ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರಮಲ್ಲು’ ರಿಲೀಸ್‌ಗೆ ಮುಹೂರ್ತ ಫಿಕ್ಸ್

Public TV
1 Min Read
pawan kalyan 1 1

ಟಾಲಿವುಡ್ ನಟ ಪವನ್ ಕಲ್ಯಾಣ್ (Pawan Kalyan) ಸಿನಿಮಾಗಳೆಂದರೆ ಕೊಂಚ ಡಿಫರೆಂಟ್. ಸಿನಿಮಾದ ಮೇಕಿಂಗ್, ಮಾಸ್ ಎಲಿಮೆಂಟ್, ಸಾಂಗ್ಸ್ ಎಲ್ಲವೂ ಕೂಡಾ ಡಿಫರೆಂಟಾಗಿಯೇ ಇರುತ್ತದೆ. ಅದರ ಜೊತೆಗೆ ಪವನ್ ಕಲ್ಯಾಣ್ ಕ್ಯಾರೆಕ್ಟರ್ ಹಾಗೂ ಅದಕ್ಕೆ ತಕ್ಕದಾದ ಟೈಟಲ್ ಕೂಡ ಸಖತ್ ಪವರ್‌ಫುಲ್‌ ಆಗಿಯೇ ಇರುತ್ತದೆ. ಸದ್ಯ ಪವನ್ ಕಲ್ಯಾಣ್ ಅಭಿನಯದ ‘ಹರಿಹರ ವೀರಮಲ್ಲು’ (Harihara Veeramallu) ಸಿನಿಮಾ ಸಖತ್ ಸುದ್ದಿಯಲ್ಲಿದೆ. ಚಿತ್ರದ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಇದನ್ನೂ ಓದಿ:ಮಕ್ಕಳ ಜೊತೆ ಗ್ರೀಸ್‌ನಲ್ಲಿ ನಯನತಾರಾ ವೆಕೇಷನ್

pawan kalyan 1

‘ಭೀಮ್ಲಾ ನಾಯಕ್’ ಹಾಗೂ ‘ಬ್ರೋ’ ಸಿನಿಮಾದ ಬಳಿಕ ‘ಹರಿಹರ ವೀರಮಲ್ಲು’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಅಂದಹಾಗೆ, 17ನೇ ಶತಮಾನದ ಮೊಘಲ್ ಸಾಮ್ರಾಜ್ಯದ ಐತಿಹಾಸಿಕ ಕಾಲ್ಪನಿಕ ಕಥೆಯನ್ನು ‘ಹರಿಹರ ವೀರಮಲ್ಲು’ ಒಳಗೊಂಡಿದೆ. ಸದ್ಯ ಈ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, 2025ರ ಮಾರ್ಚ್ 28ಕ್ಕೆ ವಿಶ್ವದಾದ್ಯಂತ ದರ್ಶನ ಕೊಡಲಿದೆ. ಈ ಸುದ್ದಿ ಕೇಳಿ ಪವನ್ ಕಲ್ಯಾಣ್ ಫ್ಯಾನ್ಸ್ ಥ್ರಿಲ್‌ ಆಗಿದ್ದಾರೆ. ‘ಹರಿಹರ ವೀರಮಲ್ಲು’ ಭಾಗ-1 ಸಿನಿಮಾವನ್ನು ಕ್ರಿಶ್ ಜಗರ್ಲಮುಡಿ ನಿರ್ದೇಶನ ಮಾಡಿದ್ದಾರೆ. ಇನ್ನೂ ‘ಬಾಹುಬಲಿ’ ಹಾಗೂ ‘ಆರ್‌ಆರ್‌ಆರ್’ ಸಿನಿಮಾಗಳಿಗೆ ಸಂಗೀತ ನೀಡಿದ ಎಂ.ಎಂ ಕೀರವಾಣಿ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ.

ಪವನ್ ಕಲ್ಯಾಣ್ ಜೊತೆ ಕಾದಾಡೋಕೆ ಮೊಘಲರ ದೊರೆಯಾಗಿ ಬಾಲಿವುಡ್‌ನ ಬಾಬಿ ಡಿಯೋಲ್ ಕಾಣಿಸಿಕೊಂಡಿದ್ದಾರೆ. ‘ಹರಿಹರ ವೀರಮಲ್ಲು’ ಐತಿಹಾಸಿಕ ಕಥೆಯ ಜೊತೆಗೆ ಒಂದಷ್ಟು ಕಾಲ್ಪನಿಕ ಅಂಶಗಳು ಒಳಗೊಂಡಿದ್ದು, ಫ್ಯಾನ್ಸ್‌ಗೆ ಹೊಸ ರೀತಿಯ ಅನುಭವ ನೀಡಲಿವೆ. ಈಗಾಗಲೇ ಬಿಟ್ಟಿರುವ ಸಿನಿಮಾದ ತುಣುಕುಗಳಿಂದಲೇ ಗಮನ ಸೆಳೆದಿದ್ದು, ಇನ್ನೇನು ಮುಂದಿನ ವರ್ಷ ಮಾರ್ಚ್‌ನಲ್ಲಿ ಚಿತ್ರಮಂದಿರಲ್ಲಿ ಅಬ್ಬರಿಸಲಿದೆ.

Share This Article