ನಟಿ ಪವಿತ್ರಾ ಲೋಕೇಶ್ (Pavitra Lokesh) ಜೊತೆ ಕಿಸ್ ಮಾಡುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು ತೆಲುಗು ನಟ ನರೇಶ್ ಬಾಬು (Naresh Babu). ಆ ವಿಡಿಯೋದಲ್ಲಿ ಅತೀ ಶೀಘ್ರದಲ್ಲೇ ಮದುವೆ ಆಗುವ ವಿಚಾರವನ್ನೂ ಅವರು ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಕೂಡ ಆಗಿತ್ತು. ಈ ವಿಡಿಯೋವನ್ನು ನೋಡಿದ ನರೇಶ್ ಬಾಬು ಅವರ ಪತ್ನಿ ರಮ್ಯಾ (Ramya) ಗರಂ ಆಗಿದ್ದಾರೆ. ಮನುಷ್ಯತ್ವ ಇರುವವರು ಈ ರೀತಿ ಬಹಿರಂಗವಾಗಿ ಅಸಹ್ಯಕರ ರೀತಿಯಲ್ಲಿ ನಡೆದುಕೊಳ್ಳುವುದಿಲ್ಲ ಎಂದಿದ್ದಾರೆ.
Advertisement
ಪವಿತ್ರಾ ಲೋಕೇಶ್ ಮತ್ತು ನರೇಶ್ ಬಾಬು ಸದ್ಯದಲ್ಲೇ ಮದುವೆ (Marriage) ಆಗಲಿದ್ದಾರೆ ಎನ್ನುವ ಸುದ್ದಿ ತೆಲುಗು ರಂಗದಲ್ಲಿ ಹರಿದಾಡುತ್ತಿದೆ. ಇವರಿಬ್ಬರೂ ಒಂದೇ ಮನೆಯಲ್ಲೇ ಹಲವು ತಿಂಗಳಿಂದ ವಾಸವಿದ್ದಾರೆ ಎನ್ನುವ ವಿಷಯ ಕೂಡ ಗುಟ್ಟಾಗಿ ಉಳಿದಿಲ್ಲ. ಮೈಸೂರು ವಸತಿ ಗೃಹದಲ್ಲೂ ಇಬ್ಬರೂ ಬೆಳ್ಳಂಬೆಳಗ್ಗೆ ಸಿಕ್ಕಾಕಿಕೊಂಡರು. ಆ ನಂತರ ಆದಷ್ಟು ಬೇಗ ಇವರು ಮದುವೆಯಾಗಲಿದ್ದಾರೆ ಎನ್ನುವುದು ಪಕ್ಕಾ ಆಗಿತ್ತು. ಇದನ್ನೂ ಓದಿ: ಸೋನು ಗೌಡ ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಹೇಳೋದೇನು?
Advertisement
Advertisement
ವಿಡಿಯೋ ಕುರಿತು ಮಾತನಾಡಿರುವ ರಮ್ಯಾ, ‘ಯಾವುದೇ ಕಾರಣಕ್ಕೂ ಈ ಮದುವೆ ಆಗುವುದಕ್ಕೆ ನಾನು ಬಿಡುವುದಿಲ್ಲ. ಅಸಲಿಯಾಗಿ ನಾನು ಡಿವೋರ್ಸ್ ಕೊಟ್ಟಿಲ್ಲ. ಕೋರ್ಟಿನಲ್ಲಿ ಡಿವೋರ್ಸ್ ಕೇಸ್ ನಡೆಯುತ್ತಿದೆ. ಈ ವೇಳೆಯಲ್ಲಿ ಈ ಹುಚ್ಚಾಟವನ್ನು ಅವರು ಬಿಡಬೇಕು. ಯಾವುದೇ ಕಾರಣಕ್ಕೂ ನರೇಶ್ ಅವರನ್ನು ಬಿಟ್ಟು ಕೊಡಲು ನಾನು ತಯಾರಿಲ್ಲ’ ಎಂದು ಪವಿತ್ರಾ ಲೋಕೇಶ್ ವಿರುದ್ಧ ಗುಡುಗಿದ್ದಾರೆ.
Advertisement
ಪವಿತ್ರಾ ಲೋಕೇಶ್ ಮತ್ತು ನರೇಶ್ ಬಾಬು ಬಿಡುಗಡೆ ಮಾಡಿದ್ದ ವಿಡಿಯೋ ಕುರಿತಾಗಿಯೂ ಹಲವು ಅನುಮಾನಗಳು ವ್ಯಕ್ತವಾಗಿವೆ. ಅಸಲಿಯಾಗಿ ಈ ವಿಡಿಯೋ ಅವರ ಮದುವೆಗೆ ಸಂಬಂಧಿಸಿದ್ದಾ ಎನ್ನುವ ಪ್ರಶ್ನೆ ಮೂಡಿದೆ. ನರೇಶ್ ಬಾಬು ಅವರು ರಮ್ಯಾ ಅವರಿಂದ ಡಿವೋರ್ಸ್ ಪಡೆಯದೇ ಹೇಗೆ ಈ ರೀತಿಯ ವಿಡಿಯೋ ಮಾಡಲಿಕ್ಕೆ ಸಾಧ್ಯ? ಎನ್ನುವ ಚರ್ಚೆಯನ್ನೂ ಅದು ಹುಟ್ಟುಹಾಕಿದೆ. ಈ ರೀತಿ ಮಾಡಿದರೆ ಕಾನೂನು ಬಾಹೀರ ಅಲ್ಲವಾ ಎಂದು ಹಲವರು ಪ್ರಶ್ನೆಯನ್ನೂ ಕೇಳಿದ್ದಾರೆ. ಆದರೆ, ಆ ವಿಡಿಯೋ ಅವರ ಮದುವೆಗೆ ಸಂಬಂಧಿಸಿದ್ದು ಅಲ್ಲ ಎಂದು ಹೇಳಲಾಗುತ್ತಿದೆ. ಸಿನಿಮಾವೊಂದರ ಪ್ರಚಾರಕ್ಕಾಗಿ ಅವರು ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ನರೇಶ್ ಬಾಬು ಮತ್ತು ಪವಿತ್ರಾ ಲೋಕೇಶ್ ಜೊತೆಯಾಗಿ ‘ಮಲ್ಲಿ ಪೆಳ್ಳಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಲ್ಲಿ ಪಳ್ಳಿ ಎಂದರೆ ಮದುವೆ ಎಂದು ಅರ್ಥ. ಈ ಸಿನಿಮಾದ ಪ್ರಚಾರಕ್ಕಾಗಿ ಇಂಥದ್ದೊಂದು ವಿಡಿಯೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ತೆಲುಗು ಸಿನಿಮಾ ರಂಗದಲ್ಲಿ ಗುಸುಗುಸು ಪಿಸುಪಿಸು ಮಾತಿಗೂ ಕಾರಣವಾಗಿದೆ. ಡಿವೋರ್ಸ್ ಸಿಗದೇ ಇಂಥದ್ದೊಂದು ಸಾಹಸ ಮಾಡುವುದಕ್ಕೆ ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k