BollywoodCinemaLatestMain PostTV Shows

`ಮಹಾಭಾರತ’ ಖ್ಯಾತಿಯ ನಟ ರಸಿಕ್ ದವೆ ವಿಧಿವಶ

Advertisements

`ಮಹಾಭಾರತ’ ಸೀರಿಯಲ್ ಖ್ಯಾತಿಯ ನಟ ರಸಿಕ್ ದವೆ ವಿಧಿವಶರಾಗಿದ್ದಾರೆ. ನಿನ್ನೆ(ಜು.29) ಮುಂಬೈನ ನಿವಾಸದಲ್ಲಿ ನಟ ರಸಿಕ್ ನಿಧನ ಹೊಂದಿದ್ದಾರೆ. ಹಿಂದಿ ಮತ್ತು ಗುಜರಾತಿ ಸೇರಿದಂತೆ ಸಾಕಷ್ಟು ಸೀರಿಯಲ್ ಮೂಲಕ ಗುರುತಿಸಿಕೊಂಡಿದ್ದ ನಟ ರಸಿಕ್ ಇನ್ನಿಲ್ಲ.

ಸೀರಿಯಲ್ ಮತ್ತು ಧಾರಾವಾಹಿ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ನಟ ರಸಿಕ್ ದವೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. 65 ವರ್ಷ ರಸಿಕ್‌ಗೆ ವಯಸ್ಸಾಗಿತ್ತು. ಸೂಕ್ತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಸಿಕ್ ನಿಧನರಾಗಿದ್ದಾರೆ. ರಸಿಕ್ ಅವರ ಪತ್ನಿ ನಟಿ ಕೇತಕಿ ದೇವಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇಂದು ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ:ಮುದ್ದು ಮಗನನ್ನ ಪರಿಚಯಿಸಿದ ಸಂಜನಾ ಗಲ್ರಾನಿ

ಗುಜರಾತಿಯ ಸೀರಿಯಲ್ `ಪುತ್ರವಧು’, `ನಚ್ ಬಲಿಯೇ’ ಡ್ಯಾನ್ಸಿಂಗ್ ಸ್ಟಾರ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಮಹಾಭಾರತ ಸೀರಿಯಲ್ ರಸಿಕ್‌ಗೆ ಸಾಕಷ್ಟು ಖ್ಯಾತಿಯನ್ನ ತಂದುಕೊಟ್ಟಿತ್ತು. ಈಗ ನಟನ ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ.

Live Tv

Leave a Reply

Your email address will not be published.

Back to top button