ಬೆಂಗಳೂರು: ವೈಟ್ ಟಾಪಿಂಗ್ (White Topping) ಕಾಮಗಾರಿ ಹಿನ್ನೆಲೆ ಮುಂದಿನ ಮೂರು ತಿಂಗಳು ಬೆಂಗಳೂರಿನ ಹೃದಯ ಭಾಗ ರೇಸ್ ಕೋರ್ಸ್ ರಸ್ತೆಯ (Race Course Road) ಒಂದು ಭಾಗ ಕ್ಲೋಸ್ ಆಗಲಿದೆ.
ಕಾಮಗಾರಿ ಹಿನ್ನೆಲೆ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ರೇಸ್ ಕೋರ್ಸ್ ಸರ್ಕಲ್‌ನಿಂದ ಹಳೆ ಜೆಡಿಎಸ್ ಆಫೀಸ್ ರಸ್ತೆ ಕ್ಲೋಸ್ ಆಗಲಿದೆ. ಒಂದು ಭಾಗ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ಮತ್ತೊಂದು ಭಾಗ ಕ್ಲೋಸ್ ಆಗಲಿದೆ. ಸಾಮಾನ್ಯವಾಗಿ ಹೆಚ್ಚು ಟ್ರಾಫಿಕ್ ಇರುವ ಪ್ರದೇಶ ಇದಾಗಿದ್ದು, ವೈಟ್ ಟಾಪಿಂಗ್ ಕಾಮಗಾರಿ ಆರಂಭ ಆದರೆ ಟ್ರಾಫಿಕ್ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಿಂದ ಹಿಡಿದು ರಸ್ತೆ ಗುಂಡಿ ಮುಚ್ಚೋಕೂ ಕೋಟ್ಯಂತರ ಹಣ ಲೂಟಿ – ಛಲವಾದಿ
ಚಾಲುಕ್ಯ ಸರ್ಕಲ್, ವಿಧಾನಸೌಧ, ಶಿವಾನಂದ, ಶೇಷಾದ್ರಿಪುರಂ, ಮಲ್ಲೇಶ್ವರಂ ಪ್ರದೇಶಕ್ಕೆ ಸಾಗುವ ಮಾರ್ಗದಲ್ಲಿ ಟ್ರಾಫಿಕ್ ಕಿರಿಕಿರಿಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: `ವಂದೇ ಮಾತರಂ’ 2 ಚರಣಗಳನ್ನಷ್ಟೇ ಹಾಡಲು ನಿರ್ಧಾರ – ಕಾಂಗ್ರೆಸ್ ನಿಲುವು ಖಂಡಿಸಿದ ಬಿಜೆಪಿ

