ರಾಯಚೂರು: ನಗರದ ಕೇಂದ್ರ ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್‌ನಲ್ಲಿ ಪಾನಮತ್ತ ಸಿಬ್ಬಂದಿಯೋರ್ವ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದ್ದ ಹಿನ್ನೆಲೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಟಿಕೆಟ್ ವಿತರಿಸುವ ಕೌಂಟರ್‌ನಲ್ಲಿದ್ದ ಸಿಬ್ಬಂದಿ ಜಯಪ್ರಕಾಶ್ ಒಂದು ಊರಿನ ಟಿಕೆಟ್ ಕೇಳಿದರೆ, ಮತ್ತೊಂದು ಊರಿನ ಟಿಕೆಟ್ ಕೊಟ್ಟು ಪ್ರಯಾಣಿಕರನ್ನು ಗೊಂದಲಕ್ಕೆ ಗುರಿ ಮಾಡುತ್ತಿದ್ದ. ರೈಲು ಗಾಡಿ ಸಂಖ್ಯೆ ತಪ್ಪಾಗಿ ಕೊಡುವುದನ್ನೆಲ್ಲಾ ಮಾಡುತ್ತಿದ್ದರಿಂದ ಪ್ರಯಾಣಿಕರು ಅನುಮಾನ ಬಂದು ಪ್ರಶ್ನಿಸಿದಾಗ ಸಿಬ್ಬಂದಿ ಪಾನಮತ್ತನಾಗಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಬರಗೂರು ನನ್ನ ಜೊತೆ ಚರ್ಚೆಗೆ ಬರಲಿ – ರೋಹಿತ್ ಚಕ್ರತೀರ್ಥ ಓಪನ್ ಚಾಲೆಂಜ್
ಘಟನೆ ಸಂಬಂಧಿಸಿದಂತೆ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ನಿಲ್ದಾಣದಲ್ಲಿ ಪ್ರಯಾಣಿಕರು ಗಲಾಟೆ ಮಾಡಿದ್ದಾರೆ. ಅಲ್ಲದೆ ಸಿಬ್ಬಂದಿಯ ವರ್ತನೆ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವುದನ್ನು ಗಮನಿಸಿರುವ ರೈಲ್ವೆ ಬೋರ್ಡ್ ಸದಸ್ಯ ಬಾಬುರಾವ್ ಗುಂತಕಲ್ ರೈಲ್ವೆ ಕೇಂದ್ರದ ಮುಖ್ಯಸ್ಥ ಕುಮಾರ ಗೌರವ್‍ಗೆ ವಿಷಯ ತಿಳಿಸಿದ್ದಾರೆ. ಹೀಗಾಗಿ ಸಿಬ್ಬಂದಿ ಜಯಪ್ರಕಾಶನನ್ನು ಅಮಾನತ್ತುಗೊಳಿಸಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಪರಿಸರವಾದಿಗಳ ತೀವ್ರ ವಿರೋಧ