧನ ವಿಧಿಸಿದ್ದಾರೆ.

CHIKKABALLAPUR TAMILNADU POLICE 2

ಏನಿದು ಘಟನೆ..?: ಚಿನ್ನದಂಗಡಿ ಮಾಲೀಕ ಆತುಲ್ ಸೂರ್ಯವಂಶಿ ಎಂಬಾತನಿಗೆ ಕಳ್ಳ ಮಹಮದ್ ಖಾನ್ ಎಂಬಾತ ಕದ್ದ ಚಿನ್ನವನ್ನ ಮಾರಾಟ ಮಾಡಿದ್ದನಂತೆ. ಈ ವಿಚಾರದಲ್ಲಿ ಈಗಾಗಲೇ ಎರಡು ಬಾರಿ ಬೆಂಗಳೂರು, ತಮಿಳುನಾಡು ಪೊಲೀಸರು (Tamilnadu Police) ಸೇರಿದಂತೆ ಬೇರೆ ಬೇರೆ ಠಾಣಾ ಪೊಲೀಸರು ಆತುಲ್ ಬಳಿ 200 ಗ್ರಾಂ ಚಿನ್ನಾಭರಣವನ್ನ ರಿಕವರಿ ಮಾಡಿಕೊಂಡಿದ್ದಾರಂತೆ. ಆದರೆ ಈಗ ಮರಳಿ ಅದೇ ಕಳ್ಳನನ್ನು ಕರೆದುಕೊಂಡು ತಮಿಳುನಾಡು ಪೊಲೀಸರು ಗೋಲ್ಡ್ ರಿಕವರಿಗೆ ಬಂದಿದ್ದಾರೆ.

ಈಗಾಗಲೇ ಆತುಲ್ ಅಂಗಡಿ ಮುಚ್ಚಿಹಾಕಿ ಊರು ಬಿಟ್ಟು ಓಡಿ ಹೋಗಿದ್ದು, ಆತುಲ್ ಸಿಕ್ಕಿಲ್ಲ ಅಂತ ಗೋಲ್ಡ್ ರಿಕವರಿಗೆ (Gold Recovery) ಬಂದಿರೋ ಪೊಲೀಸರು ಆತುಲ್ ಮಾವ ಶ್ರೀನಿವಾಸ್ ನನ್ನ ಅರೆಸ್ಟ್ ಮಾಡೋಕೆ ಮುಂದಾಗಿದ್ದಾರೆ. ಇದರಿಂದ ಆಕ್ರೋಶಗೊಂಡಿರೋ ಚಿನ್ನದಂಗಡಿ ಮಾಲೀಕರು ಪೊಲೀಸರಿಗೆ ದಿಗ್ಬಂಧನ ವಿಧಿಸಿ, ಅವರು ಬಂದಿದ್ದ ಕಾರಿನ ಚಕ್ರದ ಗಾಳಿಯನ್ನೇ ಬಿಟ್ಟು ಆಕ್ರೋಶ ಹೊರಹಾಕಿದ್ರು. ಗಂಟೆಗಟ್ಟಲೇ ಜ್ಯುವೆಲ್ಲರಿ ಶಾಪ್ ನಲ್ಲಿ ಕೂಡಿ ಹಾಕಿದ್ರು. ಇದನ್ನೂ ಓದಿ: ಹಾಸ್ಟೆಲ್‍ನ ಕಿಟಕಿ ರಾಡ್ ಮುರಿದು ಮೂವರು ವಿದ್ಯಾರ್ಥಿನಿಯರು ಪರಾರಿ

