BelgaumDistrictsKarnatakaLatestMain Post

ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಪರಿಸರವಾದಿಗಳ ತೀವ್ರ ವಿರೋಧ

ಬೆಳಗಾವಿ: ಮಾಳಮಾರುತಿ ವ್ಯಾಪ್ತಿಯಲ್ಲಿ ಬರುವ ವಂಟಮುರಿ ಕಾಲೋನಿಯ ಶ್ರೀನಗರ ಹಾಗೂ ಕಾಕತಿಯಲ್ಲಿ ರಕ್ಷಣಾ ಇಲಾಖೆ ವಶದಲ್ಲಿರುವ 745 ಎಕರೆ ಜಮೀನನ್ನು ಐಟಿ ಮತ್ತು ಬಿಟಿ ಖಾಸಗಿ ಕಂಪನಿಗಳಿಗೆ ಹಸ್ತಾಂತರ ಮಾಡಬಾರದು ಎಂದು ಆಗ್ರಹಿಸಿ ಪರಿಸರವಾದಿಗಳು ಪ್ರತಿಭಟನೆ ನಡೆಸಿದರು.

ಈ ವೇಳೆ ಪರಿಸರವಾದಿ ಶಿವಾಜಿ ಕಾಗಣೀಕರ್ ಮತ್ತು ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ಶ್ರೀನಗರ ಸಾಯಿ ಬಾಬಾ ಮಂದಿರದಿಂದ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಿದರು. ಇದನ್ನೂ ಓದಿ: ಯುವತಿಯರೊಂದಿಗೆ ಕುಣಿದು ಕುಪ್ಪಳಿಸಿದ MLA ಗೋಪಾಲ್ ಮಂಡಲ್ – ವೀಡಿಯೋ ವೈರಲ್

ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಪರಿಸರವಾದಿಗಳು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಮಾಳಮಾರುತಿ ವ್ಯಾಪ್ತಿಯಲ್ಲಿ ಬರುವ ವಂಟಮುರಿ ಕಾಲೋನಿಯ ಶ್ರೀನಗರ ಹಾಗೂ ಕಾಕತಿಯಲ್ಲಿರುವ ರಕ್ಷಣಾ ಇಲಾಖೆಯ ವಶದಲ್ಲಿ ಇರುವ 745 ಎಕರೆ ಜಮೀನನ್ನು ರಕ್ಷಣಾ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಬೇಕೆಂದು ಈಗಾಗಲೇ ಕೇಂದ್ರ ರಕ್ಷಣಾ ಸಚಿವರನ್ನು ಎರಡು ಸಲ ಭೇಟಿಯಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯ ಮಾಡಿದ್ದಾರೆ. ಇದನ್ನೂ ಓದಿ: ಭಾರತ್‌ ಜೋಡೋ ಯಾತ್ರೆ ಬೆನ್ನಲ್ಲೇ ʻಕಾಂಗ್ರೆಸ್‌ ಛೋಡೋʼ ಅಭಿಯಾನ ಶುರುವಾಗುತ್ತೆ: ಬಿಜೆಪಿ ವ್ಯಂಗ್ಯ

745 ಎಕರೆ ಜಮೀನಿನಲ್ಲಿ ರಕ್ಷಣಾ ಇಲಾಖೆ ಅರಣ್ಯ ಬೆಳೆಸಿದೆ. ಆದ್ರೆ, ರಾಜ್ಯ ಸರ್ಕಾರದಿಂದ ಐಟಿ ಪಾರ್ಕ್ ನಿರ್ಮಾಣದ ಉದ್ದೇಶಕ್ಕೆ ಮರಗಳ ಮಾರಣಹೋಮ ಮಾಡಲು ಮುಂದಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ರಕ್ಷಣಾ ಇಲಾಖೆ ಜಿಲ್ಲಾಡಳಿತಕ್ಕೆ ಜಮೀನು ಹಸ್ತಾಂತರ ಮಾಡಬಾರದು ಎಂದು ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.

Leave a Reply

Your email address will not be published.

Back to top button