ಪವನ್ ಕಲ್ಯಾಣ್ ನಟನೆಯ ‘ಓಜಿ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್

Public TV
1 Min Read
pawan kalyan

ವನ್ ಕಲ್ಯಾಣ್ (Pawan Kalyan) ಆಂಧ್ರಪ್ರದೇಶದ ಡಿಸಿಎಂ ಆಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಅವರು ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಬೆಳ್ಳಿಪರದೆಯಲ್ಲಿ ನೋಡೋದು ಯಾವಾಗ ಎಂಬ ಅಭಿಮಾನಿಗಳ ಕಾತರಕ್ಕೆ ಈಗ ಉತ್ತರ ಸಿಕ್ಕಿದೆ. ಪವನ್ ನಟನೆಯ ‘ಓಜಿ’ ಚಿತ್ರದ (OG) ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದನ್ನೂ ಓದಿ:ಮದುವೆಯಾದ್ಮೇಲೂ ಕೀರ್ತಿ ಸುರೇಶ್‌ಗೆ ಡಿಮ್ಯಾಂಡ್- ಕೈತುಂಬಾ ಸಿನಿಮಾಗಳಲ್ಲಿ ಬ್ಯುಸಿ

Pawan Kalyan 1

ರಾಜಕೀಯದ ಕೆಲಸ ನಡುವೆಯೇ ಕಮಿಟ್ ಆಗಿರೋ ಚಿತ್ರದ ಶೂಟಿಂಗ್ ಅನ್ನು ನಟ ಮುಗಿಸಿಕೊಡ್ತಿದ್ದಾರೆ. ಈ ವರ್ಷ ಸೆ.25ರಂದು ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ. ಗ್ಯಾಂಗ್‌ಸ್ಟರ್ ಕಥೆ ಹೊಂದಿರುವ ಈ ಸಿನಿಮಾಗೆ ಸುರ್ಜಿತ್ ಡೈರೆಕ್ಷನ್ ಮಾಡಿದ್ದಾರೆ. ಇದನ್ನೂ ಓದಿ:59ರಲ್ಲೂ 20ರ ಲುಕ್‌ – ʻಕಿಂಗ್‌ʼ ಫಿಟ್ನೆಸ್ ಗುಟ್ಟೇನು?

ಬಾಲಿವುಡ್ ನಟ ಇಮ್ರಾನ್ ಹಶ್ಮಿ ಅವರು ಪವನ್ ಕಲ್ಯಾಣ್ ಮುಂದೆ ವಿಲನ್ ಆಗಿ ಅಬ್ಬರಿಸಿದ್ದಾರೆ. ಇಬ್ಬರದ್ದು ಜಬರ್‌ದಸ್ತ್ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರದಲ್ಲಿದೆ. ಈ ಚಿತ್ರದ ಮೂಲಕ ತೆಲುಗಿಗೆ ಇಮ್ರಾನ್ ಪದಾರ್ಪಣೆ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡತಿ ಪ್ರಿಯಾಂಕಾ ಮೋಹನ್ ನಟಿಸಿದ್ದಾರೆ.

pawan kalyan

ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಚಿತ್ರವು ಜೂನ್ 12ರಂದು ರಿಲೀಸ್ ಸಿದ್ಧವಾಗಿದೆ. ಈ ಸಿನಿಮಾದ ರಿಲೀಸ್ ದಿನಾಂಕವನ್ನು ಇತ್ತೀಚೆಗೆ ಚಿತ್ರತಂಡ ಅಧಿಕೃತವಾಗಿ ತಿಳಿಸಿತ್ತು.

Share This Article