CHIKKABALLAPUR TAMILNADU POLICE 1

ಘಟನೆ ನಂತರ ಚಿಕ್ಕಬಳ್ಳಾಪುರ ನಗರ ಪೊಲೀಸರು, ಜ್ಯುವೆಲ್ಲರಿ ಶಾಪ್ ಮಾಲೀಕರು ದಿಗ್ಬಂಧನ ಹಾಕಿದ್ದ ಕಳ್ಳ ಮಹಮದ್ ಖಾನ್ ಹಾಗೂ ಪೊಲೀಸರನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ತಮಿಳುನಾಡು ಬಂದಿದ್ದವರು ಸಿಪಿಐ ವಿ ರಮಣಿ, ಪಿಎಸ್‍ಐ ಸೆಲ್ವಕುಮಾರ್ ಅಂತ ತಿಳಿದುಬಂದಿದೆ. ತಮಿಳುನಾಡು ಪೊಲೀಸರು ಕರೆತಂದಿದ್ದ ಕಳ್ಳ ಮಹಮದ್ ಖಾನ್ ಎಂಬಾತನಾಗಿದ್ದು, ಮೂಲತಃ ಆಂಧ್ರದ ಹಿಂದೂಪುರದವಾನಾಗಿದ್ದು, ಸದ್ಯ ಬೆಂಗಳೂರಿನ ಆರ್ ಟಿ ನಗರದಲ್ಲಿ ವಾಸವಾಗಿದ್ದಾನೆ. ಈತನ ವೃತ್ತಿಯೇ ಮನೆಗಳ್ಳತನವಾಗಿದ್ದು, ಚೆನೈ ಬೆಂಗಳೂರು ಸೇರಿದಂತೆ ಹಲವು ಕಡೆ ಮನೆಗಳಲ್ಲಿ ಕಳ್ಳತನ ಮಾಡಿದ್ದ ಚಿನ್ನಾಭರಣಗಳನ್ನ ಚಿಕ್ಕಬಳ್ಳಾಪುರ ನಗರದ ಚಿನ್ನದಂಗಡಿ ಮಾಲೀಕ ಆತುಲ್ ಸೂರ್ಯವಂಶಿ ಎಂಬಾತನಿಗೆ ಮಾರಾಟ ಮಾಡಿದ್ದಾನೆ.

ಇದುವರೆಗೂ 580 ಗ್ರಾಂ ಚಿನ್ನಾಭರಣಗಳನ್ನ ನಾನು ಆತುಲ್ ಗೆ ನೀಡಿದ್ದೇನೆ. ಮಾರಾಟ ಮಾಡಿದಾಗ ಆತುಲ್ ಜೊತೆ ಆತನ ಮಾವ ಶ್ರೀನಿವಾಸ್ ಸಹ ಇದ್ದರು. ಹಾಗಾಗಿ ನಾನು ಅವರ ಮಾಹಿತಿಯನ್ನ ಸಹ ಪೊಲೀಸರಿಗೆ ಹೇಳಿದ್ದೇನೆ. ಅಂತಾನೆ ಕಳ್ಳ ಮಹಮದ್ ಖಾನ್, ಆದರೆ ಜ್ಯುವೆಲ್ಲರಿ ಶಾಪ್ ಮಾಲೀಕರು ಆತುಲ್ ಗೆ ಮಾರಾಟ ಮಾಡಿದರೆ ಅವನನ್ನ ಅರೆಸ್ಟ್ ಮಾಡಲಿ ಅದು ಬಿಟ್ಟು ಅವರ ಮಾವ ಹೆಂಡತಿನಾ ಯಾಕೆ ಅರೆಸ್ಟ್ ಮಾಡೋದು ಅನ್ನೋದು ಅವರ ವಾದವಾಗಿದೆ.

CHIKKABALLAPUR TAMILNADU POLICE 4

ಸದ್ಯ ಚಿಕ್ಕಬಳ್ಳಾಪುರ ನಗರ ಪೊಲೀಸರು ದಿಗ್ಬಂಧನಕ್ಕೊಳಗಾಗಿದ್ದ ಕಳ್ಳ ಹಾಗೂ ಪೊಲೀಸರನ್ನ ಬಿಡಿಸಿ ಮರಳಿ ತಮಿಳುನಾಡಿಗೆ ಕಳುಹಿಸಿಕೊಟ್ಟಿದ್ದಾರೆ. ಇತ್ತ ಗೋಲ್ಡ್ ರಿಕವರಿಗೆ ಅಂತ ಬಂದ ಪೊಲೀಸರೇ ಜನರೇ ಕೈಯಲ್ಲಿ ತಗ್ಲಾಕ್ಕೊಂಡು ಲಾಕ್ ಆಗಿದ್ದು, ವಿಪರ್ಯಾಸವೇ ಸರಿ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *