ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾಮಠದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಂಬಾದೇವಿ ರಥೋತ್ಸವಕ್ಕೆ ಜನರು ಸೇರುವುದನ್ನು ನಿಷೇಧ ಹೇರಿದರೂ, ನಿಯಮ ಉಲ್ಲಂಘಿಸಿ ಜೋರಾಗಿ ನಡೆದಿದೆ.
ಕೋವಿಡ್ ಹಿನ್ನೆಲೆ ಸಂಪ್ರದಾಯದಂತೆ ಸರಳವಾಗಿ ನಡೆಸಿದ್ದರೂ, ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ. ದೇವಾಲಯಕ್ಕೆ ಭಕ್ತರ ಆಗಮನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ನಿಷೇಧದ ನಡುವೆ ನಡೆದ ರಥೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಸಂಭವ ಹಿನ್ನೆಲೆ ಮುಂಜಾನೆ 5 ಗಂಟೆಗೆ ರಥೋತ್ಸವವನ್ನು ನಡೆಸಲಾಗಿತ್ತು. ಆದರೂ ನೂರಾರು ಜನರು ಪಾಲ್ಗೊಂಡಿದ್ದಾರೆ.
Advertisement
Advertisement
ಪ್ರತಿವರ್ಷ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಅಂಬಾದೇವಿ ಜಾತ್ರೆಯ ರಥೋತ್ಸವದಲ್ಲಿ ಭಾಗಿಯಾಗುತ್ತಿದ್ದರು. ಈ ಬಾರಿ ಕೋವಿಡ್ ನಿಯಮಾವಳಿ ಹಿನ್ನೆಲೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಸುತ್ತಮುತ್ತಲ ಗ್ರಾಮಸ್ಥರು ಮಾತ್ರ ರಥೋತ್ಸವದಲ್ಲಿ ಭಾಗವಹಿಸಿದ್ದಾರೆ. ಇದನ್ನೂ ಓದಿ: ಆರೋಗ್ಯ ಸಚಿವರ ತವರೂರಲ್ಲೇ ಕುರಿ ಸಂತೆ- ಸಾವಿರಾರು ಮಂದಿ ಜಮಾವಣೆ