ಹಾವೇರಿ: ಮನೆ ನಿರ್ಮಾಣಕ್ಕೆ ವರ್ಕ್ ಆರ್ಡರ್ ನೀಡಲು 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಪಿಡಿಒ (PDO) ಲೋಕಾಯುಕ್ತ (Karnataka Lokayukta) ಬಲೆಗೆ ಬಿದ್ದಿರುವ ಘಟನೆ ಹಾವೇರಿ (Haveri) ಜಿಲ್ಲೆಯಲ್ಲಿ ನಡೆದಿದೆ.
ಶಿಗ್ಗಾಂವಿ ತಾಲ್ಲೂಕಿನ ನಾರಾಯಣಪುರದ ಗ್ರಾಮ ಪಂಚಾಯಿತಿ ಪಿಡಿಒ (PDO) ಈರಣ್ಣ ಗಾಣಿಗಿ, ಪಂಚಾಯಿತಿ ವ್ಯಾಪ್ತಿಯ ಮುನವಳ್ಳಿ ಗ್ರಾಮದ ಸಂಗಪ್ಪ ಕಿವುಡನ ಅವರಿಂದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್’ ಸ್ಫೂರ್ತಿ – ರೋಚಕ ಸತ್ಯ ಬಯಲು
Advertisement
Advertisement
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅತಿಯಾದ ಮಳೆಯಿಂದ (RainFall) ಸಂಗಪ್ಪ ಅವರ ಮನೆ ಹಾನಿಗೊಳಗಾಗಿತ್ತು. ಮನೆ ಹಾನಿಗೆ ಪರಿಹಾರ ನೀಡುವಂತೆ ಅರ್ಜಿ ಸಲ್ಲಿಸಿದ್ದ ಸಂಗಪ್ಪ ಅವರನ್ನು ಫಲಾನುಭವಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಮನೆ ನಿರ್ಮಾಣಕ್ಕೆ ವರ್ಕ್ ಆರ್ಡರ್ ನೀಡಲು ಒಟ್ಟು 50 ಸಾವಿರ ರೂ.ಗೆ ಬೇಡಿಕೆಯಿಟ್ಟಿದ್ದರು. ನವಂಬರ್ 10 ರಂದು ಮುಂಗಡ ಹಣವಾಗಿ 20 ಸಾವಿರ ರೂ. ಗಣ ಪಿಡಿಒ ಪಡೆದ್ದರು. ಇದನ್ನೂ ಓದಿ: ಕಾಮೋತ್ತೇಜಕ ಮಾತ್ರೆ ಸೇವಿಸಿ ರೇಪ್ – ವಿಪರೀತ ರಕ್ತಸ್ರಾವದಿಂದ ಗೆಳತಿ ಸಾವು
Advertisement
Advertisement
ಇಂದು ಇನ್ನೂ 20 ಸಾವಿರ ಹಣ ಪಡೆಯುತ್ತಿದ್ದ ವೇಳೆ ಪಿಡಿಒ (PDO) ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಹಾವೇರಿ ಲೋಕಾಯುಕ್ತ ಪೊಲೀಸರು (Lokayukta Police) ಪ್ರಕರಣ ದಾಖಲಿಸಿದ್ದಾರೆ.