ಕನ್ನಡ ಚಿತ್ರರಂಗ ಮತ್ತು ಟಾಲಿವುಡ್ ಸದ್ಯದ ಹಾಟ್ ಟಾಪಿಕ್ ಅಂದ್ರೆ ನರೇಶ್ ಮತ್ತು ಪವಿತ್ರಾ ಲೋಕೇಶ್ ವಿಚಾರ. ಇವರಿಬ್ಬರ ಆಫೇರ್ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗ್ತಿರುವ ಬೆನ್ನಲ್ಲೇ ನೆಟ್ಟಿರ ಕೆಂಗಣ್ಣಿಗೆ ಈ ಜೋಡಿ ಗುರಿಯಾಗಿದ್ದಾರೆ.
ಟಾಲಿವುಡ್‌ನ ಸ್ಟಾರ್ ವಿಜಯ್ ನಿರ್ಮಲಾ ಅವರ ಮಗ ನಟ ನರೇಶ್‌ಗೆ ಈಗಾಗಲೇ 3 ಮದುವೆಯಾಗಿದೆ. ಸದ್ಯ ಪವಿತ್ರಾ ಲೋಕೇಶ್ ಜತೆಗಿನ ನಾಲ್ಕನೇ ಮದುವೆಯ ವಿಚಾರವಾಗಿ ಸಖತ್ ಸೌಂಡ್ ಮಾಡ್ತಿದ್ದಾರೆ. ಅಫೇರ್ ವಿಚಾರವಾಗಿ ಹಾಟ್ ಟಾಪಿಕ್ ಆಗಿರುವ ಈ ಜೋಡಿ ಇಷ್ಟು ಬೇಗ ಅಣ್ಣ ತಂಗಿ ಆದ್ರಾ ಅಂತಾ ಪ್ರೇಕ್ಷಕರು ಪ್ರಶ್ನೆಸುತ್ತಿದ್ದಾರೆ. ಇದನ್ನೂ ಓದಿ:`ಮಹಾಭಾರತ’ ಖ್ಯಾತಿಯ ನಟ ರಸಿಕ್ ದವೆ ವಿಧಿವಶ
ಇದೀಗ ಮತ್ತೊಮ್ಮೆ ನರೇಶ್ ಮತ್ತು ಪವಿತ್ರಾ ವಿಚಾರ ಸದ್ದು ಮಾಡಲು ರವಿತೇಜಾ ನಟನೆಯ `ರಾಮ್‌ರಾವ್ ಆನ್‌ಡ್ಯೂಟಿ’ ಚಿತ್ರ. ನಿನ್ನೇಯಷ್ಟೇ ತೆರೆಕಂಡಿದೆ. ನಿಜಜೀವನದಲ್ಲಿ ಜೋಡಿಯಾಗಿ ಗುರುತಿಸಿಕೊಳ್ತಿರುವ ನರೇಶ್ ಮತ್ತು ಪವಿತ್ರಾ ಈ ಚಿತ್ರದಲ್ಲಿ ಅಣ್ಣ ತಂಗಿಯಾಗಿ ನಟಿಸಿದ್ದಾರೆ. ಒಡಹುಟ್ಟಿದವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲಿಂದ ಎಲ್ಲಿಗೆ ಸಂಬಂಧ ನೋಡಿ ಅಂತಾ ಸಿನಿಮಾ ನೋಡಿದವರು ತಮಾಷೆ ಮಾಡುತ್ತಿದ್ದಾರೆ.
ನಿಜಜೀವನದಲ್ಲಿ ಇಬ್ಬರೂ ಜತೆಯಾಗಿ ಜೀವನ ನಿರ್ವಹಿಸುತ್ತಿದ್ದಾರೆ. ಎಲ್ಲಾ ಕಡೆ ಮದುವೆಯ ವಿಚಾರವಾಗಿ ಸಾಕಷ್ಟು ರಂಪಾಟವಾಗಿರುವ ಪ್ರೇಕ್ಷಕರಿಗೂ ತಿಳಿದಿದೆ. ತೆರೆಯ ಮೇಲೆ ಅಣ್ಣ ತಂಗಿ ಪಾತ್ರ ನೋಡಿ ಫ್ಯಾನ್ಸ್ ಬಿದ್ದು ಬಿದ್ದು ನಕ್ಕಿದ್ದಾರೆ. ಒಟ್ನಲ್ಲಿ ಸಿನಿಮಾಗಿಂತ ತಮ್ಮ ವೈಯಕ್ತಿಕ ವಿಚಾರವಾಗಿ ಈ ಜೋಡಿ ಸಖತ್ ಸೌಂಡ್ ಮಾಡ್ತಿದೆ.
Live Tv
[brid partner=56869869 player=32851 video=960834 autoplay=true]